Wednesday, November 6, 2024

ವಿಶ್ವಕಪ್ ಶೂಟಿಂಗ್: ಬೆಳ್ಳಿ ಗೆದ್ದ ಭಾರತದ ಅಂಜುಮ್

ಬೆಂಗಳೂರು: ಮೆಕ್ಸಿಕೊದ ಗಾಡಲಜಾರಾದಲ್ಲಿ ನಡೆಯುತ್ತಿರುವ  ಶೂಟಿಂಗ್ ವಿಶ್ವಕಪ್‌  ಟೂರ್ನಿಯ ಮಹಿಳೆಯರ 50 ಮೀಟರ್ ರೈಲ್ 3 ಪೊಸಿಷನ್ ವಿಭಾಗದಲ್ಲಿ ಭಾರತದ ಅಂಜುಮ್ ವೌದ್ಗಿಲ್  ಬೆಳ್ಳಿ ಪದಕ ಗೆದ್ದಿದ್ದಾರೆ.
PC: Twitter/ISSF
ವ್ಯತಿರಿಕ್ತ ಹವಾಮಾನದ ನಡುವೆಯೂ ಗುರಿ ತಪ್ಪದ ಅಂಜುಮ್, ೈನಲ್ ಸುತ್ತಿನ ಹಣಾಹಣಿಯಲ್ಲಿ 454.2 ಅಂಕ ಗಳಿಸಿ ದ್ವಿತೀಯ ಸ್ಥಾನಿಯಾಗಿ ಸ್ಪರ್ಧೆ ಕೊನೆಗೊಳಿಸಿದರು. ಅಲ್ಲದೆ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.
ಜೂನಿಯರ್ ವಿಶ್ವ ಚಾಂಪಿಯನ್‌ನಲ್ಲಿ ಈ ಹಿಂದೆ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಚೀನಾದ ರುಜಿಯಾವೊ ಪೀ 455.4 ಅಂಕ ಕಲೆಹಾಕಿ ಚಿನ್ನದ ಪದಕಕ್ಕೆ ಕೊರಳೊಡ್ದಿದ್ದರು. ಈ ಮೂಲಕ ಅಂಜುಮ್ ಕೇವಲ ಒಂದು ಅಂಕದ ಹಿನ್ನಡೆಯೊಂದಿಗೆ ಸ್ವರ್ಣ ಪದಕದಿಂದ ವಂಚಿತರಾದರು. ವಿಶ್ವಕಪ್‌ನಲ್ಲಿ ಅಂಜುಮ್ ಗೆದ್ದ ಮೊದಲ ಪದಕ ಇದಾಗಿದೆ

Related Articles