Sunday, September 8, 2024

ವಿರಾಟ್ ಕೊಹ್ಲಿ ಕೌಂಟಿ ಕ್ರಿಕೆಟ್ ಆಡುತ್ತಿರುವುದು ನಾನ್‌ಸೆನ್ಸ್‌!

ಬೆಂಗಳೂರು: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಮುಂಬರುವ ಇಂಗ್ಲೆಂಡ್ ಪ್ರವಾಸದ ಟೆಸ್ಟ್ ಸರಣಿಗೆ ಸಜ್ಜಾಗುವ ನಿಟ್ಟಿನಲ್ಲಿ ಐಪಿಎಲ್ ಮುಗಿದ ಬೆನ್ನಲ್ಲೇ ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್ ಆಡಲು ತೆರಳಲಿದ್ದಾರೆ.
PC: Twitter/Virat Kohli
ಆ್ಘಾನಿಸ್ತಾನ ವಿರುದ್ಧ ಜೂನ್ 14ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐತಿಹಾಸಿಕ ಟೆಸ್ಟ್ ಪಂದ್ಯವನ್ನು ಬದಿಗೊತ್ತಿ ವಿರಾಟ್ ಕೊಹ್ಲಿ ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್ ಆಡಲು ತೆರಳಲಿದ್ದಾರೆ. 2014ರ ಇಂಗ್ಲೆಂಡ್ ಪ್ರವಾಸದಲ್ಲಿ ಭಾರೀ ವೈಲ್ಯ ಎದುರಿಸಿದ್ದ ವಿರಾಟ್ ಕೊಹ್ಲಿ, ಈ ಬಾರಿಯ ಪ್ರವಾಸದಲ್ಲಿ ಶತಾಯಗತಾಯ ಇಂಗ್ಲೆಂಡ್‌ನ ವೇಗಿಗಳನ್ನು ಬೆಂಡೆತ್ತುವ ಪಣ ತೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಹ್ಲಿ ಕೌಂಟಿ ಕ್ರಿಕೆಟ್‌ನತ್ತ ಮುಖ ಮಾಡಿದ್ದಾರೆ.
ಆದರೆ ಟೀಮ್ ಇಂಡಿಯಾ ನಾಯಕ ಕೌಂಟಿ ಕ್ರಿಕೆಟ್ ಆಡುತ್ತಿರುವುದಕ್ಕೆ ಇಂಗ್ಲೆಂಡ್‌ನ ದಿಗ್ಗಜ ವೇಗದ ಬೌಲರ್ ಬಾಬ್ ವಿಲ್ಲೀಸ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ವಿರಾಟ್ ಕೊಹ್ಲಿ ಕೌಂಟಿ ಕ್ರಿಕೆಟ್ ಆಡುತ್ತಿರುವುದು ನಾನ್‌ಸೆನ್ಸ್ ಎಂದಿದ್ದಾರೆ ಬಾಬ್. ಕೌಂಟಿ ಕ್ರಿಕೆಟ್‌ನಲ್ಲಿ ವಿದೇಶೀ ಆಟಗಾರರಿಗೆ ಆಡಲು ಅವಕಾಶ ಮಾಡಿಕೊಟ್ಟು, ಅವರು ಇಂಗ್ಲೆಂಡ್‌ನಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಯಶಸ್ಸು ಗಳಿಸಲು ನೆರವಾಗುವುದು ಸರಿಯಲ್ಲ ಎಂಬುದು ಬಾಬ್ ವಾದ.

ವಿದೇಶೀ ಆಟಗಾರರಿಗೆ ಕೌಂಟಿ ಕ್ರಿಕೆಟ್ ಆಡಲು ಯಾಕೆ ಅವಕಾಶ ಮಾಡಿಕೊಡುತ್ತಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲಘಿ. ನಮ್ಮ ಟೆಸ್ಟ್ ತಂಡವನ್ನು ಸುಧಾರಿಸಲು ಇರುವ ಏಕೈಕ ದಾರಿ ಎಂದರೆ ಎಷ್ಟು ಸಾಧ್ಯವೋ ಅಷ್ಟು ಯುವ ಆಟಗಾರರಿಗೆ ಕೌಂಟಿ ಕ್ರಿಕೆಟ್‌ನಲ್ಲಿ ಆಡಲು ಅವಕಾಶ ಮಾಡಿಕೊಡುವುದು. ಅದರ ಬದಲಾಗಿ ವಿರಾಟ್ ಕೊಹ್ಲಿ ನೀವು ಕೌಂಟಿ ಕ್ರಿಕೆಟ್‌ನಲ್ಲಿ ಅವಕಾಶ ಮಾಡಿ ಕೊಟ್ಟಿದ್ದೀರಿ. ಅವರು ಇಂಗ್ಲೆಂಡ್ ವಾತಾವರಣವನ್ನು ಚೆನ್ನಾಗಿ ಅರಿತುಕೊಂಡು ಟೆಸ್ಟ್ ಸರಣಿಯಲ್ಲಿ ನಮ್ಮ ವಿರುದ್ಧವೇ ಅಬ್ಬರಿಸಲಿದ್ದಾರೆ.

– ಬಾಬ್ ವಿಲ್ಲೀಸ್, ಇಂಗ್ಲೆಂಡ್‌ನ ದಿಗ್ಗಜ ವೇಗದ ಬೌಲರ್.

1971ರಿಂದ 1984ರ ಅವಧಿಯಲ್ಲಿ ಇಂಗ್ಲೆಂಡ್ ಪರ 90 ಟೆಸ್ಟ್ ಪಂದ್ಯಗಳನ್ನಾಡಿದ್ದ ಬಾಬ್ ವಿಲ್ಲೀಸ್ 325 ವಿಕೆಟ್ ಪಡೆದಿದ್ದರು.

Related Articles