Sunday, May 26, 2024

ವಿಜಯ್ ಹಜಾರೆ ಟ್ರೋಫಿ: ಒಡಿಶಾ ವಿರುದ್ಧ ಮಯಾಂಕ್, ಕರುಣ್ ಶತಕಗಳ ಅಬ್ಬರ

ಬೆಂಗಳೂರು: ಕರ್ನಾಟಕ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಮಯಾಂಕ್ ಅಗರ್ವಾಲ್ ಮತ್ತು ಕರುಣ್ ನಾಯರ್, ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯ ಒಡಿಶಾ ವಿರುದ್ಧದ ಲೀಗ್ ಪಂದ್ಯದಲ್ಲಿ ಭರ್ಜರಿ ಶತಕಗಳನ್ನು ಬಾರಿಸಿದ್ದಾರೆ.

PC: India Today

ನಗರದ ಹೊರವಲಯದಲ್ಲಿರುವ ಆಲೂರಿನ ಕೆಎಸ್‌ಸಿಎ ಕ್ರಿಕೆಟ್ ಮೈದಾನ(1)ರಲ್ಲಿ ಟಾಸ್ ಗೆದ್ದ ಒಡಿಶಾ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್‌ಗೆ ಇಳಿದ ಕರ್ನಾಟಕ ತಂಡಕ್ಕೆ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಮಯಾಂಕ್ ಅಗರ್ವಾಲ್ ಮತ್ತು ಕರುಣ್ ನಾಯರ್ ಮೊದಲ ವಿಕೆಟ್‌ಗೆ 190 ರನ್ ಸೇರಿಸಿ ಭರ್ಜರಿ ಆರಂಭ ಒದಗಿಸಿದರು. ಟೂರ್ನಿಯಲ್ಲಿ 2ನೇ ಶತಕ ಬಾರಿಸಿದ ಮಯಾಂಕ್ ಸ್ಫೋಟಕ ಆಟವಾಡಿ 94 ಎಸೆತಗಳಲ್ಲಿ 10 ಬೌಂಡರಿ ಮತ್ತು 2 ಸಿಕ್ಸರ್‌ಗಳ ನೆರವಿನಿಂದ 102 ರನ್ ಬಾರಿಸಿದರು. ಮತ್ತೊಂದೆಡೆ ಕರುಣ್ ನಾಯರ್ 111 ಎಸೆತಗಳಲ್ಲಿ 12 ಬೌಂಡರಿಗಳನ್ನೊಳಗೊಂಡ 100 ರನ್ ಗಳಿಸಿ ಔಟಾದರು. ಬರೋಡ ವಿರುದ್ಧದ ಪಂದ್ಯದಲ್ಲೂ ಮಯಾಂಕ್ ಅಮೋಘ ಶತಕ ಸಿಡಿಸಿದ್ದರು.

Related Articles