Saturday, July 27, 2024

ವಿಜಯ್ ಹಜಾರೆ ಚಾಂಪಿಯನ್ ಟೀಮ್ ಕರ್ನಾಟಕ ತಂಡಕ್ಕೆ ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ ಸನ್ಮಾನ

ಬೆಂಗಳೂರು: ವಿಜಯ್ ಹಜಾರೆ ಟ್ರೋಫಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿ ಕರುನಾಡಿನ ಕೀರ್ತಿ ಪತಾಕೆ ಹಾರಿಸಿದ ಕರ್ನಾಟಕ ತಂಡವನ್ನು ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಶುಕ್ರವಾರ ಅಭಿನಂದಿಸಿ ಸನ್ಮಾನಿಸಿದೆ.

ರಾಜ್ಯದ ಕ್ರಿಕೆಟ್ ಶಕ್ತಿ ಕೇಂದ್ರ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರದ ಸುಂದರ ಸಂಜೆಯಲ್ಲಿ ಟೀಮ್ ಕರ್ನಾಟಕ ತಂಡದ ಆಟಗಾರರಿಗೆ ಮೈಸೂರು ಪೇಟ ತೊಡಿಸಿ ಶಾಲು, ಹಾರ ಹಾಕಿ ಸನ್ಮಾನಿಸಲಾಯಿತು. ರಾಜ್ಯ ಕ್ರಿಕೆಟ್ ಸಂಸ್ಥೆಯ ಹಂಗಾಮಿ ಅಧ್ಯಕ್ಷ ಸಂಜಯ್ ದೇಸಾಯಿ, ಹಂಗಾಮಿ ಕಾರ್ಯದರ್ಶಿ ಆರ್.ಸುಧಾಕರ್ ಕರ್ನಾಟಕ ತಂಡದ ಆಟಗಾರರನ್ನು ಸನ್ಮಾನಿಸಿದರು.
2017-18ನೇ ಸಾಲಿನ ದೇಶೀಯ ಕ್ರಿಕೆಟ್‌ನಲ್ಲಿ ರಣಜಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ, ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ, ದೇವಧರ್ ಟ್ರೋಫಿ ಹಾಗೂ ಇರಾನಿ ಕಪ್ ಪಂದ್ಯಗಳಲ್ಲಿ ಒಟ್ಟು 2,232 ರನ್ ಗಳಿಸಿ ದಾಖಲೆ ಬರೆದ ಆರಂಭಿಕ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್ ಅವರನ್ನು ಕೆಎಸ್‌ಸಿಎ ವತಿಯಿಂದ ವಿಶೇಷವಾಗಿ ಅಭಿನಂದಿಸಲಾಯಿತು.

ಅಲ್ಲದೆ ಯುವ ಕ್ರಿಕೆಟಿಗರಿಗೆ ಜಾಗ ಬಿಡುವ ಸಲುವಾಗಿ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ ಎಡಗೈ ಮಧ್ಯಮ ವೇಗದ ಬೌಲರ್ ಎಸ್.ಅರವಿಂದ್ ಅವರನ್ನು ರಾಜ್ಯ ಕ್ರಿಕೆಟ್ ಸಂಸ್ಥೆ ಸ್ಮರಣಿಕೆ ನೀಡಿ ಗೌರವಿಸಿತು.

ಅಲ್ಲದೆ ಕೆಎಸ್‌ಸಿಎ ಲೀಗ್ ಟೂರ್ನಿಗಳು, ಕೆಎಸ್‌ಸಿಎ ಟೂರ್ನಿಗಳು, ಬಿಸಿಸಿಐ ಸಂಘಟಿಸುವ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ತೋರಿದ ಆಟಗಾರರು ಹಾಗೂ ಆಟಗಾರ್ತಿಯರನ್ನು ಅಭಿನಂದಿಸಲಾಯಿತು.

 

2017-18ನೇ ಸಾಲಿನ ಕೆಎಸ್‌ಸಿಎ ವಿಶೇಷ ಪ್ರಶಸ್ತಿಗಳು (ಅಂತರ ರಾಜ್ಯ ಟೂರ್ನಿ)
ಮಹಿಳಾ ವಿಭಾಗ
16ರ ವಯೋಮಿತಿ
ಉತ್ತಮ ಬ್ಯಾಟರ್: ಕೃಷಿಕ ರೆಡ್ಡಿ
ಉತ್ತಮ ಬೌಲರ್: ಶ್ರೇಯಾಂಕ ಪಾಟೀಲ್
19ರ ವಯೋಮಿತಿ
ಉತ್ತಮ ಬ್ಯಾಟರ್: ವೃಂದಾ ದಿನೇಶ್
ಉತ್ತಮ ಬೌಲರ್: ಮೋನಿಕಾ ಪಟೇಲ್
23ರ ವಯೋಮಿತಿ
ಉತ್ತಮ ಬ್ಯಾಟರ್: ದಿವ್ಯಾ ಜಿ.
ಉತ್ತಮ ಬೌಲರ್: ಪ್ರತ್ಯೂಷಾ ಸಿ.
23ರ ವಯೋಮಿತಿ ಟಿ20: ದಿವ್ಯಾ ಜಿ.
ರಾಜ್ಯ ಮಹಿಳಾ ತಂಡ (ಏಕದಿನ)
ಉತ್ತಮ ಬ್ಯಾಟರ್: ಕರುಣಾ ಜೈನ್
ಉತ್ತಮ ಬೌಲರ್: ಪ್ರತ್ಯೂಷಾ ಸಿ.
ರಾಜ್ಯ ಮಹಿಳಾ ತಂಡ (ಟಿ20)
ಉತ್ತಮ ಬ್ಯಾಟರ್: ಶುಭಾ ಎಸ್
ಉತ್ತಮ ಬೌಲರ್: ಪ್ರತ್ಯೂಷಾ ಸಿ.
ಪುರುಷರ ವಿಭಾಗ
14ರ ವಯೋಮಿತಿ
ಉತ್ತಮ ಬ್ಯಾಟ್ಸ್‌ಮನ್: ಕರಣ್ ಯು.
ಉತ್ತಮ ಬೌಲರ್: ಪ್ರಿಯಾಲ್ ಸಿಂಗ್
16ರ ವಯೋಮಿತಿ (ವಿಜಯ್ ಮರ್ಚಂಟ್ ಟ್ರೋಫಿ)
ಉತ್ತಮ ಬ್ಯಾಟ್ಸ್‌ಮನ್: ಅಕ್ಷನ್ ರಾವ್
ಉತ್ತಮ ಬೌಲರ್: ಚಿನ್ಮಯ್ ಎನ್ ಎ.
19ರ ವಯೋಮಿತಿ (ವಿನೂ ಮಂಕಡ್ ಟ್ರೋಫಿ)
ಉತ್ತಮ ಬ್ಯಾಟ್ಸ್‌ಮನ್: ದೇವದತ್ತ್ ಪಡಿಕಲ್
ಉತ್ತಮ ಬೌಲರ್: ಶ್ರೇಯಸ್ ಬಿ.ಎಂ.
19ರ ವಯೋಮಿತಿ (ಕೂಚ್ ಬಿಹಾರ್ ಟ್ರೋಫಿ)
ಉತ್ತಮ ಬ್ಯಾಟ್ಸ್‌ಮನ್: ದೇವದತ್ತ್ ಪಡಿಕಲ್
ಉತ್ತಮ ಬೌಲರ್: ಶುಭಾಂಗ್ ಹೆಗ್ಡೆ
23ರ ವಯೋಮಿತಿ (ಸಿ.ಕೆ ನಾಯ್ಡು ಟ್ರೋಫಿ)
ಉತ್ತಮ ಬ್ಯಾಟ್ಸ್‌ಮನ್: ನಿಶ್ಚಲ್ ಡಿ.
ಉತ್ತಮ ಬೌಲರ್: ಪ್ರಸಿದ್ಧ್ ಕೃಷ್ಣ
23ರ ವಯೋಮಿತಿ ಏಕದಿನ ಟೂರ್ನಿ
ಉತ್ತಮ ಬ್ಯಾಟ್ಸ್‌ಮನ್: ನಾಗಾ ಭರತ್
ಉತ್ತಮ ಬೌಲರ್: ಪ್ರತೀಕ್ ಜೈನ್
25ರ ವಯೋಮಿತಿ
ಉತ್ತಮ ಬ್ಯಾಟ್ಸ್‌ಮನ್: ಶಿವಂ ಮಿಶ್ರಾ
ಉತ್ತಮ ಬೌಲರ್: ಸಿಮೋನ್ ಲೂಯಿಸ್
ರಣಜಿ ಟ್ರೋಫಿ
ಉತ್ತಮ ಬ್ಯಾಟ್ಸ್‌ಮನ್: ಮಯಾಂಕ್ ಅಗರ್ವಾಲ್
ಉತ್ತಮ ಬೌಲರ್: ಕೆ.ಗೌತಮ್
ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿ
ಉತ್ತಮ ಬ್ಯಾಟ್ಸ್‌ಮನ್: ಮಯಾಂಕ್ ಅಗರ್ವಾಲ್
ಉತ್ತಮ ಬೌಲರ್: ಪ್ರಸಿದ್ಧ್ ಕೃಷ್ಣ
ಸೈಯದ್ ಮುಷ್ತಾಕ್ ಅಲಿ ಟಿ20
ಉತ್ತಮ ಬ್ಯಾಟ್ಸ್‌ಮನ್: ಕರುಣ್ ನಾಯರ್
ಉತ್ತಮ ಬೌಲರ್: ಎಸ್. ಅರವಿಂದ್

Related Articles