ಕೊಲಂಬೊ: ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಟಿ20 ಸರಣಿಯಲ್ಲಿ ಗುರುವಾರ ಬಾಂಗ್ಲಾದೇಶ ತಂಡವನ್ನು ಸೋಲಿಸಿ ಮೊದಲ ಗೆಲುವು ಕಂಡಿದ್ದ ಟೀಮ್ ಇಂಡಿಯಾದ ಮುಂದಿನ ಪಂದ್ಯ ಸೋಮವಾರ ಶ್ರೀಲಂಕಾ ವಿರುದ್ಧ ನಡೆಯಲಿದೆ.
ಅದಕ್ಕೂ ಮೊದಲು ಸಿಕ್ಕ ವಿರಾಮದ ಸಮಯದಲ್ಲಿ ಟೀಮ್ ಇಂಡಿಯಾ ಆಟಗಾರರು ಎಂಜಾಯ್ ಮಾಡುತ್ತಿದ್ದಾರೆ. ಕನ್ನಡಿಗ ಕೆ.ಎಲ್ ರಾಹುಲ್, ಗಬ್ಬರ್ ಖ್ಯಾತಿಯ ಶಿಖರ್ ಧವನ್ ಮತ್ತು ಸ್ಫೋಟಕ ಬ್ಯಾಟ್ಸ್‌ಮನ್ ಸುರೇಶ್ ರೈನಾ, ಶ್ರೀಲಂಕಾದಲ್ಲಿ ಎಳನೀರು ರುಚಿ ನೋಡಿದ್ದಾರೆ.
ಕೊಲಂಬೊದಲ್ಲಿ ಟೀಮ್ ಇಂಡಿಯಾ ತಂಗಿರುವ ಹೋಟೆಲ್‌ನ ಸ್ವಿಮ್ಮಿಂಗ್ ಪೂಲ್ ಬದಿಯಲ್ಲಿ ರಾಹುಲ್, ಶಿಖರ್ ಧವನ್ ಮತ್ತು ಸುರೇಶ್ ರೈನಾ ಎಂಜಾಯ್ ಮೂಡಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಎಳನೀರಿನ ರುಚಿ ನೋಡಿದ್ದಾರೆ.
ಈ ಕುರಿತ ಚಿತ್ರವನ್ನು ಸುರೇಶ್ ರೈನಾ ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ.
ಮಂಗಳವಾರ ನಡೆದ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 5 ವಿಕೆಟ್‌ಗಳ ಸೋಲು ಕಂಡಿದ್ದ ಭಾರತ, ಗುರುವಾರ ಬಾಂಗ್ಲಾದೇಶ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿತ್ತು. ಟೂರ್ನಿಯಲ್ಲಿ ಎಲ್ಲಾ ತಂಡಗಳು ತಲಾ 4 ಪಂದ್ಯಗಳನ್ನಾಡಲಿದ್ದುಘಿ, ಅಗ್ರ 2 ತಂಡಗಳು ೈನಲ್ ಪ್ರವೇಶಿಸಲಿವೆ.