ಕೋಲ್ಕತ್ತಾ: ಭಾರತ ಕ್ರಿಕೆಟ್ ತಂಡದ ಪ್ರತಿಭಾವಂತ ವೇಗದ ಬೌಲರ್ ಮೊಹಮ್ಮದ್ ಶಮಿ ಅವರ ಬಾಳಲ್ಲಿ ಬಿರುಗಾಳಿ ಎಬ್ಬಿಸಿರುವ ಪತ್ನಿ ಹಸೀನ್ ಜಹಾನ್ ಅವರ ಹಿಂದೆ ದೊಡ್ಡ ಫ್ಲ್ಯಾಷ್ ಬ್ಯಾಕ್ ಇರುವುದು ಹೆಚ್ಚಿನವರಿಗೆ ತಿಳಿದಿಲ್ಲ.
PC: Facebook/Hasin Jahan
* ಹಸೀನ್ ಜಹಾನ್‌ಗೆ ಶಮಿ 2ನೇ ಗಂಡ. 2012ರ ಐಪಿಎಲ್ ವೇಳೆ ಶಮಿ ಅವರನ್ನು ಹಸೀನ್ ಮೊದಲ ಬಾರಿ ಭೇಟಿ ಮಾಡಿದ್ದರು. ನಂತರ 2014ರಲ್ಲಿ ಇವರಿಬ್ಬರ ಮದುವೆ ನಡೆದಿತ್ತು. ಇಬ್ಬರಿಗೂ ಆಯಿರಾ ಎಂಬ ಹೆಸರಿನ ಮಗಳಿದ್ದು, ಈಕೆ 2015ರಲ್ಲಿ ಜನಿಸಿದ್ದಾಳೆ.
PC: Facebook/Hasin Jahan
* ಹಸೀನ್ ಜಹಾನ್ ಅವರ ಮೊದಲ ಗಂಡನ ಹೆಸರು ಎಸ್‌ಕೆ ಶಫಿಯುದ್ದೀನ್. ಈತ ಕೋಲ್ಕತ್ತಾ ನಿವಾಸಿ. ಶಫಿಯುದ್ದೀನ್ ಹೇಳುವ ಪ್ರಕಾರ ಇವರಿಬ್ಬರದ್ದು ಪ್ರೇಮ ವಿವಾಹ. ಹಸೀನ್ 10ನೇ ತರಗತಿಯಲ್ಲಿ ಓದುತ್ತಿದ್ದಾಗ ಶಫಿಯುದ್ದೀನ್‌ಗೆ ಲವ್ ಪ್ರೊಪೋಸ್ ಮಾಡಿದ್ದರಂತೆ.
PC: ABP News
* 2010ರಲ್ಲಿ ಹಸೀನ್ ಜಹಾನ್ ಮತ್ತು ಶಫಿಯುದ್ದೀನ್ ನಡುವೆ ಡೈವೋರ್ಸ್ ಆಗಿತ್ತು. ಇವರಿಬ್ಬರಿಗೆ ಇಬ್ಬರು ಹೆಣ್ಣು ಮಕ್ಕಳು. ಒಬ್ಬಳಿಗೆ 14 ವರ್ಷ, ಮತ್ತೊಬ್ಬಳಿಗೆ 10 ವರ್ಷ. ಇಬ್ಬರೂ ಮಕ್ಕಳೂ ಈಗ ತಂದೆ ಶಫಿಯುದ್ದೀನ್ ಜೊತೆ ವಾಸಿಸುತ್ತಿದ್ದಾರೆ. ಶಫಿಯುದ್ದೀನ್ ಹೇಳುವ ಪ್ರಕಾರ ವಾರಕ್ಕೆ 2-3 ಬಾರಿ ಮಕ್ಕಳ ಜೊತೆ ಮಾತನಾಡುತ್ತಾಳಂತೆ.
PC: Facebook/Hasin Jahan
* ಹಸೀನ್ ಜಹಾನ್ ಸಿನಿಮಾ ಕ್ಷೇತ್ರದತ್ತ ಒಲವು ಹೊಂದಿದ್ದರು. ಅಲ್ಲದೆ ಮಾಡೆಲ್ ಕೂಡ ಆಗಿದ್ದರು. 2012ರ ಐಪಿಎಲ್ ಟೂರ್ನಿಯ ಸಂದರ್ಭದಲ್ಲಿ ಮೊಹಮ್ಮದ್ ಶಮಿ ಅವರನ್ನು ಕೋಲ್ಕತ್ತಾದಲ್ಲಿ ಮೊದಲ ಬಾರಿ ಭೇಟಿ ಮಾಡಿದ್ದರು. ನಂತರ ಇಬ್ಬರ ನಡುವೆ ಸ್ನೇಹ ಬೆಳೆದು, ಪ್ರೀತಿಸಲು ಶುರು ಮಾಡಿದ್ದರು.