Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಮೊಹಮ್ಮದ್ ಶಮಿಗೆ ಹೊಸ ಸಂಕಷ್ಟ… ಪತಿಯನ್ನು ಮ್ಯಾಚ್ ಫಿಕ್ಸರ್ ಎಂದು ಕರೆದ ಪತ್ನಿ!

ಕೋಲ್ಕತಾ: ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರಿಗೆ ಹೊಸ ಸಂಕಷ್ಟ ಎದುರಾಗಿದೆ. ಶಮಿ ಮ್ಯಾಚ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದರು ಎಂದು ಅವರ ಪತ್ನಿ ಹಸೀನ್ ಜಹಾನ್ ಗಂಭೀರ ಆರೋಪ ಮಾಡಿದ್ದಾರೆ.
ಮೊಹಮ್ಮದ್ ಶಮಿ ವಿವಾಹೇತರ ಸಂಬಂಧಗಳನ್ನು ಹೊಂದಿದ್ದಾರೆ ಎಂದು ಎರಡು ದಿನಗಳ ಹಿಂದಷ್ಟೇ ಆರೋಪಿಸಿದ್ದ ಹಸೀನ್, ಇದೀಗ ಮತ್ತೊಂದು ಆಘಾತಕಾರಿ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.
ಕೋಲ್ಕತಾದ ‘ಎಬಿಪಿ ನ್ಯೂಸ್’ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಶಮಿ ವಿರುದ್ಧ ಹಸೀನ್‌ಸ ಪತಿಯ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡಿದ್ದಾರೆ.
PC: Twitter/Mohammed Shami
‘‘ಶಮಿ ನನಗೆ ಮೋಸ ಮಾಡಿದರೆ, ದೇಶಕ್ಕೂ ಮೋಸ ಮಾಡಲು ಹೇಸುವವರಲ್ಲ. ಅವರು ಅಲಿಸ್ಬಾ ಎಂಬ ಪಾಕಿಸ್ತಾನಿ ಹುಡುಗಿಯಿಂದ ಹಣ ಪಡೆದಿದ್ದಕ್ಕೆ ನನ್ನ ಬಳಿ ಸಾಕ್ಷಿಯಿದೆ. ಇಂಗ್ಲೆಂಡ್ ಮೂಲದ ಮೊಹಮ್ಮದ್ ಭಾಯ್ ಎಂಬವರ ಸೂಚನೆಯಂತೆ ಈ ಹಣವನ್ನು ಸ್ವೀಕರಿಸಲು ಶಮಿ ಒಪ್ಪಿದ್ದರು. ದುಡ್ಡು ಪಡೆದಿರುವುದಕ್ಕೆ ಶಮಿ ಸ್ಪಷ್ಟನೆ ನೀಡಬೇಕು’’ ಎಂದು ಹಸೀನ್ ಆಗ್ರಹಿಸಿದ್ದಾರೆ.
ಮಾಡೆಲ್ ಆಗಿದ್ದ ಹಸೀನ್ ಜಹಾನ್ 2012ರ ಐಪಿಎಲ್ ಟೂರ್ನಿಯ ಸಂದರ್ಭದಲ್ಲಿ ಶಮಿ ಅವರನ್ನು ಮೊದಲ ಬಾರಿ ಭೇಟಿ ಮಾಡಿದ್ದರು. ನಂತರ 2014ರಲ್ಲಿ ಇವರ ಮದುವೆ ನಡೆದಿತ್ತು. ವಿವಾಹದ ನಂತರವೂ ಶಮಿ ಕನಿಷ್ಠ ಐವರು ಮಹಿಳೆಯರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರು ಎಂದು ಹಸೀನ್ ಆರೋಪಿಸಿದ್ದರು. ಅಲ್ಲದೆ ಮನೆಯಲ್ಲಿ ಶಮಿ ಮತ್ತು ಅವರ ಕುಟುಂಬ ಸದಸ್ಯರು ನನಗೆ ದೈಹಿಕ ಹಿಂಸೆ ನೀಡಿದ್ದಾರೆ ಎಂದು ಆರೋಪ ಮಾಡಿದ್ದರು.

administrator

Leave a Reply