ಮೈದಾನದಲ್ಲಿ ಪತ್ನಿಯನ್ನು ನಿಂದಿಸಿದ ಡಿ’ಕಾಕ್ ವಿರುದ್ಧ ಸಿಡಿದೆದ್ದ ಡೇವಿಡ್ ವಾರ್ನರ್

0
421
PC: Tiwtter/Dravid
ಡರ್ಬಾನ್: ಆತಿಥೇಯ ದಕ್ಷಿಣ ಆಫ್ರಿಕಾ ಮತ್ತು ಪ್ರವಾಸಿ ಆಸ್ಟ್ರೇಲಿಯಾ ತಂಡಗಳ ನಡುವಿನ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಆಸೀಸ್‌ನ ಉಪನಾಯಕ ಡೇವಿಡ್ ವಾರ್ನರ್ ಹಾಗೂ ಹರಿಣಗಳ ಪಡೆಯ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ’ಕಾಕ್ ಅವರ ಮಧ್ಯೆ ಜಟಾಪಟಿ ನಡೆದಿದೆ.
PC: Tiwtter
ಪಂದ್ಯದ 4ನೇ ದಿನದಾಟದ ಕ್ವಿಂಟನ್ ಡಿ’ಕಾಕ್ ಮತ್ತು ಆಸ್ಟ್ರೇಲಿಯಾ ತಂಡದ ಉಪನಾಯಕ ಡೇವಿಡ್ ವಾರ್ನರ್ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಈ ಸಂದರ್ಭದಲ್ಲಿ ಡಿ’ಕಾಕ್ ತಮ್ಮ ಪತ್ನಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ವಾರ್ನರ್ ಆರೋಪಿಸಿದ್ದಾರೆ.
ಮೈದಾನದ ಜಟಾಪಟಿ ಅಲ್ಲಿಗೇ ನಿಂತಿಲ್ಲ. ಈ ಜಗಳ ಡ್ರೆಸ್ಸಿಂಗ್ ರೂಮ್‌ನವರೆಗೂ ಬಂದಿದೆ. ದಿನದಾಟದ ಚಹಾ ವಿರಾಮದಲ್ಲಿ ಡ್ರೆಸ್ಸಿಂಗ್ ರೂಮ್‌ಗೆ ಮರಳುತ್ತಿದ್ದಾಗ ಮೆಟ್ಟಿಲುಗಳ ಬಳಿ ಡಿ’ಕಾಕ್ ವಿರುದ್ಧ ವಾರ್ನರ್ ಹಲ್ಲೆಗೆ ಮುಂದಾಗಿದ್ದಾರೆ. ಕೂಡಲೇ ಮಧ್ಯ ಪ್ರವೇಶಿಸಿದ ಆಸ್ಟ್ರೇಲಿಯಾ ತಂಡದ ಆಟಗಾರ ಉಸ್ಮಾನ್ ಖವಾಜ, ಕೋಪೋದ್ರಿಕ್ತರಾಗಿದ್ದ ವಾರ್ನರ್ ಅವರನ್ನು ಸಮಾಧಾನ ಪಡಿಸಲು ಯತ್ನಿಸಿದ್ದಾರೆ.
ನಂತರ ಆಸ್ಟ್ರೇಲಿಯಾ ತಂಡದ ಸಹ ಆಟಗಾರರು ವಾರ್ನರ್ ಅವರನ್ನು ಡ್ರೆಸ್ಸಿಂಗ್ ರೂಮ್‌ಗೆ ಕರೆದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಾರೆ. ವಾರ್ನರ್ ಮತ್ತು ಡಿ’ಕಾಕ್ ನಡುವಿನ ಈ ಜಟಾಪಟಿಯ ವೀಡಿಯೊ, ಅಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಲ್ಲದೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.