Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಮುದ್ದಿನ ಮಡದಿ, ಪ್ರೀತಿಯ ಪುತ್ರಿ, ಅಚ್ಚುಮೆಚ್ಚಿನ ನಾಯಿ… ಬಿಡುವಿದ್ದರೆ ಧೋನಿಗೆ ಇಷ್ಟೇ ಸಾಕು!

ರಾಂಚಿ: ಟೀಮ್ ಇಂಡಿಯಾದ ಮಾಜಿ ನಾಯಕ, ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್‌ನಿಂದ ಬಿಡುವು ಪಡೆದಿದ್ದಾರೆ. ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಟಿ20 ಸರಣಿಯಿಂದ ಹೊರಗುಳಿದಿರುವ ಧೋನಿ, ಸಿಕ್ಕ ವಿರಾಮದ ಸಮಯವನ್ನು ಮಗಳು ಜೀವಾ ಹಾಗೂ ಪತ್ನಿ ಸಾಕ್ಷಿ ಜೊತೆ ಕಳೆಯುತ್ತಿದ್ದಾರೆ.

PC: Instagram/Dhoni

ಮುದ್ದಿನ ಮಡದಿ, ಪ್ರೀತಿಯ ಪುತ್ರಿ ಹಾಗೂ ಅಚ್ಚುಮೆಚ್ಚಿನ ನಾಯಿಗಳ ಜೊತೆ ಧೋನಿ ಸಮಯ ಕಳೆಯುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೀಡಿಯೊವನ್ನು ಧೋನಿ ತಮ್ಮ ಇನ್ಸ್‌ಟಾಗ್ರಾಂ ಖಾತೆಯಲ್ಲಿ ಪ್ರಕಟಿಸಿದ್ದಾರೆ.
ಜಾರ್ಖಂಡ್‌ನ ರಾಂಚಿಯಲ್ಲಿರುವ ತಮ್ಮ ಮನೆಯ ಹೊರಗಿನ ಹುಲ್ಲು ಹಾಸಿನ ಮೇಲೆ ಕುಳಿತಿರುವ ಧೋನಿ, ಕುಟುಂಬ ಸದಸ್ಯರೊಂದಿಗೆ ಹಾಯಾಗಿ ಕಾಲ ಕಳೆಯುತ್ತಿರುವ ಚಿತ್ರಗಳು ಮನಸ್ಸಿಗೆ ಮುದ ನೀಡುವಂತಿವೆ.

ಅಲ್ಲದೆ ತಮ್ಮ ನಾಲ್ಕು ನಾಯಿಗಳೊಂದಿಗೆ ಧೋನಿ ಅವರ ಆಟವೂ ತುಂಬಾ ಮಜಾವಾಗಿದೆ. ಚೆಂಡೊಂದನ್ನು ನಾಯಿಗಳತ್ತ ಎಸೆಯುವ ಧೋನಿ, ಅವುಗಳನ್ನು ಕ್ಯಾಚ್ ಹಿಡಿಯುವಂತೆ ನಾಯಿಗಳಿಗೆ ಸೂಚಿಸುತ್ತಾರೆ. ತಮ್ಮ ಮಾಲೀಕನ ಮಾತನ್ನು ಚಾಚೂ ತಪ್ಪದೆ ಪಾಲಿಸುವ ನಾಯಿಗಳು ಕ್ಯಾಚ್ ಹಿಡಿದ ಚೆಂಡನ್ನು ಮತ್ತೆ ತಮ್ಮ ಬಾಸ್‌ಗೆ ತಂದು ಕೊಡುವ ದೃಶ್ಯಗಳು ಈ ವೀಡಿಯೊದಲ್ಲಿವೆ.

ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಟಿ20 ಸರಣಿಗೆ ವಿರಾಟ್ ಕೊಹ್ಲಿ, ಎಂ.ಎಸ್ ಧೋನಿ ಸಹಿತ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಕೆಲವೇ ದಿನಗಳಲ್ಲಿ ಐಪಿಎಲ್ ಟೂರ್ನಿ ಆರಂಭವಾಗಲಿದ್ದು, ಧೋನಿ ಮತ್ತೆ 50 ದಿನಗಳ ಕಾಲ ಕ್ರಿಕೆಟ್ ಮೈದಾನದಲ್ಲಿ ಬ್ಯುಸಿಯಾಗಲಿದ್ದಾರೆ. ಎರಡು ವರ್ಷಗಳ ಅಮಾನತಿನ ಶಿಕ್ಷೆಯನ್ನು ಮುಗಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎಂ.ಎಸ್ ಧೋನಿ ಮತ್ತೆ ಮುನ್ನಡೆಸಲಿದ್ದು, ಗತವೈಭವ ಮೆರೆಯುವ ವಿಶ್ವಾಸದಲ್ಲಿದ್ದಾರೆ.


administrator