ಬೂಮ್ ಬೂಮ್ ಬುಮ್ರಾಗೆ ಕ್ಲೀನ್‌ಬೌಲ್ಡಾದ ತೆಲುಗು ನಟಿ!

0
364
PC: Twitter/Jaspreet Bumrah

ಬೆಂಗಳೂರು: ತಮ್ಮ ಖತರ್ನಾಕ್ ಯಾರ್ಕರ್‌ಗಳಿಂದ ಘಟಾನುಘಟಿ ಬ್ಯಾಟ್ಸ್‌ಮನ್‌ಗಳನ್ನು ಬೆಚ್ಚಿ ಬೀಳಿಸಿ ಕ್ಲೀನ್ ಬೌಲ್ಡ್ ಮಾಡಿರುವ ಟೀಮ್ ಇಂಡಿಯಾದ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಅವರ ಯಾರ್ಕರ್‌ಗೆ ಇದೀಗ ನಟಿಯೊಬ್ಬರು ಕ್ಲೀನ್ ಬೌಲ್ಡಾಗಿದ್ದಾರೆ.


ಹೌದು. ಕೆಲ ಹಿಂದಿ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿರುವ ರಾಶಿ ಖನ್ನಾ ಎಂಬ ನಟಿ, ವಿರಾಟ್ ಕೊಹ್ಲಿ ಬಳಗದ ಖತರ್ನಾಕ್ ವೇಗಿ ಬುಮ್ರಾ ಅವರಿಗೆ ಕ್ಲೀನ್ ಬೌಲ್ಡಾಗಿದ್ದು, ಇದನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ.
ಯಾರ್ಕರ್ ಸ್ಪೆಷಲಿಸ್ಟ್, ಕರಾರುವಾಕ್ ಬೌಲರ್ ಜಸ್‌ಪ್ರೀತ್ ಬುಮ್ರಾ ತಮ್ಮ ಮನಸ್ಸು ಕದ್ದಿದ್ದಾರೆ ಎಂದು ಹೇಳಿಕೊಂಡಿರುವ ರಾಶಿ ಖನ್ನಾ, ಜಸ್‌ಪ್ರೀತ್ ಬುಮ್ರಾ ಅವರಿಗಾಗಿಯೇ ಭಾರತ ತಂಡದ ಪಂದ್ಯಗಳನ್ನು ನೋಡುತ್ತಿರುವುದಾಗಿ ಹೇಳಿದ್ದಾರೆ. ರಾಶಿ ಖನ್ನಾ ಅವರ ಈ ಸನ್ಸೇಶನಲ್ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ರಾಶಿ ಖನ್ನಾ ಅವರ ಈ ಪ್ರೇಮ ನಿವೇದನೆಗೆ ಜಸ್‌ಪ್ರೀತ್ ಬುಮ್ರಾ ಅವರಿಂದ ಇನ್ನೂ ಪ್ರತಿಕ್ರಿಯೆ ಬಂದಿಲ್ಲ. ಸದ್ಯ ಬುಮ್ರಾ ದಕ್ಷಿಣ ಆಫ್ರಿಕಾದಲ್ಲಿ ಏಕದಿನ ಸರಣಿಯನ್ನಾಡುತ್ತಿದ್ದಾರೆ.