Saturday, September 30, 2023

ಬಿಡಬ್ಲ್ಯುಎಫ್ Ranking: ಟಾಪ್-10ನಿಂದ ಸೈನಾ ನೆಹ್ವಾಲ್ ಔಟ್

ಬೆಂಗಳೂರು: ಭಾರತದ ಸ್ಟಾರ್ ಶಟ್ಲರ್ ಹಾಗೂ ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್, ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್(ಬಿಡಬ್ಲ್ಯುಎಫ್) ಗುರುವಾರ ಪ್ರಕಟಿಸಿರುವ ಮಹಿಳಾ ಸಿಂಗಲ್ಸ್ ರ್ಯಾಂಕಿಂಗ್‌ನಲ್ಲಿ ಅಗ್ರ 10ರಿಂದ ಹೊರ ಬಿದ್ದಿದ್ದಾರೆ.

PC: Twitter/Saina Nehwal

27 ವರ್ಷದ ಅನುಭವಿ ಆಟಗಾರ್ತಿ ಸೈನಾ ನೂತನ ರ್ಯಾಂಕಿಂಗ್‌ನಲ್ಲಿ 11ನೇ ಸ್ಥಾನಕ್ಕೆ ಕುಸಿದಿದ್ದಾರೆ. ಕಳೆದ ವರ್ಷ ಗ್ಲಾಸ್ಗೊದಲ್ಲಿ ನಡೆದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಸೈನಾ ನೆಹ್ವಾಲ್ ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದರು. ಗಾಯದಿಂದ ಚೇತರಿಸಿಕೊಂಡ ನಂತರ ಉತ್ತಮ ಲಯದಲ್ಲಿದ್ದ ಸೈನಾ, ಇತ್ತೀಚೆಗಷ್ಟೇ ಇಂಡೋನೇಷ್ಯಾ ಮಾಸ್ಟರ್ಸ್ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್ ತಲುಪಿದ್ದರು. ಆದರೆ ಫೈನಲ್‌ನಲ್ಲಿ ಚೈನೀಸ್ ತೈಪೆಯ ತಾಯ್ ಜು ಯಿಂಗ್ ವಿರುದ್ಧ ಸೋತು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದರು.

Related Articles