ಬಿಎಂಡಬ್ಲ್ಯು ಅಂತರಾಷ್ಟ್ರೀಯ ಗಾಲ್ಫ್ ಗೆ ಚಾಲನೆ

0
325

ಬೆಂಗಳೂರು: ಪ್ರತಿಷ್ಠಿತ ಬಿಎಂಡಬ್ಲ್ಯುಅಂತರಾಷ್ಟ್ರೀಯ ಗಾಲ್ಫ್ ಚಾಂಪಿಯನ್‌ಷಿಪ್ ಗೆ ಬೆಂಗಳೂರಿನಲ್ಲಿ ಚಾಲನೆ ಸಿಕ್ಕಿತು.ಇದು ಬಿಎಂಡಬ್ಲ್ಯುನ ಮೂರನೇ ಆವೃತ್ತಿ ಆಗಿದೆ.


ಜಗತ್ತಿನ 50 ರಾಷ್ಟ್ರಗಳ ಸುಮಾರು 1,00,000 ಹವ್ಯಾಸಿ ಗಾಲ್ಫರ್ ಗಳು 800 ಕ್ಕೂ ಹೆಚ್ಚು ಟೂರ್ನಿಗಳನ್ನು ಜಗತ್ತಿನಾದ್ಯಂತ ಆಡಲಿದ್ದಾರೆ. ಇದು ಆಹ್ವಾನಿತ ಗಾಲ್ಫರ್ ಗಳಿಗೆ ಮಾತ್ರ ಸ್ಪರ್ಧಿಸಲು ಅವಕಾಶ ಇರುವ ಟೂರ್ನಿಯಾಗಿದೆ. ಮಾನ್ಯತೆ ಪಡೆದ ಗಾಲ್ಫ್ ಕ್ಲಬ್ ಗಳ ಸದಸ್ಯರಿಗೆ ಮಾತ್ರ ಸೀಮಿತವಾಗಿರುತ್ತದೆ.
ಭಾರತದಲ್ಲಿ ನಡೆಯುವ ಅರ್ಹತಾ ಸುತ್ತಿನಲ್ಲಿ ಜಯ ಗಳಿಸಿದವರು ರಾಷ್ಟ್ರೀಯ ಫೈನಲ್ ಗೆ ಅರ್ಹತೆ ಪಡೆಯುತ್ತಾರೆ. ರಾಷ್ಟ್ರೀಯ ಮಟ್ಟದಲ್ಲಿ ವಿಜೇತರಾದವರು ಜಾಗತಿಕ ಫೈನಲ್ ಗೆ ಅರ್ಹತೆ ಪಡೆಯುತ್ತಾರೆ.
“ಬಿಎಂಡಬ್ಲ್ಯು ಅನೇಕ ವಿಷಯಗಳಲ್ಲಿ ಪ್ರತಿಷ್ಠಿತ ಟೂರ್ನಿ ಎನಿಸಿದೆ. ಭಾರತದಲ್ಲಿ ನಡೆಯುವ ಅತ್ಯಂತ ಪ್ರತಿಷ್ಠಿತ ಟೂರ್ನಿಗಳಲ್ಲಿ ಬಿಎಂಡಬ್ಲ್ಯು ಒಂದು. ಬಿಎಂಡಬ್ಲ್ಯು ಗಾಲ್ಫ್ ಆಡುವ ತನ್ನ ಗ್ರಾಹಕರಿಗೆ ಉತ್ತಮ ಅವಕಾಶ ಕಲ್ಪಿಸುತ್ತಿದೆ. ಬೆಂಗಳೂರಿನಿಂದ ಹೆಚ್ಚಿನ ಪ್ರತಿಭೆಗಳಿಗೆ ಅವಕಾಶ ಸಿಗಲಿ ಎಂದು ಹಾರೈಸುತ್ತೇನೆ” ಎಂದು ಭಾರತದಲ್ಲಿರುವ ಬಿಎಂಡಬ್ಲ್ಯು ಅಧ್ಯಕ್ಷ ವಿಕ್ರಂ ಪವ್ಹಾ ಹೇಳಿದರು.
ಭಾರತದಲ್ಲಿರುವ ಬಿಎಂಡಬ್ಲ್ಯು ಡೀಲರ್ ಗಳು ದೇಶದಲ್ಲಿರುವ ಬಿಎಂಡಬ್ಲ್ಯು ಗ್ರಾಹಕರಿಗೆ ಅವಕಾಶವನ್ನು ನೀಡುತ್ತದೆ. ಟೂರ್ನಿ ಸಂಬಂಧಪಟ್ಟ ಗಾಲ್ಫ್ ಕ್ಲಬ್ ಗಳ ನಿಯಮದಂತೆ ನಡೆಯುತ್ತದೆ.
ಈ ಬಾರಿಯ ಟೂರ್ನಿ ಮೂರು ವಿಭಾಗಗಳಲ್ಲಿ ನಡೆಯುತ್ತದೆ. 1. ಹ್ಯಾಂಡಿಕ್ಯಾಪ್ಸ್ 12 ರವರೆಗೆ.
2. ಹ್ಯಾಂಡಿಕ್ಯಾಪ್ಸ್ 12ರಿಂದ 28.
3. ಮಹಿಳಾ ವಿಭಾಗ: ಹ್ಯಾಂಡಿಕ್ಯಾಪ್ 28ರವರೆಗೆ.

ಬೆಂಗಳೂರು ವಿಭಾಗದ ಮೊದಲ ದಿನದ ವಿಜೇತರು
ಪರಿಷತ್ತಿನ ವಿಭಾಗ 1. ಎಂ.ಕೆ. ಸತ್ಯಪ್ರಸಾದ್.
2. ಸಂಜಯ್ ಸಿಂಗ್.
ಎರಡನೇ ದಿನದ ವಿಜೇತರು.
1. ಎನ್.ಕೆ. ಲೆಂಕಾ.
2. ಸೋಮಶೇಖರ್ ಎಂ.
ಮಹಿಳಾ ವಿಭಾಗ: ಮಾಧವಿ ಮಂಥಾನಿ.