Friday, June 14, 2024

ಫೆಡರೇಷನ್ ಕಪ್ ಕಬಡ್ಡಿ ಟೂರ್ನಿಗೆ ಮುಂಬೈನಲ್ಲಿ ಚಾಲನೆ

ಮುಂಬೈ: ಪ್ರೊ ಕಬಡ್ಡಿ ಲೀಗ್‌ನ ಸ್ಟಾರ್ ಆಟಗಾರರು ಮತ್ತೊಮ್ಮೆ ಅಖಾಡಕ್ಕಿಳಿದಿದ್ದಾರೆ. ಖ್ಯಾತ ಆಟಗಾರರು ಭಾಗವಹಿಸುತ್ತಿರುವ ಫೆಡರೇಷನ್ ಕಪ್ ಕಬಡ್ಡಿ ಟೂರ್ನಿಗೆ ಮುಂಬೈ ಉಪನಗರದ ಗೋರೆಗಾಂವ್‌ನಲ್ಲಿ ಶುಕ್ರವಾರ ಚಾಲವೆ ಸಿಕ್ಕಿದೆ. ಮುಂಬೈ ಉಪನಗರ ಕಬಡ್ಡಿ ಸಂಘಟನಾ ಆಶ್ರಯದಲ್ಲಿ ಈ ಕಬಡ್ಡಿ ಟೂರ್ನಿ ನಡೆಯುತ್ತಿದೆ.
ಫೆಡರೇಷನ್ ಕಪ್ ಟೂರ್ನಿಯ ಪುರುಷರ ವಿಭಾಗದಲ್ಲಿ ಇತ್ತೀಚೆಗಷ್ಟೇ ರಾಷ್ಟ್ರೀಯ ಚಾಂಪಿಯನ್‌ಷಿಪ್ ಮುಡಿಗೇರಿಸಿಕೊಂಡ ಕನ್ನಡಿಗ ರಿಷಾಂಕ್ ದೇವಾಡಿಗ ನಾಯಕತ್ವದ ಮಹಾರಾಷ್ಟ್ರ, ಕರ್ನಾಟಕ, ಹರ್ಯಾಣ, ಸರ್ವಿಸಸ್, ಉತ್ತರ ಪ್ರದೇಶ, ಭಾರತೀಯ ರೈಲ್ವೆ, ರಾಜಸ್ಥಾನ ಮತ್ತು ಉತ್ತರಾಖಂಡ್ ತಂಡಗಳು ಪಾಲ್ಗೊಂಡಿವೆ.
ಮಹಿಳಾ ವಿಭಾಗದಲ್ಲಿ ಹಿಮಾಚಲ ಪ್ರದೇಶ, ಭಾರತೀಯ ರೈಲ್ವೆ, ಉತ್ತರ ಪ್ರದೇಶ, ಕೇರಳ, ಪಂಜಾಬ್, ಹರ್ಯಾಣ, ಛತ್ತೀಸ್‌ಗಢ ಮತ್ತು ಮಹಾರಾಷ್ಟ್ರ ತಂಡಗಳು ಅಖಾಡದಲ್ಲಿವೆ.

Related Articles