Sunday, May 26, 2024

ಫಾರ್ಮುಲಾ-1 ಡ್ರೈವರ್ ಲೂಯಿಸ್ ಹ್ಯಾಮಿಲ್ಟನ್ ಜೊತೆ ದುಬೈನಲ್ಲಿ ಕಾಣಿಸಿಕೊಂಡ ಪ್ರಿಯಾಂಕಾ ಚೋಪ್ರಾ!

ದುಬೈ: ಖ್ಯಾತ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ದೇಶದ ಹೆಸರಾಂತ ಸಿನಿಮಾ ತಾರೆಗಳಲ್ಲೊಬ್ಬರು. ಹಿಂದಿನ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಪ್ರತಿಭಾನ್ವಿತ ನಟಿ ಪ್ರಿಯಾಂಕಾ, ಮಾಜಿ ಮಿಸ್ ವರ್ಲ್ಡ್ ಕೂಡ ಹೌದು. ದೇಶದ ಖ್ಯಾತ ಸೆಲೆಬ್ರಿಟಿಗಳಲ್ಲಿ ಒಬ್ಬರಾಗಿರುವ ಪ್ರಿಯಾಂಕಾ ಚೋಪ್ರಾ, ಇತ್ತೀಚೆಗಷ್ಟೇ ದುಬೈನಲ್ಲಿ ಬ್ರಿಟನ್‌ನ ವಿಶ್ವವಿಖ್ಯಾತ ಫಾರ್ಮುಲಾ-1 ಡ್ರೈವರ್ ಲೂಯಿಸ್ ಹ್ಯಾಮಿಲ್ಟನ್ ಅವರೊಂದಿಗೆ ಕಾಣಿಸಿಕೊಂಡು ಸುದ್ದಿಯಾಗಿದ್ದಾರೆ.

PC: Instagram/Priyanka Chopra

ದುಬೈನಲ್ಲಿ ನಾಲ್ಕು ದಿನಗಳ ಹಿಂದೆ ನಡೆದ ಎಜುಕೇಶನ್ ಸಮ್ಮಿತ್ ಕಾರ್ಯಕ್ರಮಕ್ಕೆ ವಿಶ್ವದ ಹಲವಾರು ದಿಗ್ಗಜರು ಬಂದಿದ್ದರು. ಅಲ್ಲಿ ಹ್ಯಾಮಿಲ್ಟನ್ ಅವರನ್ನು ಭೇಟಿ ಮಾಡಿರುವ ಪ್ರಿಯಾಂಕಾ ಚೋಪ್ರಾ, ಹ್ಯಾಮಿಲ್ಟನ್ ಅವರೊಂದಿಗೆ ಫೋಟೊ ಕೂಡ ಕ್ಲಿಕ್ಕಿಸಿಕೊಂಡಿದ್ದಾರೆ. ಅಲ್ಲದೆ ಅದನ್ನು ತಮ್ಮ ಇನ್ಸ್‌ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಗ್ಲೋಬಲ್ ಎಜುಕೇಶನ್ ಮತ್ತು ಸ್ಕಿಲ್ ಫೋರಂನಲ್ಲಿ ಶಿಕ್ಷಣದ ಬಗ್ಗೆ ಮಾತನಾಡಲು ಗಣ್ಯರನ್ನು ಆಹ್ವಾನಿಸಲಾಗಿತ್ತು. ಈ ಗಣ್ಯರ ಪಟ್ಟಿಯಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ಲೂಯಿಸ್ ಹ್ಯಾಮಿಲ್ಟನ್ ಕೂಡ ಸೇರಿದ್ದರು.

Related Articles