Thursday, September 12, 2024

ಪತ್ನಿ ಆರೋಪಗಳಿಂದ ಬೇಸತ್ತ ಶಮಿ; ಮಗಳನ್ನು ನೆನೆದು ಗಳಗಳನೆ ಅತ್ತ ಟೀಮ್ ಇಂಡಿಯಾ ವೇಗಿ

ಕೋಲ್ಕತ್ತಾ: ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರ ವೈಯಕ್ತಿಕ ಬದುಕಲ್ಲಿ ಎದ್ದಿರುವ ಬಿರುಗಾಳಿಗೆ ಅವರ ಕ್ರಿಕೆಟ್ ಜೀವನವೇ ಕೊಚ್ಚಿ ಹೋಗುವ ಸಾಧ್ಯತೆಗಳು ದಟ್ಟವಾಗಿವೆ.

PC: Twitter/ABP News

ಶಮಿ ಅವರ ವಿರುದ್ಧ ವಿವಾಹೇತರ ಸಂಬಂಧಗಳ ಆರೋಪ ಮಾಡಿದ್ದ ಪತ್ನಿ ಹಸೀನ್ ಜಹಾನ್, ಇದೀಗ ಕೋಲ್ಕತ್ತಾ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ, ಕಿರುಕುಳ, ದೌರ್ಜನ್ಯಗಳ ಕೇಸ್ ದಾಖಲಿಸಿದ್ದಾರೆ. ಅಲ್ಲದೆ ಶಮಿ ಅವರ ಸಹೋದರನ ವಿರುದ್ಧ ಅತ್ಯಾಚಾರದ ಆರೋಪವನ್ನೂ ಮಾಡಿದ್ದಾರೆ. ಇವೆಲ್ಲ ಕೇಸ್‌ಗಳ ಬಗ್ಗೆ ಪೊಲೀಸರು ಎಫ್‌ಐಆರ್ ಕೂಡ ದಾಖಲಿಸಿದ್ದಾರೆ.
ಪತ್ನಿ ಮಾಡಿರುವ ಎಲ್ಲಾ ಆರೋಪಗಳನ್ನು ಅಲ್ಲಗಳೆದಿರುವ ಶಮಿ ಇದೀಗ, ಎಬಿಪಿ ನ್ಯೂಸ್ ವಾಹಿನಿಯ ಸಂದರ್ಶನದ ವೇಳೆ ಮಗಳನ್ನು ನೆನೆದು ಗಳಗಳನೆ ಅತ್ತು ಬಿಟ್ಟಿದ್ದಾರೆ.

‘‘ನನ್ನ ಮನಸ್ಸು ಘಾಸಿಗೊಂಡಿದೆ. ಪತ್ನಿ ಮಾಡಿರುವ ಎಲ್ಲಾ ಆರೋಪಗಳು ನನಗೆ ಆಘಾತ ತಂದಿವೆ. ಈಗಲೂ ನಾನು ನನ್ನ ಪತ್ನಿ ಮತ್ತು ಮಗಳ ವ್ಯಕ್ತಿತ್ವದ ರಕ್ಷಣೆಗಾಗಿ ಗೋಡೆಯ ರೀತಿ ನಿಲ್ಲುತ್ತೇನೆ. ನನ್ನ ಮನಸ್ಸಿನಲ್ಲಿ ಆಗುತ್ತಿರುವ ವಿಪ್ಲವಗಳನ್ನು ಯಾರಿಗೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ’’.

ನನ್ನ ಕಾಳಜಿಯೇನಿದ್ದರೂ ಕುಟುಂಬ ಮತ್ತು ಮಗಳ ಮೇಲೆ ಎಂದಿರುವ ಮೊಹಮ್ಮದ್ ಶಮಿ, ಕುಟುಂಬ ಒಂದಾಗಬೇಕೆಂದು ಬಯಸುವುದಾಗಿ ಹೇಳಿದ್ದಾರೆ. ಅವರ ನಂಬಿಕೆಯನ್ನು ಉಳಿಸಲು ಏನೇನು ಮಾಡಬೇಕೋ ಅವೆಲ್ಲವನ್ನೂ ಮಾಡುವುದಾಗಿ ಶಮಿ ನುಡಿದಿದ್ದಾರೆ.

‘‘ಈ ಆರೋಪಗಳ ಬಗ್ಗೆ ಯೋಚಿಸಿದಾಗಲೆಲ್ಲಾ ಮಗಳ ಮುಖ ನನ್ನ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಅವಳ ಜೀವನವನ್ನು ಭದ್ರ ಮಾಡಬೇಕು. ಅವಳ ಉತ್ತಮ ಜೀವನ, ಉತ್ತಮ ಭವಿಷ್ಯದ ಬಗ್ಗೆ ಚಿಂತಿತನಾಗಿದ್ದೇನೆ. ಅವಳಿಗೆ ಈಗ ಕೇವಲ ಎರಡೂವರೆ ವರ್ಷ ವಯಸ್ಸು’’.

Related Articles