Wednesday, November 6, 2024

ನಾಳೆಯಿಂದ ಕಾಮನ್ವೆಲ್ತ್ ಗೇಮ್ಸ್… ಇಲ್ಲಿದೆ ಕ್ರೀಡಾಕೂಟದ ಗೈಡ್

ಗೋಲ್ಡ್ ಕೋಸ್ಟ್ : 21ನೇ ಆವೃತ್ತಿಯ ಕಾಮನ್ವೆಲ್ತ್ ಗೇಮ್ಸ್ ಕ್ರೀಡಾ ಕೂಡ ನಾಳೆ (ಏಪ್ರಿಲ್ 4), ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನಲ್ಲಿ ಆರಂಭವಾಗಲಿದೆ. ಕ್ರೀಡಾಕೂಟದಲ್ಲಿ ಭಾರತದ 221 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಒಟ್ಟು 12 ದಿನಗಳ ಕಾಲ ನಡೆಯಲಿರುವ ಮೆಗಾ ಗೇಮ್ಸ್‌ನಲ್ಲಿ 71 ರಾಷ್ಟ್ರಗಳ 6 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ.

PC: Twitter/GC2018

21ನೇ ಆವೃತ್ತಿಯ ಕಾಮನ್ವೆಲ್ತ್ ಗೇಮ್ಸ್‌ನ ಕಿರು ವಿವರ ಇಲ್ಲಿದೆ.
ಯಾವಾಗ: ಏಪ್ರಿಲ್ 4-15 (2018)
ಎಲ್ಲಿ: ಗೋಲ್ಡ್ ಕೋಸ್ಟ್, ಆಸ್ಟ್ರೇಲಿಯಾ
ಉದ್ಘಾಟನಾ ಸಮಾರಂಭದ ಆತಿಥ್ಯ: ಕ್ಯಾರಾರಾ ಕ್ರೀಡಾಂಗಣ
ಸ್ಪರ್ಧೆಗಳು ನಡೆಯಲಿರುವ ಸ್ಥಳಗಳು: ಗೋಲ್ಡ್ ಕೋಸ್ಟ್, ಬ್ರಿಸ್ಬೇನ್, ಕ್ವೀನ್ಸ್‌ಲ್ಯಾಂಡ್.
ಸ್ಪರ್ಧೆಗಳ ಸಂಖ್ಯೆ: 18 ಸ್ಪರ್ಧೆಗಳು, 7 ಪ್ಯಾರಾ ಸ್ಪೋರ್ಟ್ಸ್

Related Articles