Tuesday, November 12, 2024

ಧೋನಿಯನ್ನು ಟೀಕಿಸುವವರು ರೋಹಿತ್ ವಿಷಯದಲ್ಲೇಕೆ ಗಪ್‌ಚುಪ್?

ಬೆಂಗಳೂರು: ದೇಶಕ್ಕೆ ಎರಡು ವಿಶ್ವಕಪ್‌ಗಳನ್ನು ಗೆದ್ದು ಕೊಟ್ಟ ನಾಯಕ, ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ನಾಯಕ. ಅಲ್ಲದೆ ಏಕದಿನ ಕ್ರಿಕೆಟ್ ಕಂಡ ಸರ್ವಶ್ರೇಷ್ಠ ಫಿನಿಷರ್. ಆದರೆ ಇತ್ತೀಚಿನ ದಿನಗಳಲ್ಲಿ ಧೋನಿ ಮೈದಾನದಲ್ಲಿ ಮುಗ್ಗರಿಸುವುದನ್ನೇ ಕಾಯುತ್ತಿರುವ ಕೆಲ ಮಾಜಿ ಕ್ರಿಕೆಟಿಗರೂ ಸೇರಿದಂತೆ ಟೀಕಾಕಾರರು, ಧೋನಿ ರನ್ ಗಳಿಸದೆ ಇದ್ದರೆ ತಮ್ಮ ನಾಲಗೆ ಹರಿಯ ಬಿಡುತ್ತಾರೆ. ಧೋನಿ ಜಮಾನ ಮುಗಿಯಿತು, ಅವರಲ್ಲಿ ಹಿಂದಿನ ಶಕ್ತಿ ಉಳಿದಿಲ್ಲ, ಧೋನಿ ನಿವೃತ್ತಿಯಾಗಬೇಕು, ಧೋನಿ ಯುವಕರಿಗೆ ದಾರಿ ಮಾಡಿಕೊಡಬೇಕು ಎಂದೆಲ್ಲಾ ಬಾಯಿ ಬಡಿದು ಕೊಳ್ಳುತ್ತಾರೆ. ಆದರೆ ಮುಂಬೈನ ರೋಹಿತ್ ಶರ್ಮಾ ವಿಚಾರದಲ್ಲಿ ಮಾತ್ರ ಈ ಟೀಕಾಕಾಕರು ಯಾವಾಗಲೂ ಗಪ್‌ಚುಪ್.

PC: BCCI

ಭಾರತೀಯ ಕ್ರಿಕೆಟ್‌ನಲ್ಲಿ ಅತ್ಯಂತ ಅದೃಷ್ಠವಂತ ಆಟಗಾರನೆಂದರೆ ರೋಹಿತ್ ಶರ್ಮಾ. ಎಷ್ಟೇ ವೈಲ್ಯಗಳನ್ನು ಎದುರಿಸಿದರೂ ರೋಹಿತ್ ಅದ್ಭುತ ಆಟಗಾರ, ಮ್ಯಾಚ್ ವಿನ್ನರ್ ಎಂಬ ಕಾರಣಗಳಿಂದಾಗಿ ತಂಡದಲ್ಲಿ ಮುಂದುವರಿಯುತ್ತಲೇ ಇರುತ್ತಾರೆ. ರೋಹಿತ್ ಶರ್ಮಾ ಅವರಿಗೆ ಸಿಕ್ಕಷ್ಟು ಅವಕಾಶ ಕಳೆದ 10 ವರ್ಷಗಳಲ್ಲಿ ಬೇರಾವ ಆಟಗಾರನಿಗೂ ಸಿಕ್ಕಿಲ್ಲ. ಆಗೊಮ್ಮೆ ಈಗೊಮ್ಮೆ ದೊಡ್ಡ ಇನ್ನಿಂಗ್ಸ್‌ಗಳನ್ನು ಆಡಿ ತಮ್ಮ ವಿರುದ್ಧದ ಟೀಕೆಗಳಿಗೆ ಉತ್ತರ ಕೊಡುವ ಛಾತಿಯನ್ನು ಬೆಳೆಸಿಕೊಂಡಿರುವ ರೋಹಿತ್ ಶರ್ಮಾ, ಪ್ರತಿಭಾವಂತ ಬ್ಯಾಟ್ಸ್‌ಮನ್ ಎಂಬುದರಲ್ಲಿ ಎರಡು ಮಾತಿಲ್ಲ.
ಆದರೆ ವೈಲ್ಯದ ವಿಷಯಕ್ಕೆ ಬಂದರೆ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗಬೇಕಿರುವುದು ನ್ಯಾಯ. ಎಂ.ಎಸ್ ಧೋನಿ ವಿಲರಾದರೆ ದೊಡ್ಡ ಧ್ವನಿಯಲ್ಲಿ ಅರಚಾಡುವ ಟೀಕಾಕಾರರು ರೋಹಿತ್ ಶರ್ಮಾ ವಿಷಯದಲ್ಲಿ ವೌನ ವಹಿಸುವುದು ಅವರ ದ್ವಂದ್ವ ನಿಲುವಿಗೆ ಸಾಕ್ಷಿ.
ಫಿಟ್‌ನೆಸ್ ವಿಷಯಕ್ಕೆ ಬಂದರೆ 30 ವರ್ಷದ ರೋಹಿತ್ ಶರ್ಮಾ ಅವರಿಗಿಂತ 36 ವರ್ಷದ ಎಂ.ಎಸ್ ಧೋನಿ ಎಷ್ಟೋ ಮೇಲ್ಮಟ್ಟದಲ್ಲಿದ್ದಾರೆ.
ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಟಿ20 ಸರಣಿಯ ಮೊದಲ ಎರಡೂ ಪಂದ್ಯಗಳಲ್ಲಿ ರೋಹಿತ್ ಶರ್ಮಾ ಮುಗ್ಗರಿಸಿದ್ದಾರೆ. ಆದರೆ ಟೀಕಾಕಾರರ ಸದ್ದೇ ಇಲ್ಲ. ಧೋನಿ ಅವರ ಉತ್ತರಾಕಾರಿಯೆಂದೇ ಬಿಂಬಿತರಾಗಿರುವ ಯುವ ಬ್ಯಾಟ್ಸ್‌ಮನ್ ರಿಷಭ್ ಪಂತ್ ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 23 ಎಸೆತಗಳಲ್ಲಿ ಕೇವಲ 23 ರನ್ ಗಳಿಸಿದ್ದರು. ಈ ರೀತಿಯ ಧೋನಿ ಏನಾದರೂ ಆಡಿದ್ದಿದ್ದರೆ ಇಷ್ಟು ಹೊತ್ತಿಗೆ ಟೀಕಾಕಾರರು ಧೋನಿ ಮೇಲೆ ಮುಗಿ ಬೀಳುತ್ತಿದ್ದರು. ವೈಲ್ಯಗಳಿಗೆ ಟೀಕೆ ಸರಿ. ಆದರೆ ಇತ್ತೀಚಿನ ದಿನಗಳಲ್ಲಿ ಆ ಟೀಕೆಗಳು ಧೋನಿ ಅವರಿಗೆ ಮಾತ್ರ ಸೀಮಿತವಾಗಿರುವುದು ಟೀಕಾಕಾರರ ದ್ವಂದ್ವ ನಿಲುವುಗಳನ್ನು ಬಯಲು ಮಾಡಿದೆ.

Related Articles