Thursday, December 12, 2024

ದೇಹದಾರ್ಢ್ಯ ಪಟುಗಳಿಗೆ ಶುಭಸುದ್ದಿ: ಬೆಂಗಳೂರಿನಲ್ಲಿ ಪಿಸಿಎ ಪ್ರಾರಂಭ

ಬೆಂಗಳೂರು: ನಗರದಾದ್ಯಂತ ಜಿಮ್‍ಗಳು ಅಪಾರ ಸಂಖ್ಯೆಯಲ್ಲಿ ಹೆಚ್ಚುತ್ತಿರುವುದರಿಂದ ಬಾಡಿ ಬಿಲ್ಡಿಂಗ್ ಸ್ಪರ್ಧೆಗಳನ್ನು ನಡೆಸಲು ಅಪಾರ ಉತ್ಸಾಹವೂ ಇದೆ. ಆದರೆ ಬಹಳಷ್ಟು ದೇಹದಾರ್ಢ್ಯ ಸ್ಪರ್ಧೆಗಳು ಎಲ್ಲೆಂದರಲ್ಲಿ ನಡೆಯುತ್ತಿದ್ದರೂ ಅವುಗಳು ಜನರನ್ನು ಗಮನ ಸೆಳೆಯುವಂತಹ ಸ್ಥಳಗಳಲ್ಲಿಯಾಗಲಿಸೂಕ್ತ ರೀತಿಯಲ್ಲಿ ನಡೆಯುತ್ತಿಲ್ಲ. ಆದ್ದರಿಂದ ದೇಹದಾಢ್ರ್ಯ ಪಟುಗಳ ಪ್ರಯತ್ನಗಳನ್ನು ಅತ್ಯುತ್ತಮ ರೀತಿಯಲ್ಲಿ ಪ್ರತಿಫಲಿಸುವ ನಿಟ್ಟಿನಲ್ಲಿ ಶ್ರೇಷ್ಠ ಸ್ಪರ್ಧೆಗಳನ್ನು ನಡೆಸಲು ಫಿಸಿಕಲ್ ಕಲ್ಚರ್ ಅಸೋಸಿಯೇಷನ್(ಪಿಸಿಎ)ಗೆ ಶನಿವಾರ ಚಾಲನೆ ನೀಡಲಾಯಿತು.

ಪಿಸಿಎ ಅಸೋಸಿಯೇಷನ್ ಆಫ್ ಬಾಡಿ ಬಿಲ್ಡಿಂಗ್ ಅಂಡ್ ಫಿಟ್‍ನೆಸ್ ಎಂದಿದ್ದು ಇದು ಕ್ರೀಡಾಪಟುಗಳಿಗೆ ಪ್ರಥಮ ಆದ್ಯತೆ ನೀಡುತ್ತದೆ. ದೇಹದಾರ್ಢ್ಯ ಸಂಸ್ಕøತಿಯನ್ನು ಬೆಳೆಸುವ ಉದ್ದೇಶ ಹೊಂದಿದೆ. ಪಿಸಿಎ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಹದಾರ್ಢ್ಯ ಸಂಸ್ಥೆಯಾಗಿದೆ. ಪಿಸಿಎ ಪಾರದರ್ಶಕ ತೀರ್ಪು ನೀಡುವುದಲ್ಲದೆ ಅಭ್ಯರ್ಥಿಗಳಿಗೆ ಅಂತಾರಾಷ್ಟ್ರೀಯ ಅವಕಾಶಗಳ ಸೃಷ್ಟಿ, ಉತ್ತಮ ಗುಣಮಟ್ಟದ ನಿಧಿಯನ್ನು ಸಂಗ್ರಹಿಸುತ್ತದೆ. ಪ್ರಸ್ತುತ ವ್ಯವಸ್ಥೆ ಕ್ರೀಡಾಪಟುಗಳ ಕಲ್ಯಾಣಕ್ಕೆ ಉತ್ತಮ ಕೆಲಸ ಸಾಧ್ಯವಾಗುತ್ತಿಲ್ಲ, ಪಿಸಿಎ ಪೂರ್ವಾಗ್ರಹ ರಹಿತ ತೀರ್ಪುಗಾರಿಕೆ ಅಲ್ಲದೆ ಕ್ರೀಡಾಪಟುಗಳಿಗೆ ಉತ್ತಮ ಸೌಲಭ್ಯ ಒದಗಿಸುತ್ತದೆ.

ಶ್ರೇಷ್ಠ ಗುಣಮಟ್ಟದ ದೇಹದಾರ್ಢ್ಯ ಸ್ಪರ್ಧೆಗಳು

ಪಿಸಿಎ ಭಾರತದಾದ್ಯಂತ ಗುಣಮಟ್ಟದ ದೇಹದಾಢ್ರ್ಯ ಸ್ಪರ್ಧೆಗಳ ಸರಣಿ ಆಯೋಜಿಸಲಿದೆ ಮತ್ತು ಕ್ರೀಡಾಪಟುಗಳಿಗೆ ವೇದಿಕೆ ಸೃಷ್ಟಿಸಲಿದೆ; ಆಗ ಕ್ರೀಡಾಪಟುಗಳು ಇತರೆ ಒತ್ತಡಗಳಿಂದ ಮುಕ್ತರಾಗಿ ದೇಹದಾರ್ಢ್ಯತೆಗೆ ಗಮನ ನೀಡಬಹುದು. ಇದರೊಂದಿಗೆ ಕ್ರೀಡಾಪಟುಗಳು ಉತ್ತಮ ಸ್ಪರ್ಧೆಗಳು, ಪಾರದರ್ಶಕ ತೀರ್ಪು,ಉತ್ತಮ ಬಹುಮಾನಗಳ ಮೂಲಕ ಅವರನ್ನು ಬೆಳೆಸಿ ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಮಾಡುತ್ತದೆ. ಈ ಪ್ರಾರಂಭದ ಸಂದರ್ಭದಲ್ಲಿ ಪಿಸಿಎ ಬಾಡಿ ಪವರ್ ಅಂಡ್ ಇಂಟರ್‍ನ್ಯಾಷನಲ್  ಡೆವಲಪ್‍ಮೆಂಟ್ ಎಕ್ಸಿಕ್ಯೂಟಿವ್‍ನ ಸಿಇಒ ಮತ್ತು ಸಂಸ್ಥಾಪಕ ನಿಕ್ ಓರ್ಟನ್, `ನಾನು ಭಾರತದಲ್ಲಿ ದೇಹದಾರ್ಢ್ಯ ಸ್ಪರ್ಧೆಗಳ ಸರಣಿ ನಡೆಸಲು ಬಹಳ ಉತ್ಸುಕನಾಗಿದ್ದೇನೆ. ಇದು ಶ್ರೇಷ್ಠ ಕ್ರೀಡಾಪಟುಗಳಿಗೆ ಪುರಸ್ಕರಿಸಲಿದೆ. ಪಿಸಿಎ ಇಂಡಿಯಾ ಅಧ್ಯಕ್ಷ ಶ್ರೀ ರಘುನಂದನ್ ಈ ಚಳವಳಿಯನ್ನು ಮುಂದಕ್ಕೆ ಕೊಂಡೊಯ್ಯಲಿದ್ದಾರೆ ಮತ್ತು ನಮ್ಮ ಪೂರ್ಣ ಬೆಂಬಲ ನೀಡಲಿದ್ದೇವೆ’ ಎಂದರು.


ಪ್ರಮುಖ ಮೈಲಿಗಲ್ಲು

ಪಿಸಿಎ ಇಂಡಿಯಾ 2018ರಲ್ಲಿ ಪ್ರಮುಖ ಮೈಲಿಗಲ್ಲಾಗಿದ್ದು ಶ್ರೀ ಆರ್.ರಘುನಂದನ್ ಭಾರತಕ್ಕೆ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ಭಾರತದಲ್ಲಿ ಅತ್ಯಂತ ಗೌರವಾನ್ವಿತರಾಗಿರುವ ಶ್ರೀ ರಘುನಂದನ್ ಭಾರತದ ವಿಸ್ತರಣೆಯನ್ನು ನಿರ್ವಹಿಸಲಿದ್ದಾರೆ. ಪಿಸಿಎ ಇಂಡಿಯಾಗೆ ಅವರ ದೂರದೃಷ್ಟಿ ಮತ್ತು ಭಾರತೀಯ ದೇಹದಾಢ್ರ್ಯ ಮತ್ತು ಫಿಟ್‍ನೆಸ್ ಉದ್ಯಮಕ್ಕೆ ಈ ಸಂಸ್ಥೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಮತ್ತು ಭಾರತೀಯ ಕ್ರೀಡಾಪಟುಗಳಿಗೆ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ಉತ್ತಮ ವೇದಿಕೆಗಳನ್ನು ಸೃಷ್ಟಿಸಲಿದೆ. ಮುಂದಿನ 5 ವರ್ಷಗಳು ದೇಶಾದ್ಯಂತ ಪಿಸಿಎಗಳ ವಿಸ್ತರಣೆ ಹೆಚ್ಚು ಸ್ಪರ್ಧೆಗಳು ಮತ್ತು ದೊಡ್ಡ ಪ್ರಮಾಣದ ಬಹುಮಾನಗಳಿಂದ ವಿಸ್ತರಿಸಲಿದೆ. ಈ ಜಾಗತಿಕ ಜಾಲದಿಂದ ಭಾರತೀಯ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೂ ಪ್ರವೇಶ ಪಡೆಯುತ್ತಾರೆ. `ಪಿಸಿಎ ದೇಹದ ಸಂಸ್ಕøತಿ ಬೆಳೆದಂತೆ ಬೆಳೆಯುತ್ತದೆ. ನಾವು ಭಾರತದಲ್ಲಿ ದೇಹದಾರ್ಢ್ಯ ಮತ್ತು ಫಿಟ್‍ನೆಸ್ ಉದ್ಯಮವನ್ನು ಮುಂದಕ್ಕೆ ಕೊಂಡೊಯ್ಯುವ, ಆವಿಷ್ಕರಿಸುವ ಮತ್ತು ಸುಧಾರಿಸುವ ಉದ್ದೇಶ ಹೊಂದಿದ್ದೇವೆ’ ಎಂದು ಪಿಸಿಎ ಇಂಡಿಯಾ ಅಧ್ಯಕ್ಷ ರಘುನಂದನ್ ಹೇಳಿದರು.

Related Articles