Thursday, September 12, 2024

ತವರಿಗೆ ಮರಳಿದ ವಿಶ್ವಕಪ್ ವೀರರಿಗೆ ಅದ್ಧೂರಿ ಸ್ವಾಗತ

ತವರಿಗೆ ಮರಳಿದ ವಿಶ್ವಕಪ್ ವೀರರಿಗೆ ಅದ್ಧೂರಿ ಸ್ವಾಗತ
ದಿ ಸ್ಪೋರ್ಟ್ಸ್ ಬ್ಯೂರೋ
ಮುಂಬೈ: ಐಸಿಸಿ 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿ ತವರಿಗೆ ಆಗಮಿಸಿದ ಭಾರತ ತಂಡಕ್ಕೆ ಅದ್ಧೂರಿ ಸ್ವಾಗತ ನೀಡಲಾಗಿದೆ.
PC: Twitter/BCCI
ಭಾನುವಾರ ನ್ಯೂಜಿಲೆಂಡ್‌ನಿಂದ ಹೊರಟಿದ್ದ ಪೃಥ್ವಿ ಶಾ ನಾಯರಕತ್ವದ ಭಾರತ ತಂಡ, ದುಬೈ ಮಾರ್ಗವಾಗಿ ಸೋಮವಾರ ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು. ವಿಶ್ವಕಪ್ ವೀರರಿಗಾಗಿ ಅಲ್ಲಿ ಕಾಯುತ್ತಿದ್ದ ಕ್ರಿಕೆಟ್ ಪ್ರಿಯರು ತ್ರಿವರ್ಣ ಧ್ವಜಗಳನ್ನು ಹಿಡಿದು ವಿಶ್ವ ವಿಜೇತ ಯುವ ಭಾರತ ತಂಡವನ್ನು ಬರಮಾಡಿಕೊಂಡರು.
ನ್ಯೂಜಿಲೆಂಡ್‌ನ ತೌರಂಗದಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡ, 3 ಬಾರಿಯ ಚಾಂಪಿಯನ್‌ಸ್ ಆಸ್ಟ್ರೇಲಿಯಾವನ್ನು 8 ವಿಕೆಟ್‌ಗಳಿಂದ ಸೋಲಿಸಿ ದಾಖಲೆಯ 4ನೇ ಬಾರಿ ಪ್ರಶಸ್ತಿ ಗೆದ್ದು ಬೀಗಿತ್ತು. ದಿಲ್ಲಿಯ ಆರಂಭಿಕ ಬ್ಯಾಟ್ಸ್‌ಮನ್ ಮನ್‌ಜೋತ್ ಕಾಲ್ರಾ ಶತಕ ಬಾರಿಸಿ ಪಂದ್ಯಶ್ರೇಷ್ಠರಾಗಿ ಮೂಡಿ ಬಂದರೆ, ಪಂಜಾಬ್‌ನ ಬ್ಯಾಟಿಂಗ್ ತಾರೆ ಶುಭ್‌ಮನ್ ಗಿಲ್ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

Related Articles