Sunday, September 8, 2024

ಟೀಮ್ ಇಂಡಿಯಾ ಕ್ರಿಕೆಟರ್ ಮೊಹಮ್ಮದ್ ಶಮಿಯ ಅನೈತಿಕ ಸಂಬಂಧ ಬಿಚ್ಚಿಟ್ಟ ಪತ್ನಿ!

ಬೆಂಗಳೂರು: ಟೀಮ್ ಇಂಡಿಯಾದ ವೇಗದ ಬೌಲರ್, ಬಂಗಾಳ ಎಕ್ಸ್‌ಪ್ರೆಸ್ ಮೊಹಮ್ಮದ್ ಶಮಿ ಅವರ ಮತ್ತೊಂದು ಮುಖವನ್ನು ಪತ್ನಿ ಹಸಿನ್ ಜಹಾನ್ ಬಹಿರಂಗಗೊಳಿಸಿದ್ದಾರೆ. ಈ ಕುರಿತ ರಂಗು ರಂಗಿನ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅಲ್ಲದೆ ಬಂಗಾಳದ ಎಬಿಪಿ ನ್ಯೂಸ್ ವಾಹಿನಿ ಈ ಕುರಿತ ಸುದ್ದಿಯನ್ನು ಬ್ರೇಕ್ ಮಾಡಿದೆ.

PC: Twitter/Mohammed Shami

ಮೊಹಮ್ಮದ್ ಶಮಿ ಅವರೊಂದಿಗೆ ಸಂಬಂಧ ಹೊಂದಿದ್ದಾರೆ ಎನ್ನಲಾಗಿರುವ ಯುವತಿಯರ ಫೋಟೋಗಳನ್ನು ಶಮಿ ಅವರ ಪತ್ನಿ ಹಸಿನ್ ಜಹಾನ್ ಅವರ ಹೆಸರಿನಲ್ಲಿರುವ ಫೇಸ್ ಬುಕ್ ಪೇಜ್‌ಗಳಲ್ಲಿ ಪ್ರಕಟಿಸಲಾಗಿದೆ. ಅಲ್ಲದೆ ಶಮಿ ಮತ್ತು ಆ ಯುವತಿಯರ ನಡುವೆ ನಡೆದಿರುವ ಸಂಭಾಷಣೆಗಳ ಸ್ಕ್ರೀನ್‌ಶಾಟ್‌ಗಳನ್ನು ಹಸಿನ್ ಜಹಾನ್ ಫೇಸ್ ಬುಕ್‌ನಲ್ಲಿ ಪ್ರಕಟಿಸಿದ್ದಾರೆ.
2014ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಫ್ರಾಂಚೈಸಿ ಮೊಹಮ್ಮದ್ ಶಮಿ ಅವರಿಗೆ ಉಡುಗೊರೆಯಾಗಿ ನೀಡಿದ್ದ ಫೋನ್‌ನಲ್ಲಿ ಈ ಎಲ್ಲಾ ರಹಸ್ಯಗಳು ಅಡಗಿದ್ದವು ಎಂದು ಪತ್ನಿ ಆರೋಪಿಸಿದ್ದಾರೆ ಎನ್ನಲಾಗಿದೆ. ಶಮಿ ಅವರ ಕಾರ್‌ನಲ್ಲಿದ್ದ ಫೋನ್‌ನ ಸೀಕ್ರೆಟ್ ಲಾಕ್ ಓಪನ್ ಮಾಡಿದ ವೇಳೆ ಈ ಸಂಗತಿಗಳು ಬಯಲಾಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ.
2014ರಲ್ಲಿ ಹಸಿನ್ ಜಹಾನ್ ಅವರನ್ನು ಮೊಹಮ್ಮದ್ ಶಮಿ ಮದುವೆಯಾಗಿದ್ದರು. ಆದರೆ ಆ ಫೇಸ್‌ಬುಕ್ ಖಾತೆ ಮೊಹಮ್ಮದ್ ಶಮಿ ಅವರ ಪತ್ನಿ ಹಸಿನ್ ಜಹಾನ್ ಅವರದ್ದೋ, ಅಥವಾ ನಕಲಿ ಖಾತೆಯೋ ಎಂಬುದು ಖಚಿತ ಪಟ್ಟಿಲ್ಲ.

Related Articles