ಟೀಮ್ ಇಂಡಿಯಾ ಆಟಗಾರರಿಗೆ ವೇಶ್ಯೆಯರನ್ನು ಸಪ್ಲೈ ಮಾಡ್ತಾನಂತೆ ಕುಲ್‌ದೀಪ್… ಶಮಿ ಪತ್ನಿಯ ಹೊಸ ಬಾಂಬ್!

0
505
PC: BCCI?Hasin Jahan

ಕೋಲ್ಕತಾ: ಪತಿ ಮೊಹಮ್ಮದ್ ಶಮಿ ಅವರ ಮಾನವನ್ನು ಹರಾಜು ಹಾಕುವ ಭರದಲ್ಲಿ ಜಗತ್ತಿನ ಮುಂದೆ ಬೆತ್ತಲಾಗಿರುವ ಶಮಿ ಅವರ ಪತ್ನಿಯ ವಕ್ರದೃಷ್ಠಿ ಇದೀಗ ಟೀಮ್ ಇಂಡಿಯಾ ಆಟಗಾರರ ಮೇಲೆ ಬಿದ್ದಿದೆ.
ಟೀಮ್ ಇಂಡಿಯಾ ಆಟಗಾರರು ಸ್ತ್ರೀಲೋಲರು, ಸದಾ ಪರಸ್ತ್ರೀ ಸಂಗ ಬಯಸುವವರು ಎಂದು ಶಮಿ ಅವರ ಪತ್ನಿ ಹಸೀನ್ ಜಹಾನ್ ಗಂಭೀರ ಆರೋಪ ಮಾಡಿದ್ದಾಳೆ. ಈ ಮೂಲಕ ಹಸೀನ್ ಜಹಾನ್ ಮತ್ತೊಂದು ಬಾಂಬ್ ಸಿಡಿಸಿದ್ದಾಳೆ.

PC: Facebook/Hasin Jahan

‘‘ಭಾರತ ಕ್ರಿಕೆಟ್ ತಂಡದ ಕೆಲ ಆಟಗಾರರಿಗೆ ಪರಸ್ತ್ರೀ ಸಂಗದ ಚಟವಿದೆ. ಅವರಿಗೆ ಬೇಕೆನಿಸಿದಾಗಲೆಲ್ಲಾ ಉತ್ತರ ಪ್ರದೇಶ ಮೂಲದ ಕುಲ್ದೀಪ್ ಎಂಬ ವ್ಯಕ್ತಿ ವೇಶ್ಯೆಯರನ್ನು ಸಪ್ಲೈ ಮಾಡುತ್ತಾನೆ’’.

ಮೊಹಮ್ಮದ್ ಶಮಿ ವಿವಾಹೇತರ ಸಂಬಂಧಗಳನ್ನು ಹೊಂದಿದ್ದು ನನಗೆ ಮೋಸ ಮಾಡಿದ್ದಾನೆ, ಮ್ಯಾಚ್ ಫಿಕ್ಸಿಂಗ್ ನಡೆಸುವ ಮೂಲಕ ದೇಶಕ್ಕೂ ಮೋಸ ಮಾಡಿದ್ದಾನೆ ಎಂದು ಆರೋಪಿಸಿದ್ದ ಹಸೀನ್ ಜಹಾನ್, ಪತಿಯ ವಿರುದ್ಧ ಕೋಲ್ಕತಾ ಠಾಣೆಯಲ್ಲಿ ಕೊಲೆಯತ್ನ, ಕಿರುಕುಳ, ದೌರ್ಜನ್ಯದ ಕೇಸ್ ದಾಖಲಿಸಿದ್ದಾಳೆ. ಅಲ್ಲದೆ ಶಮಿ ಸಹೋದರನ ವಿರುದ್ಧ ಅತ್ಯಾಚಾರದ ಕೇಸ್ ಕೂಡ ದಾಖಲಿಸಿದ್ದಾಳೆ.