Wednesday, November 6, 2024

ಗೋವಾ ಕೋಟೆಯಲ್ಲಿ ಆತಿಥೇಯರ ಸವಾಲಿಗೆ ಚೆನ್ನೈಯಿನ್ ಸಜ್ಜು

ಗೋವಾ, ಮಾರ್ಚ್ 9: ಹೀರೊ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್)ನಲ್ಲಿ 2ನೇ ಸೆಮಿೈನಲ್ ಪಂದ್ಯ ಶನಿವಾರ ಇಲ್ಲಿನ ಟ್ರೋಡಾ ಕ್ರೀಡಾಂಗಣದಲ್ಲಿ ನಡೆಯಲಿದ್ದುಘಿ, ಆತಿಥೇಯ ಎ್ಸಿ ಗೋವಾ ತಂಡ ಪ್ರವಾಸಿ ಚೆನ್ನೈಯಿನ್ ಎ್ಸಿ ತಂಡವನ್ನು ಎದುರಿಸಲಿದೆ. ಎರಡು ಪಂದ್ಯಗಳ ಸೆಮಿೈನಲ್ ಸರಣಿಯ ಮೊದಲ ಚರಣದ ಪಂದ್ಯ ಇದಾಗಿದೆ. ಉಭಯ ತಂಡಗಳ ಈ ಹಿಂದಿನ 9 ಮುಖಾಮುಖಿಗಳಲ್ಲಿ ಗೋವಾ ನಾಲ್ಕರದಲ್ಲಿ ಗೆದ್ದಿದ್ದು, ಚೆನ್ನೈ ಐದು ಬಾರಿ ಗೆದ್ದಿದೆ. ಇವರಿಬ್ಬರ ಸೆಣಸಾಟಗಳಲ್ಲಿ ಒಂದೂ ಪಂದ್ಯ ಕೂಡ ಡ್ರಾಗೊಳ್ಳದಿರುವುದು ವಿಶೇಷ.
PC: ISL
ಈ ಒಂಬತ್ತು ಪಂದ್ಯಗಳಲ್ಲಿ ಒಟ್ಟು 35 ಗೋಲುಗಳು ದಾಖಲಾಗಿದ್ದುಘಿ, ತಮ್ಮ ಆಕ್ರಮಣಕಾರಿ ಆಟದ ಶೈಲಿಯನ್ನೇ ಮುಂದುವರಿಸಲು ಎ್ಸಿ ಗೋವಾ ತಂಡದ ಪ್ರಧಾನ ಕೋಚ್ ಸರ್ಜಿಯೊ ಲೊಬೆರಾ ಮುಂದಾಗಿದ್ದು, ಅಭಿಮಾನಿಗಳಿಗೆ ಹೆಚ್ಚಿನ ಮನರಂಜನೆಯನ್ನು ನಿರೀಕ್ಷಿಸಲಾಗಿದೆ.
‘ತವರಿನ ಹೊರಗೆ ಗೋಲು ಗಳಿಸಬೇಕಾದ ಮಹತ್ವವನ್ನು ನಾವು ಅರಿತುಕೊಂಡಿದ್ದೇವೆ. ಆದರೆ ಈ ನಿಯಮ ನಮ್ಮ ಆಟದ ಶೈಲಿಯನ್ನು ಬದಲಿಸದು. ಕಳೆದ ಪಂದ್ಯದಲ್ಲಿ ನಮಗೆ ಡ್ರಾ ಲಿತಾಂಶ ಸಾಕಾಗಿತ್ತು. ಆದರೆ ನಾವು ಗೆಲುವಿಗಾಗಿ ಆಡಿದೆವು. ಅದೇ ಮನಸ್ಥಿತಿಯನ್ನು ತಂಡ ಮುಂದುವರಿಸಲಿದೆ. ಕಳೆದ ಮೂರು ಪಂದ್ಯಗಳಲ್ಲಿ ನಾವು ಹೆಚ್ಚಿನ ಗೋಲುಗಳನ್ನು ಗಳಿಸಿದ್ದೇವೆ,’’ ಎಂದು ಲೊಬೆರಾ ಹೇಳಿದ್ದಾರೆ.
ಸೆಮಿೈನಲ್‌ಗೇರುವ ಹಾದಿಯಲ್ಲಿ ಹ್ಯಾಟ್ರಿಕ್ ಗೆಲುವುಗಳನ್ನು ದಾಖಲಿಸಿರುವ ಗೋವಾ ತಂಡ, ಈ ಪಂದ್ಯಗಳಲ್ಲಿ 12 ಗೋಲುಗಳನ್ನು ಗಳಿಸಿದೆ. ಆದರೆ ಆಟದ ಶೈಲಿಯಲ್ಲಿ ಅತ್ಯಂತ ದೊಡ್ಡ ಬದಲಾವಣೆ ಎಂಬಂತೆ 270 ನಿಮಿಷಗಳ ಆಟದಲ್ಲಿ ಅವರು ಕೇವಲ ಒಂದು ಗೋಲು ಮಾತ್ರ ಬಿಟ್ಟು ಕೊಟ್ಟಿದ್ದಾರೆ.
ತಂಡದ ಸ್ಟ್ರೈಕರ್‌ಗಳು ಮೆಚ್ಚುಗೆಗಳನ್ನು ಪಡೆಯುತ್ತಿದ್ದರೂ, ಇಡೀ ತಂಡ ಆಕ್ರಮಣ ಮತ್ತು ರಕ್ಷಣೆಯಲ್ಲಿ ಉತ್ತಮ ಪ್ರದರ್ಶನ ತೋರುವ ನಿಟ್ಟಿನಲ್ಲಿ ಕಠಿಣ ಪರಿಶ್ರಮ ಪಟ್ಟಿದೆ ಎಂದು ಲೊಬೆರಾ ಹೇಳಿದ್ದಾರೆ.
‘ನಾವು ಒಂದು ತಂಡವಾಗಿ ಆಡದಿದ್ದರೆ ಯಶಸ್ಸು ಗಳಿಸಲು ಸಾಧ್ಯವಿಲ್ಲ. ಆದರೆ ಗೋಲು ಗಳಿಸಿದವರು ಹೆಡ್‌ಲೈನ್‌ಗಳಲ್ಲಿ ಕಾಣಿಸಿಕೊಳ್ಳುವುದು ುಟ್ಬಾಲ್‌ನಲ್ಲಿ ಸಾಮಾನ್ಯಘಿ. ಆದರೆ ನನ್ನ ಪ್ರಕಾರ ತಂಡದಲ್ಲಿರುವ ಇತರ ಆಟಗಾರರು ಹೆಚ್ಚಿನ ಪರಿಶ್ರಮ ಪಟ್ಟು ಸ್ಟ್ರೈಕರ್‌ಗಳಿಗೆ ಮಿಂಚಲು ಅವಕಾಶ ಕಲ್ಪಿಸಿದ್ದಾರೆ. ಕೇವಲ 11 ಮಂದಿ  ಮಾತ್ರ ಉತ್ತಮ ಆಟಗಾರರಾಗಿದ್ದಿದ್ದರೆ ನಾವು ಸೆಮಿೈನಲ್ ಪ್ರವೇಶಿಸಲು ಸಾಧ್ಯವಾಗುತ್ತಿರಲಿಲ್ಲ,’’ ಎಂದು ಲೊಬೆರಾ ತಿಳಿಸಿದ್ದಾರೆ.
ಚೆನ್ನೈಯಿನ್ ಎ್ಸಿ ಕಳೆದ ಐದು ಪಂದ್ಯಗಳಲ್ಲಿ ಎರಡನ್ನು ಗೆದ್ದ ದಾಖಲೆಯೊಂದಿಗೆ ಸೆಮಿೈನಲ್ ಪಂದ್ಯಕ್ಕೆ ಕಾಲಿಟ್ಟಿದೆ. ಆದರೆ ಅಂಕಿ ಅಂಶಗಳ ಪ್ರಕಾರ ಚೆನ್ನೈಯಿನ್ ಈ ಸಾಲಿನ ಅತ್ಯಂತ ಯಶಸ್ವಿ ಪ್ರವಾಸಿ ತಂಡಗಳಲ್ಲೊಂದು. ಅವರು ಅತ್ಯಂತ ಹೆಚ್ಚು ಸಂಖ್ಯೆಯ ಕ್ಲೀನ್‌ಶೀಟ್(7)ಗಳನ್ನು ಹೊಂದಿದ್ದುಘಿ, ತವರಿನ ಹೊರಗೆ ಅತ್ಯಂತ ಕಡಿಮೆ ಸಂಖ್ಯೆಯ ಶಾಟ್ಸ್(78) ಗಳನ್ನು ಬಿಟ್ಟು ಕೊಟ್ಟಿದ್ದಾರೆ. ಅವರು ಗಳಿಸಿರುವ ಗೋಲು ತಂಡದ 12 ಆಟಗಾರರಲ್ಲಿ ಹಂಚಿ ಹೋಗಿದೆ. ಆದರೆ ಗೋವಾ ಪರ ೆರಾನ್ ಕೊರೊಮಿನಾಸ್ ಮತ್ತು ಮ್ಯಾನ್ಯುಯೆಲ್ ಲಾನ್ಜರೊಟ್ ಅವರ ಮೇಲೆಯೇ ಹೆಚ್ಚು ಅವಲಂಬಿತವಾಗಿದೆ. ಗೋವಾ ತಂಡ ತವರಿನಲ್ಲಿ ಗಳಿಸಿರುವ 22 ಗೋಲುಗಳಲ್ಲಿ 18ನ್ನು ಇವರಿಬ್ಬರೇ ಬಾರಿಸಿದ್ದಾರೆ.
‘ಲೀಗ್‌ನಲ್ಲಿ ನಾವು 2ನೇ ಸ್ಥಾನಿಯಾಗಿ ಅಭಿಯಾನ ಅಂತ್ಯಗೊಳಿಸಿದ್ದು ಆಕಸ್ಮಿಕವಲ್ಲ. ನಾವು ಗೋವಾ ಮತ್ತು ಪುಣೆಯಲ್ಲಿ ಗೆದ್ದಿದ್ದೇವೆ. ಆದರೆ ನಾರ್ತ್‌ಈಸ್ಟ್‌ನಲ್ಲಿ ಸೋತಿದ್ದೆವು. ನಾವು ಮಹತ್ವದ ನಿರ್ಣಾಯಕ ಪಂದ್ಯಗಳನ್ನು ಗೆಲ್ಲುವ ಪ್ರವೃತ್ತಿ ಹೊಂದಿರುವವರು. ಪ್ಲೇ ಆ್ನಲ್ಲಿ ಕಾಣಿಸಿಕೊಳ್ಳುವ ಹಕ್ಕನ್ನು ನಾವು ಸಂಪಾದಿಸಿದ್ದೆವು. ಈಗ ಮತ್ತೆ ಹೊಸದಾಗಿ ಎಲ್ಲವನ್ನೂ ಆರಂಭಿಸಬೇಕಿದ್ದುಘಿ, ಈ ಹಿಂದೆ ಗಳಿಸಿರುವ ಅಂಕಗಳು ಗಣನೆಗೆ ಬರುವುದಿಲ್ಲಘಿ. ಇದು ಸಂಪೂರ್ಣವಾಗಿ ಸೆಮಿೈನಲ್ ಮತ್ತು ೈನಲ್. ಈ ಸವಾಲಿಗೆ ನಾವು ಸಿದ್ಧರಿದ್ದೇವೆ,’’ ಎಂದು ಚೆನ್ನೈಯಿನ್ ಎ್ಸಿ  ತಂಡದ ಪ್ರಧಾನ ಕೋಚ್ ಜಾನ್ ಗ್ರೆಗೋರಿ ಹೇಳಿದ್ದಾರೆ.
ತಮ್ಮ ಕೊನೆಯ ಪಂದ್ಯವನ್ನಾಡಿದ ನಂತರ ಆಟಗಾರರಿಗೆ ವಿಶ್ರಾಂತಿಗಾಗಿ ಹೆಚ್ಚಿನ ಸಮಯ ನೀಡಿರುವುದಾಗಿ ಗ್ರೆಗೋರಿ ಇದೇ ವೇಳೆ ತಿಳಿಸಿದ್ದಾರೆ. ‘ಎಲ್ಲರೂ ಅತ್ಯಂತ ಉತ್ಸಾಹದಿಂದ ಪಂದ್ಯವನ್ನು ಎದುರು ನೋಡುತ್ತಿದ್ದಾರೆ,’’ ಎಂದು ಗ್ರೆಗೋರಿ ಹೇಳಿದ್ದಾರೆ.
ಉಭಯ ತಂಡಗಳ ನಡುವಿನ 2ನೇ ಚರಣದ ಸೆಮಿೈನಲ್ ಪಂದ್ಯ ಮಾರ್ಚ್ 13ರಂದು ಚೆನ್ನೈನಲ್ಲಿ ನಡೆಯಲಿದೆ.

Related Articles