ಕೇಪ್‌ಟೌನ್ ಟೆಸ್ಟ್‌ನಲ್ಲಿ ಕಾಂಗರೂಗಳ ಮೋಸದಾಟ… ಕ್ರಿಕೆಟ್ ಜಗತ್ತಿನ ಮುಂದೆ ಬೆತ್ತಲಾದ ಬ್ಯಾಂಕ್ರಾಫ್ಟ್!
ಕೇಪ್‌ಟೌನ್: ಕ್ರಿಕೆಟ್ ಮೈದಾನದಲ್ಲಿ ಮೋಸದಾಟವಾಡುವುದರಲ್ಲಿ ಕಾಂಗರೂಗಳದ್ದು ಎತ್ತಿದ ಕೈ. ಪಂದ್ಯದಲ್ಲಿ ಸೋಲಿನ ಭೀತಿ ಕಾಡುತ್ತಿದೆ ಎಂಬ ಸೂಚನೆ ಸಿಕ್ಕುತ್ತಿದ್ದಂತೆ ಆಸ್ಟ್ರೇಲಿಯಾ ಆಟಗಾರರು ಕಳ್ಳಾಟವಾಡಲು ಶುರು ಮಾಡುತ್ತಾರೆ. ಈಗ ನಡೆದಿರುವುದೂ ಅದೇ.

ಆತಿಥೇಯ ದಕ್ಷಿಣ ಆಫ್ರಿಕಾದ ವಿರುದ್ಧ ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ನಡೆಯುತ್ತಿರುವ ತೃತೀಯ ಟೆಸ್ಟ್ ಪಂದ್ಯದ 3ನೇ ದಿನದಾಟದಲ್ಲಿ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಕ್ಯಾಮರಾನ್ ಬ್ಯಾಂಕ್ರಾಫ್ಟ್ ಮೋಸದಾಟವಾಡಿ ಕ್ರಿಕೆಟ್ ಜಗತ್ತಿನ ಮುಂದೆ ಬೆತ್ತಲಾಗಿದ್ದಾರೆ.

ಫೀಲ್ಡಿಂಗ್ ನಡೆಸುತ್ತಿದ್ದ ಸಂದರ್ಭದಲ್ಲಿ ಕ್ಯಾಮರಾನ್ ಬ್ಯಾಂಕ್ರಾಫ್ಟ್ ತಮ್ಮ ಪ್ಯಾಂಟ್‌ನ ಜೇಬಿನಿಂದ ಹಳದಿ ಬಣ್ಣದ ವಸ್ತುವೊಂದನ್ನು ಹೊರ ತೆಗೆದು ಅದನ್ನು ಪ್ಯಾಂಟ್‌ನ ಒಳ ಭಾಗಕ್ಕೆ ಸಿಲುಕಿಸುವ ಪ್ರಯತ್ನ ಮಾಡಿದ್ದಾರೆ. ಸೊಂಟದ ಭಾಗಕ್ಕೆ ಆ ವಸ್ತುವನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಬ್ಯಾಂಕ್ರಾಫ್ಟ್ ಅವರ ಕಳ್ಳಾಟ ಬಯಲಾಗಿದೆ.

ಪ್ಯಾಂಟ್‌ನ ಒಳಭಾಗದಲ್ಲಿ ಅಳವಡಿಸುವ ವಸ್ತುವಿನ ನೆರವಿನಿಂದ ಆಟಗಾರರು ಚೆಂಡಿನ ಶೈನ್ ಕಳೆದುಕೊಳ್ಳುವಂತೆ ಮಾಡುತ್ತಿರುವುದು ಇಂದು ನಿನ್ನೆಯ ಸಂಗತಿಯೇನಲ್ಲ. ಅದಕ್ಕೆ ದೊಡ್ಡ ಇತಿಹಾಸವೇ ಇದೆ. ಕ್ಯಾಮರಾನ್ ಬ್ಯಾಂಕ್ರಾಫ್ಟ್ ಅದೇ ಪ್ರಯತ್ನದಲ್ಲಿರುವಾಗಲೇ ಸಿಕ್ಕಿ ಬಿದ್ದಿದ್ದಾರೆ.