Friday, April 19, 2024

ಕಿಂಗ್ಸ್ ಇಲವೆನ್ ಪಂಜಾಬ್‌ಗೆ ಕನ್ನಡಿಗ ವೆಂಕಟೇಶ್ ಪ್ರಸಾದ್ ಬೌಲಿಂಗ್ ಕೋಚ್

ಬೆಂಗಳೂರು: 11ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಬೌಲಿಂಗ್ ಕೋಚ್ ಆಗಿ ಕನ್ನಡಿಗ ವೆಂಕಟೇಶ್ ಪ್ರಸಾದ್ ನೇಮಕಗೊಂಡಿದ್ದಾರೆ.

Twitter

ಟೀಮ್ ಇಂಡಿಯಾದ ಮಾಜಿ ಮಧ್ಯಮ ವೇಗಿಯಾಗಿರುವ ವೆಂಕಟೇಶ್ ಪ್ರಸಾದ್, ಇತ್ತೀಚೆಗಷ್ಟೇ ಭಾರತದ 19 ವರ್ಷದೊಳಗಿನವರ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕಿಂಗ್ಸ್ ಇಲವೆನ್ ತಂಡದ ಬೌಲಿಂಗ್ ಕೋಚ್ ಹುದ್ದೆಯ ಆರ್ ಇದ್ದ ಕಾರಣ, ಹಿತಾಸಕ್ತಿ ಸಂಘರ್ಷದ ಆರೋಪಕ್ಕೆ ಗುರಿಯಾಗದಿರಲು ಆಯ್ಕೆ ಸಮಿತಿಯ ಮುಖ್ಯಸ್ಥನ ಸ್ಥಾನವನ್ನು ವೆಂಕಿ ತೊರೆದಿದ್ದರು.
ವೆಂಕಟೇಶ್ ಪ್ರಸಾದ್ ಈ ಹಿಂದೆ ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. 2007ರಲ್ಲಿ ಭಾರತ ತಂಡ ಚೊಚ್ಚಲ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಚಾಂಪಿಯನ್ ಪಟ್ಟಕ್ಕೇರಿದಾಗ ವೆಂಕಿ ಭಾರತ ತಂಡದ ಬೌಲಿಂಗ್ ಕೋಚ್ ಆಗಿದ್ದರು. ಇಂತಹ ಅನುಭವಿ ಕೋಚ್‌ಗೆ ಪ್ರೀತಿ ಜಿಂಟಾ ಸಹ ಮಾಲೀಕತ್ವದ ಕಿಂಗ್ಸ್ ಇಲವೆನ್ ಪಂಜಾಬ್ ಫ್ರಾಂಚೈಸಿ ಮಣೆ ಹಾಕಿದೆ. ತಂಡಕ್ಕೆ ಡೆಲ್ಲಿ ಡ್ಯಾಶರ್ ವೀರೇಂದ್ರ ಸೆಹ್ವಾಗ್ ಮಾರ್ಗದರ್ಶಕರಾಗಿದ್ದಾರೆ.
ಈಗಾಗಲೇ ಪಂಜಾಬ್ ತಂಡ ಐಪಿಎಲ್ ಆಟಗಾರರ ಹರಾಜಿನಲ್ಲಿ ಕನ್ನಡಿಗರಾದ ಕೆ.ಎಲ್ ರಾಹುಲ್, ಕರುಣ್ ನಾಯರ್ ಮತ್ತು ಮಯಾಂಕ್ ಅಗರ್ವಾಲ್ ಅವರನ್ನು ಖರೀದಿಸಿದ್ದು, ಇದೀಗ ಮತ್ತೊಬ್ಬ ಕನ್ನಡಿಗನನ್ನು ತಂಡಕ್ಕೆ ಸೇರಿಸಿಕೊಂಡಿದೆ.

Related Articles