Sunday, May 26, 2024

ಕಾಮನ್ವೆಲ್ತ್ ಗೇಮ್ಸ್: ಭಾರತಕ್ಕೆ ಮೊದಲ ಚಿನ್ನದ ಪದಕ, ದಾಖಲೆಯೊಂದಿಗೆ ಸ್ವರ್ಣ ಗೆದ್ದ ಮೀರಾಬಾಯಿ ಚಾನು

ಗೋಲ್ಡ್ ಕೋಸ್ಟ್: ಕುಂದಾಪುರದ ಯುವ ಗುರುರಾಜ್ ಪೂಜಾರಿ 21ನೇ ಕಾಮನ್ವಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ತಂದ ಬೆನ್ನಲ್ಲೇ ಭಾರತ ಮೊದಲ ಚಿನ್ನದ ಬೇಟೆಯಾಡಿದೆ.
ಇಾಂಲದ 23 ವರ್ಷದ ಯುವ ವೇಟ್‌ಲ್ಟಿರ್ ಮೀರಾಬಾಯಿ ಚಾನು, ಗುರುವಾರ ನಡೆದ ಮಹಿಳೆಯರ 48 ಕೆಜಿ ವಿಭಾಗದಲ್ಲಿ ಒಟ್ಟು 196 ಕೆಜಿ ಭಾರ ಎತ್ತಿ ಭಾರತಕ್ಕೆ ಮೊದಲ ಸ್ವರ್ಣ ಪದಕ ತಂದುಕೊಟ್ಟರು.

PC: Twitter/Doordarshan Sports

ವಿಶ್ವ ಚಾಂಪಿಯನ್ ಮೀರಾಬಾಯಿ ತಮ್ಮ 3ನೇ ಪ್ರಯತ್ನದಲ್ಲಿ 86 ಕೆಜಿ ಭಾರ ಎತ್ತಿ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ನೂತನ ದಾಖಲೆ ನಿರ್ಮಿಸಿದರು. ಮೂರೂ ಪ್ರಯತ್ನಗಳಲ್ಲಿ ಕಾಮನ್ವೆಲ್ತ್ ಗೇಮ್ಸ್ ದಾಖಲೆಯನ್ನು ಮೀರಾಬಾಯಿ ಉತ್ತಮ ಪಡಿಸಿಕೊಂಡು ನೂತನ ದಾಖಲೆ ಬರೆದರು.

Related Articles