ಕಾಮನ್ವೆಲ್ತ್ ಗೇಮ್ಸ್: ಭಾರತ ಮಹಿಳಾ ಹಾಕಿ ತಂಡಕ್ಕೆ ಆರಂಭದಲ್ಲೇ ಸೋಲಿನ ಶಾಕ್

0
361
PC: Twitter/Doordarshan Sports

ಗೋಲ್ಡ್ ಕೋಸ್ಟ್: ಭಾರತದ ಮಹಿಳಾ ಹಾಕಿ ತಂಡಕ್ಕೆ 21ನೇ ಆವೃತ್ತಿಯ ಕಾಮನ್ವೆಲ್ತ್ ಗೇಮ್ಸ್‌ನ ಆರಂಭದಲ್ಲೇ ಸೋಲಿನ ಶಾಕ್ ಎದುರಾಗಿದೆ.
ಗುರುವಾರ ನಡೆದ ಮೊದಲ ‘ಎ’ ಗುಂಪಿನ ಪಂದ್ಯದಲ್ಲಿ ಭಾರತೀಯ ವನಿತಾ ತಂಡ ವೇಲ್ಸ್ ವಿರುದ್ಧ 2-3ರ ಅಂತರದಲ್ಲಿ ಸೋಲು ಅನುಭವಿಸಿತು.

PC: Twitter/Doordarshan Sports

2006ರಲ್ಲಿ ಮೆಲ್ಬೋರ್ನ್‌ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ನಂತರ ಕಾಮನ್ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಮೊದಲ ಪದಕದ ನಿರೀಕ್ಷೆಯಲ್ಲಿರುವ ಭಾರತ ತಂಡದ ಕನಸಿಗೆ ವೇಲ್ಸ್ ವಿರುದ್ಧದ ಸೋಲಿನೊಂದಿಗೆ ಆರಂ‘ದಲ್ಲೇ ಪೆಟ್ಟು ಬಿದ್ದಿದೆ.
ಭಾರತ ಪರ ನಾಯಕಿ ರಾಣಿ ರಾಂಪಾಲ್(34ನೇ ನಿಮಿಷ) ಮತ್ತು ನಿಕ್ಕಿ ಪ್ರಧಾನ್ (41ನೇ ನಿಮಿಷ) ತಲಾ ಒಂದು ಗೋಲು ಗಳಿಸಿದರೆ, ವೇಲ್ಸ್ ಪರ ಲಿಸಾ ಡಾಲಿ (7ನೇ ನಿಮಿಷ), ಸಿಯಾನ್ ಫ್ರೆಂಚ್ (26ನೇ ನಿಮಿಷ) ಮತ್ತು ನತಾಶಾ ಮಾರ್ಕ್ ಜೋನ್ಸ್ (57ನೇ ನಿಮಿಷ) ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು.
ಶುಕ್ರವಾರ ನಡೆಯುವ ತನ್ನ 2ನೇ ಪಂದ್ಯದಲ್ಲಿ ಭಾರತ ತಂಡ ಮಲೇಷ್ಯಾ ತಂಡವನ್ನು ಎದುರಿಸಲಿದೆ.