ಕರ್ನಾಟಕದ ಈಜುಪಟು ಖುಷಿ ದಿನೇಶ್‌ಗೆ ಸ್ಟಾರ್ ಸ್ಪೋರ್ಟ್ಸ್ ಸನ್ಮಾನ

0
392
ಬೆಂಗಳೂರು: ಇತ್ತೀಚೆಗೆ ಹೊಸದಿಲ್ಲಿಯಲ್ಲಿ ನಡೆದ ಖೇಲೊ ಇಂಡಿಯಾ ಸ್ಕೂಲ್ ಗೇಮ್ಸ್‌ನಲ್ಲಿ 4 ಪದಕಗಳನ್ನು ಗೆದ್ದ ಕರ್ನಾಟಕದ ಪ್ರತಿಭಾವಂತ ಈಜುಪಟು ಖುಷಿ ದಿನೇಶ್ ಅವರನ್ನು ವಿಶ್ವದ ಮಹಿಳಾ ದಿನದ ಅಂಗವಾಗಿ ಸ್ಟಾರ್ ಸ್ಪೋರ್ಟ್ಸ್ ‘ಸ್ಟಾರ್ ಸ್ಪೋರ್ಟ್ಸ್ ಬಿಲೀವ್’ ಪ್ರಶಸ್ತಿ ನೀಡಿ ಸನ್ಮಾನಿಸಿದೆ.
ಬೆಂಗಳೂರು ಬಸವನಗುಡಿ ಈಜು ಕೇಂದ್ರದ ಖುಷಿ ದಿನೇಶ್, ಕಳೆದ ತಿಂಗಳು ನಡೆದ ಖೇಲೊ ಇಂಡಿಯಾ ಗೇಮ್ಸ್‌ನ 200 ಮತ್ತು 400ಮೀ. ಫ್ರೀಸ್ಟೈಲ್‌ನಲ್ಲಿ ಚಿನ್ನ ಗೆದ್ದಿದ್ದರು. ಅಲ್ಲದೆ 4*100ಮೀ. ರಿಲೇಯಲ್ಲಿ ಎರಡು ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದ್ದರು. ಈ ಮೂಲಕ ಗೇಮ್ಸ್‌ನಲ್ಲಿ 4 ಪದಕಗಳನ್ನು ಮುಡಿಗೇರಿಸಿಕೊಂಡಿದ್ದರು. ಅಲ್ಲದೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಖುಷಿ ದಿನೇಶ್ ಹಲವಾರು ಪದಕಗಳನ್ನು ಗೆದ್ದಿದ್ದಾರೆ.
ಖೇಲೊ ಇಂಡಿಯಾ ಸ್ಕೂಲ್ ಗೇಮ್ಸ್‌ನಲ್ಲಿ ಆಯ್ದ ಭಾರತದ ಕ್ರೀಡಾಪಟುಗಳಿಗೆ ಸ್ಟಾರ್ ಸ್ಪೋರ್ಟ್ಸ್ ವಿಶ್ವ ಮಹಿಳಾ ದಿನದ ಅಂಗವಾಗಿ ದೇಶದ ವಿವಿಧೆಡೆ ವಿಶೇಷ ಕಿಟ್ ವಿತರಿಸಿದೆ. ಇದರ ಭಾಗವಾಗಿ ಖುಷಿ ದಿನೇಶ್ ಅವರಿಗೆಬೆಂಗಳೂರಿನಲ್ಲಿ ಕಿಟ್ ವಿತರಿಸಿ ಸನ್ಮಾನಿಸಲಾಗಿದೆ.