Friday, October 4, 2024

ಕನ್ನಡಿಗ ರಾಹುಲ್‌ರನ್ನು ಟೀಮ್ ಇಂಡಿಯಾದಲ್ಲಿ ತುಳಿಯುತ್ತಿದ್ದಾರೆಯೇ? ರೈಸಿಂಗ್ ಸ್ಟಾರ್‌ಗೆ ಮತ್ತೆ ಅನ್ಯಾಯ…

ಕೊಲಂಬೊ: ಟೀಮ್ ಇಂಡಿಯಾದ ಭರವಸೆಯ ಬ್ಯಾಟ್ಸ್‌ಮನ್ ಕನ್ನಡಿಗ ಕೆ.ಎಲ್ ರಾಹುಲ್ ಅವರನ್ನು ಟೀಮ್ ಇಂಡಿಯಾದಲ್ಲಿ ತುಳಿಯುತ್ತಿದ್ದಾರೆಯೇ?. ಹೀಗೊಂದು ಅನುಮಾನ ಬರಲು ಕಾರಣ ತಂಡದಲ್ಲಿ ನಡೆಯುತ್ತಿರುವ ಕೆಲ ಬೆಳವಣಿಗೆಗಳು.
ಹೌದು. ಭಾರತ ತಂಡದಲ್ಲಿ ರಾಹುಲ್ ಅವರಿಗೆ ಸೂಕ್ತ ಅವಕಾಶಗಳು ಸಿಗುತ್ತಿಲ್ಲ. ಶ್ರೀಲಂಕಾದ ಕೊಲಂಬೊದಲ್ಲಿ ಆರಂಭಗೊಂಡ ತ್ರಿಕೋನ ಟಿ20 ಸರಣಿಯ ಮೊದಲ ಪಂದ್ಯದಲ್ಲೂ ಭಾರತದ ಆಡುವ ಬಳಗದಲ್ಲಿ ರಾಹುಲ್ ಅವರಿಗೆ ಸ್ಥಾನ ನೀಡಲಾಗಿಲ್ಲ.
PC: Twitter/KL Rahul
ವಿರಾಟ್ ಕೊಹ್ಲಿ, ಎಂ.ಎಸ್ ಧೋನಿಯಂತಹ ಹಿರಿಯ ಬ್ಯಾಟ್ಸ್‌ಮನ್‌ಗಳಿಗೆ ವಿಶ್ರಾಂತಿ ನೀಡಿರುವ ಕಾರಣ, ಎರಡಟು ಸ್ಥಾನಗಳು ಭಾರತದ ಪ್ಲೇಯಿಂಗ್ ಇಲವೆನ್‌ನಲ್ಲಿ ಖಾಲಿಯಾಗಿದೆ. ಆದರೂ ಕೂಡ ರಾಹುಲ್ ಅವರಿಗೆ ಅವಕಾಶ ನೀಡದೆ ಮತ್ತೊಮ್ಮೆ ಅನ್ಯಾಯ ಮಾಡಲಾಗಿದೆ.
ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಮೂರೂ ಪಂದ್ಯಗಳಲ್ಲಿ ಬೆಂಚ್ ಕಾಯಿಸಿದ್ದ ರಾಹುಲ್, ತ್ರಿಕೋನ ಸರಣಿಯಲ್ಲಾದರೂ ಅವಕಾಶದ ನಿರೀಕ್ಷೆಯಲ್ಲಿದ್ದರು. ಆದರೆ ಅವರ ನಿರೀಕ್ಷೆ ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಸುಳ್ಳಾಗಿದೆ. ದಿಲ್ಲಿಯ ರಿಷಭ್ ಪಂತ್‌ಗೆ ಅವಕಾಶ ನೀಡಿರುವ ಟೀಮ್ ಮ್ಯಾನೇಜ್ಮೆಂಟ್ ರಾಹುಲ್ ಅವರನ್ನು ಮತ್ತೆ ಕಡೆಗಣಿಸಿದೆ.
ಕಳೆದ ವರ್ಷದ ಡಿಸೆಂಬರ್‌ನಲ್ಲಿ ಭಾರತ ಪರ ತಮ್ಮ ಕೊನೆಯ ಟಿ20 ಸರಣಿಯನ್ನಾಡಿದ್ದ ರಾಹುಲ್, ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೇವಲ 49 ಎಸೆತಗಳಲ್ಲಿ 8 ಸಿಕ್ಸರ್‌ಗಳ ಸಹಿತ 89 ರನ್ ಸಿಡಿಸಿ ಅರ್ಭಟಿಸಿದ್ದರು. ಇಂತಹ ಅಮೋಘ ಪ್ರದರ್ಶನ ನೀಡಿದರೂ ರಾಹುಲ್ ಅವರನ್ನು ಮತ್ತೆ ಮತ್ತೆ ತುಳಿಯಲಾಗುತ್ತಿದೆ.

Related Articles