ಕನ್ನಡತಿ ವೇದಾ ಕೃಷ್ಣಮೂರ್ತಿ ಸಾಹಸ ವ್ಯರ್ಥ: ಭಾರತ ವಿರುದ್ಧ ಗೆದ್ದ ದಕ್ಷಿಣ ಆಫ್ರಿಕಾ, ಮಿಥಾಲಿ ಪಡೆಗೆ ಸರಣಿ ಜಯ

0
306
PC: Twitter/BCCI Women

ಪೋಷ್ಸ್ಟ್ರೂಮ್: ಕನ್ನಡತಿ ವೇದಾ ಕೃಷ್ಣಮೂರ್ತಿ ಮತ್ತು ಉತ್ತರ ಪ್ರದೇಶದ ದೀಪ್ತಿ ಶರ್ಮಾ ಆಕರ್ಷಕ ಅರ್ಶತಕಗಳನ್ನು ಬಾರಿಸಿದರೂ 3ನೇ ಏಕದಿನ ಪಂದ್ಯದಲ್ಲಿ ಭಾರತದ ಮಹಿಳಾ ತಂಡ ಸೋಲುವುದನ್ನು ತಪ್ಪಿಸಲಾಗಲಿಲ್ಲ.

PC: Twitter/BCCI Women

ಪಂದ್ಯವನ್ನು ಆತಿಥೇಯ ದಕ್ಷಿಣ ಆಫ್ರಿಕಾದ ತಂಡ 7 ವಿಕೆಟ್‌ಗಳ ಅಂತರದಲ್ಲಿ ಗೆದ್ದರೂ, ಸರಣಿ 2-1ರ ಅಂತರದಲ್ಲಿ ಭಾರತದ ಮಹಿಳೆಯರ ಪಾಲಾಯಿತು. ಶನಿವಾರ ನಡೆದ ಸರಣಿಯ ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್ ನಡೆಸಿ 50 ಓವರ್‌ಗಳಲ್ಲಿ 240 ರನ್‌ಗಳಿಗೆ ಆಲೌಟಾಯಿತು. ದೀಪ್ತಿ ಶರ್ಮಾ 112 ಎಸೆತಗಳಲ್ಲಿ 79 ರನ್ ಗಳಿಸಿದರೆ, ವೇದಾ ಕೃಷ್ಣಮೂರ್ತಿ 64 ಎಸೆತಗಳಲ್ಲಿ 8 ಬೌಂಡರಿಗಳನ್ನೊಳಗೊಂಡ 56 ರನ್ ಸಿಡಿಸಿದರು. ಕೊನೆಯಲ್ಲಿ ಅಬ್ಬರಿಸಿದ ಆಲ್ರೌಂಡರ್ ಶಿಖಾ ಪಾಂಡೆ ಕೇವಲ 16 ಎಸೆತಗಳಲ್ಲಿ 31 ರನ್ ಬಾರಿಸಿದರು.
ನಂತರ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ 49.2 ಓವರ್‌ಗಳಲ್ಲಿ 3 ವಿಕೆಟ್‌ಗೆ 241 ರನ್ ಗಳಿಸಿ ಜಯಭೇರಿ ಬಾರಿಸಿತು.

ಸಂಕ್ಷಿಪ್ತ ಸ್ಕೋರ್
ಭಾರತ : 50 ಓವರ್‌ಗಳಲ್ಲಿ 240ಕ್ಕೆ ಆಲೌಟ್
ದೀಪ್ತಿ ಶರ್ಮಾ 79, ವೇದಾ ಕೃಷ್ಣಮೂರ್ತಿ 56, ಶಿಖಾ ಪಾಂಡೆ ಅಜೇಯ 31.
ದಕ್ಷಿಣ ಆಫ್ರಿಕಾ : 49.2 ಓವರ್‌ಗಳಲ್ಲಿ 3 ವಿಕೆಟ್‌ಗೆ 241 ರನ್
ಮಿಗ್ನನ್ ಡು ಪ್ರೀಜ್ ಅಜೇಯ 90, ಲೌರಾ ವೊಲ್ವಾರ್ಡ್ತ್ 59.