Friday, September 22, 2023

ಕತಾರ್ ಓಪನ್: ಮೊದಲ ಸುತ್ತಿನಲ್ಲೇ ಸೋತು ಹೊರ ಬಿದ್ದ ರಷ್ಯಾ ಚೆಲುವೆ ಶರಪೋವಾ

ದೋಹಾ: ರಷ್ಯಾದ ಟೆನಿಸ್ ಚೆಲುವೆ ಮರಿಯಾ ಶರಪೋವಾ, ಇಲ್ಲಿ ನಡೆಯುತ್ತಿರುವ ಕತಾರ್ ಓಪನ್ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್‌ನಲ್ಲಿ ಮೊದಲ ಸುತ್ತಿನಲ್ಲೇ ಸೋಲುಂಡು ನಿರಾಸೆ ಅನುಭವಿಸಿದ್ದಾರೆ.

PC: twitter/Maria Sharapova

ಐದು ಗ್ರ್ಯಾನ್‌ಸ್ಲ್ಯಾಮ್‌ಗಳ ಒಡತಿ ಶರಪೋವಾ, ವಿಶ್ವದ 92ನೇ ರ್ಯಾಂಕ್‌ನ ಆಟಗಾರ್ತಿ ರೊಮೇನಿಯಾದ ಮೊನಿಕಾ ನಿಕುಲೆಸ್ಕು ವಿರುದ್ಧ 6-4, 4-6, 3-6 ಅಂತರದ ಸೆಟ್‌ಗಳಿಂದ ಆಘಾತಕಾರಿ ಸೋಲುಂಡರು. ಮೊದಲ ಸೆಟ್ ಗೆದ್ದು ಉತ್ತಮ ಆರಂಭ ಪಡೆದಿದ್ದ ಶರಪೋವಾ ನಂತರದ ಎರಡೂ ಸೆಟ್‌ಗಳಲ್ಲಿ ಕಠಿಣ ಹೋರಾಟದ ನಡುವೆಯೂ ಸೋಲು ಕಂಡು ಟೂರ್ನಿಯಿಂದ ನಿರ್ಗಮಿಸಿದರು.
ಪಂದ್ಯದಲ್ಲಿ ಒಟ್ಟು 52 ಅನಗತ್ಯ ತಪ್ಪುಗಳನ್ನು ಮಾಡಿದ್ದು ಶರಪೋವಾಗೆ ಮುಳುವಾಯಿತು. ಎದುರಾಳಿ ಮೊನಿಕಾ ಕೇವಲ 17 ಅನಗತ್ಯ ತಪ್ಪುಗಳನ್ನು ಮಾಡಿದರು.
ವಿಶ್ವದ ಮಾಜಿ ನಂ.1 ಆಟಗಾರ್ತಿ ಹಾಗೂ ಕತಾರ್ ಓಪನ್‌ನಲ್ಲಿ ಎರಡು ಬಾರಿ ಪ್ರಶಸ್ತಿ ಗೆದ್ದಿರುವ ಮಾಜಿ ಚಾಂಪಿಯನ್ ಮರಿಯಾ ಶರಪೋವಾ, ಈ ಬಾರಿ ವೈಲ್ಡ್ ಕಾರ್ಡ್ ಪಡೆದಿದ್ದರು.
2013ರ ನಂತರ ಶರಪೋವಾ ಕತಾರ್ ಓಪನ್‌ನಲ್ಲಿ ಮೊದಲ ಪಂದ್ಯವಾಡಿದರು. ಇತ್ತೀಚೆಗಷ್ಟೇ ಶರಪೋವಾ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲ್ಯಾಮ್ ಟೂರ್ನಿಯ 3ನೇ ಸುತ್ತಿನಲ್ಲಿ ಜರ್ಮನಿಯ ಏಂಜಲಿಕ್ ಕೆರ್ಬರ್ ವಿರುದ್ಧ ಸೋತಿದ್ದರು.

Related Articles