Friday, October 4, 2024

ಐಸ್‌ಕ್ರಿಕೆಟ್: ಹಳೆಯ ಖದರ್ ತೋರಿದ ವೀರೂ, ಸೆಹ್ವಾಗ್ ಅಬ್ಬರದ ನಡುವೆಯೂ ಸೋತ ಡೈಮಂಡ್ಸ್

ಸೇಂಟ್ ಮಾರಿಟ್ಜ್: ಐಸ್ ಕ್ರಿಕೆಟ್. ಇದು ಕ್ರಿಕೆಟ್ ಜಗತ್ತಿಗೆ ಹೊಸ ಪರಿಚಯ. ಅತಿ ಸುಂದರ ದೇಶ ಸ್ವಿಟ್ಜರ್ಲೆಂಡ್‌ನಲ್ಲಿರುವ ಸೇಂಟ್ ಮಾರಿಟ್ಜ್ ಎಂಬಲ್ಲಿರುವ ಬೆಟ್ಟ ಪ್ರದೇಶ ತುತ್ತ ತುದಿಯಲ್ಲಿ ಗುರುವಾರ ಐಸ್ ಕ್ರಿಕೆಟ್ ಟಿ20 ಪಂದ್ಯ ನಡೆಯಿತು.

PC: Twitter

ಸುತ್ತಲೂ ಹಿಮಾವೃತ ಪ್ರದೇಶ. ಅಲ್ಲೊಂದು ಕ್ರಿಕೆಟ್ ಮೈದಾನ. ಕೊರೆಯುವ ಚಳಿಯಲ್ಲಿ ಮಿಂಚಿದ ವಿಶ್ವವಿಖ್ಯಾತ ಸ್ಟಾರ್ ಆಟಗಾರರು. ಭಾರತ ಕಿಕೆಟ್ ತಂಡದ ಮಾಜಿ ಡ್ಯಾಶಿಂಗ್ ಓಪನರ್, ಸುಲ್ತಾನ್ ಆ್ ಮುಲ್ತಾನ್ ಖ್ಯಾತಿಯ ವೀರೇಂದ್ರ ಸೆಹ್ವಾಗ್ ಅವರ ಸೆಹ್ವಾಗ್ ಡೈಮಂಡ್ಸ್ ಮತ್ತು ಪಾಕಿಸ್ತಾನದ ದಿಗ್ಗಜ ಆಲ್ರೌಂಡರ್ ಶಾಹಿದ್ ಅಫ್ರಿದಿ ಅವರ ನಡುವೆ ಈ ಟಿ20 ಪಂದ್ಯ ನಡೆಯಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಸೆಹ್ವಾಗ್ ಡೈಮಂಡ್ಸ್ ತಂಡ, ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 166 ರನ್‌ಗಳ ಉತ್ತಮ ಮೊತ್ತ ಕಲೆ ಹಾಕಿತು. ತಮ್ಮ ಬ್ಯಾಟಿಂಗ್ ಗತವೈಭವ ಮೆರೆದ ನಾಯಕ ವೀರೇಂದ್ರ ಸೆಹ್ವಾಗ್ 31 ಎಸೆತಗಳಲ್ಲಿ 62 ರನ್ ಸಿಡಿಸಿ ಅಬ್ಬರಿಸಿದರು.
ಬಳಿಕ ಗುರಿ ಬೆನ್ನತ್ತಿದ ಶಾಹೀದ್ ಅಫ್ರಿದಿ ನಾಯಕತ್ವದ ಅಫ್ರಿದಿ ರಾಯಲ್ಸ್ ತಂಡ ಇನ್ನೂ 28 ಎಸೆತಗಳು ಬಾಕಿ ಇರುತ್ತಲೇ 15.2 ಓವರ್‌ಗಳಲ್ಲಿ ಗುರಿ ತಲುಪಿತು. ಇಂಗ್ಲೆಂಡ್‌ನ ಮಾಜಿ ಆಟಗಾರ ಓವೈಸ್ ಷಾ 34 ಎಸೆತಗಳಲ್ಲಿ 74 ರನ್ ಸಿಡಿಸಿ ಗೆಲುವಿನ ರೂವಾರಿಯಾದರು.

Related Articles