ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್: ಇಂಡೋನೇಷ್ಯಾಗೆ ಮಣಿದ ಭಾರತದ ವನಿತೆಯರು

0
344
PC: Twitter/PV Sindhu
ಬೆಂಗಳೂರು: ಭಾರತದ ಮಹಿಳಾ ತಂಡ ಮಲೇಷ್ಯಾದ ಅಲೊರ್ ಸೆತಾರ್‌ನಲ್ಲಿ ನಡೆಯುತ್ತಿರುವ ಏಷ್ಯಾ ಬ್ಯಾಡ್ಮಿಂಟನ್ ಟೀಮ್ ಚಾಂಪಿಯನ್‌ಷಿಪ್‌ನಲ್ಲಿ ಇಂಡೋನೇಷ್ಯಾ ವಿರುದ್ಧ ಸೋಲುಂಡಿದ್ದಾರೆ.
PC: Twitter/PV Sindhu
ಶುಕ್ರವಾರ ನಡೆದ ಪಂದ್ಯದಲ್ಲಿ ಭಾರತ ತಂಡ 1-3ರ ಅಂತರದಲ್ಲಿ ಇಂಡೋನೇಷ್ಯಾ ವಿರುದ್ಧ ಸೋಲು ಕಂಡಿತು. ತಂಡದ ನಾಯಕಿ ಹಾಗೂ ಸ್ಟಾರ್ ಶಟ್ಲರ್ ಪಿ.ವಿ ಸಿಂಧೂ ಸಿಂಗಲ್ಸ್‌ನಲ್ಲಿ ಫಿಟ್ರಿಯಾನಿ ಫಿಟ್ರಿಯಾನಿ ವಿರುದ್ಧ ಗೆದ್ದರೂ, ಉಳಿದ ಪಂದ್ಯಗಳಲ್ಲಿ ಭಾರತದ ವನಿತೆಯರು ನಿರೀಕ್ಷಿತ ಪ್ರದರ್ಶನ ತೋರಲಿಲ್ಲ.
ಸಿಂಧೂ ಡಬಲ್ಸ್‌ನಲ್ಲೂ ಕಣಕ್ಕಿಳಿದು ತಂಡವನ್ನು ಗೆಲ್ಲಿಸಲು ಶತಪ್ರಯತ್ನ ನಡೆಸಿದರಾದರೂ ಅವರ ಪ್ರಯತ್ನಕ್ಕೆ ಫಲ ಸಿಗಲಿಲ್ಲ.
ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಸಿಕ್ಕಿ ರೆಡ್ಡಿ ಜೋಡಿ ಸೋಲುಂಡರೆ, ಮತ್ತೊಂದು ಡಬಲ್ಸ್‌ನಲ್ಲಿ ಪಿ.ವಿ ಸಿಂಧೂ ಮತ್ತು ಸನ್ಯೋಗಿತಾ ಘೋರ್ಪಡೆ ಜೋಡಿಯೂ ಪರಾಭವಗೊಂಡಿತು.