Tuesday, November 12, 2024

ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್: ಕ್ವಾರ್ಟರ್ ಫೈನಲ್‌ಗೆ ಭಾರತದ ಮಹಿಳಾ ತಂಡ

PC: Twitter/PV Sindhu

ಅಲೊರ್ ಸೆತಾರ್ : ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ ಸಿಂಧು ಮುಂದಾಳತ್ವದ ಭಾರತ ಮಹಿಳಾ ತಂಡ, ಮಲೇಷ್ಯಾದ ಅಲೊರ್ ಸೆತಾರ್‌ನಲ್ಲಿ ನಡೆಯುತ್ತಿರುವ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
ಗುರುವಾರ ನಡೆದ ಪಂದ್ಯದಲ್ಲಿ ಜಪಾನ್ ಇರುದ್ಧ 1-4ರ ಅಂತರದಲ್ಲಿ ಸೋಲುಂಡರೂ ಭಾರತದ ವನಿತೆಯರು ಅಂತಿಮ 8ರ ಘಟ್ಟ ಪ್ರವೇಶಿಸುವಲ್ಲಿ ಯಶಸ್ವಿಯಾದರು. ಗುರುವಾರದ ಪಂದ್ಯದಲ್ಲಿ ಭಾರತಕ್ಕೆ ಏಕೈಕ ಗೆಲುವನ್ನು ಸಿಂಧು ತಂದುಕೊಟ್ಟರು. ವಿಶ್ವದ ನಂ.2 ರ್ಯಾಂಕ್‌ನ ಜಪಾನ್ ಆಟಗಾರ್ತಿ ಅಕಾನೆ ಯಮಗುಚಿ ಅವರನ್ನು 21-19, 21-15ರಲ್ಲಿ ಸೋಲಿಸಿದರು. ಆದರೆ ಮಹಿಳಾ ಡಬಲ್ಸ್ ಸೇರಿದಂತೆ ನಂತರದ ನಾಲ್ಕೂ ಪಂದ್ಯಗಳಲ್ಲಿ ಭಾರತೀಯ ಆಟಗಾರ್ತಿಯರು ಮುಗ್ಗರಿಸಿದರು.
ಟೂರ್ನಿಯಲ್ಲಿ ಕಿಡಂಬಿ ಶ್ರೀಕಾಂತ್ ನೇತೃತ್ವದ ಭಾರತದ ಪುರುಷರ ತಂಡವೂ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.

Related Articles