Friday, December 13, 2024

ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್: ಭಾರತಕ್ಕೆ 5-0 ಗೆಲುವು

ದಿ ಸ್ಪೋರ್ಟ್ಸ್ ಬ್ಯೂರೋ
ಬೆಂಗಳೂರು: ಮಲೇಷ್ಯಾದ ಅಲೊರ್ ಸೆತಾರ್‌ನಲ್ಲಿ ನಡೆಯುತ್ತಿರುವ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದಲ್ಲಿ ಭಾರತ ತಂಡ ಮಾಲ್ದೀವ್ಸ್ ವಿರುದ್ಧ 5-0 ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸಿದೆ.

PC: TwitterKidambi Srikanth

ಈ ಮೂಲಕ ಸ್ಟಾರ್ ಶಟ್ಲರ್ ಕಿಡಂಬಿ ಶ್ರೀಕಾಂತ್ ನೇತೃತ್ವದ ಭಾರತ ತಂಡ ಟೂರ್ನಿಯಲ್ಲಿ ಗೆಲುವಿನ ಆರಂ‘ ಕಂಡಿದೆ. ಬುಧವಾರ ನಡೆದ ಮೊದಲ ಸಿಂಗಲ್ಸ್‌ನಲ್ಲಿ ಪಂದ್ಯದಲ್ಲಿ ವಿಶ್ವದ 5ನೇ ರ್ಯಾಂಕ್‌ನ ಆಟಗಾರ ಶ್ರೀಕಾಂತ್, ಶಾಹಿದ್ ಹುಸೇನ್ ಅವರನ್ನು 21-5, 21-6ರಲ್ಲಿ ಅತ್ಯಂತ ಸುಲಭವಾಗಿ ಮಣಿಸಿದರು. 2ನೇ ಸಿಂಗಲ್ಸ್‌ನಲ್ಲಿ ಭಾರತದ ಬಿ. ಸಾಯಿ ಪ್ರಣೀತ್ 21-10, 21-4ರ ಅಂತರದಲ್ಲಿ ಅಹ್ಮದ್ ನಿಬಾಲ್ ಅವರನ್ನು ಬಗ್ಗು ಬಡಿದರು.
3ನೇ ಸಿಂಗಲ್ಸ್ ಪಂದ್ಯದಲ್ಲಿ ಸಮೀರ್ ವರ್ಮಾ, ಮೊಹಮ್ಮದ್ ಅರ್ಸಾಲಾನ್ ವಿರುದ್ಧ 21-5, 21-1ರ ಸುಲಭ ಗೆಲುವು ದಾಖಲಿಸಿ ಭಾರತಕ್ಕೆ 3-0 ಮುನ್ನಡೆ ತಂದುಕೊಟ್ಟರು.
ನಂತರ ನಡೆದ ಡಬಲ್ಸ್ ಪಂದ್ಯದಲ್ಲಿ ಭಾರತದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ, ಶಾಹಿದ್ ಹುಸೇನ್ ಜಯಾನ್ ಮತ್ತು ಶಹೀಮ್ ಹಸನ್ ಅಫ್ಶೀಮ್ ವಿರುದ್ಧ 21-8, 21-8ರಲ್ಲಿ ಅತ್ಯಂತ ಅಕಾರಯುತ ಗೆಲುವು ದಾಖಲಿಸಿ ಮುನ್ನಡೆಯನ್ನು 4-0ಗೆ ವಿಸ್ತರಿಸಿತು. ಇದಕ್ಕೂ ಮೊದಲು ನಡೆದ ಡಬಲ್ಸ್‌ನಲ್ಲಿ ಅರ್ಜುನ್ ಎಂ.ಆರ್ ಮತ್ತು ಎಸ್.ರಾಮಚಂದ್ರನ್ 21-2, 21-5ರಲ್ಲಿ ಮೊಹಮ್ಮದ್ ಅರ್ಸಾಲಾನ್ ಮತ್ತು ಅಹ್ಮದ್ ನಿಬಾಲ್ ಜೋಡಿಗೆ ಸೋಲುಣಿಸುವುದರೊಂದಿಗೆ ಭಾರತ 5-0 ಅಂತರದ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತು.

Related Articles