ಗ್ಯುಯಾಂಗ್: ಪ್ರತಿಭಾನ್ವಿತ ದೂರಗಾಮಿ ಆಟಗಾರ್ತಿ ಸಂಜೀವನಿ ಜಾಧವ್, ಚೀನಾದ ಗ್ಯುಯಾಂಗ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಕ್ರಾಸ್ ಕಂಟ್ರಿ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.
ಮಹಿಳೆಯ 8 ಕಿ.ಮೀ ಸ್ಪರ್ಧೆಯನ್ನು 28 ನಿಮಿಷ, 9 ಸೆಕೆಂಡ್‌ಗಳಲ್ಲಿ ಪೂರೈಸಿದ ಮಹಾರಾಷ್ಟ್ರದ ನಾಸಿಕ್‌ನವರಾದ 20 ವರ್ಷದ ಸಂಜೀವಿನಿ ಜಾಧವ್ ಕಂಚಿನ ಪದಕ ಗೆದ್ದರು. ಚೀನಾದ ಲಿ ಡಾನ್ 28 ನಿಮಿಷ 03 ಸೆಕೆಂಡ್‌ಗಳಲ್ಲಿ ಸ್ಪರ್ಧೆ ಕ್ರಮಿಸಿ ಚಿನ್ನ ಗೆದ್ದರೆ, 28.06 ನಿಮಿಷಗಳಲ್ಲಿ ಪೂರೈಸಿದ ಜಪಾನ್‌ನ ಅಬೆ ಯುಕಾರಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.
ತಂಡ ವಿಭಾಗದಲ್ಲೂ ಭಾರತ ಕಂಚಿನ ಪದಕ ಗೆದ್ದಿತು. ಸಂಜೀವನಿ, ಸ್ವಾತಿ ಗಾಧವೆ, ಜುಮಾ ಖತುನ್ ಮತ್ತು ಲಲಿತಾ ಬಾಬರ್ ತಂಡದಲ್ಲಿದ್ದರು.