Friday, June 14, 2024

ಎಫ್‌ಸಿ ಗೋವಾಗೆ ಸೋಲುಣಿಸಿದ ಚೆನ್ನೈಯಿನ್

ಗೋವಾ: ಇನಿಗೊ ಕಾಲ್ಡರಿನ್ 52ನೇ ನಿಮಿಷದಲ್ಲಿ ಗಳಿಸಿದ ಏಕೈಕ ಗೋಲಿನಿಂದ ಆತಿಥೇಯ ಗೋವಾ ತಂಡವನ್ನು 1-0 ಗೋಲಿನ ಅಂತರದಲ್ಲಿ ಮಣಿಸಿದ ಚೆನ್ನೈಯಿನ್ ಎಫ್‌ಸಿ ಇಂಡಿಯನ್  ಸೂಪರ್ ಲೀಗ್‌ನ ಅಂಕ ಪಟ್ಟಿಯಲ್ಲಿ  ಮೂರನೇ ಸ್ಥಾನಕ್ಕೇರಿ, ನಾಕ್ ಔಟ್ ಹಂತವನ್ನು ಮತ್ತಷ್ಟು ಭದ್ರಪಡಿಸಿಕೊಂಡಿತು. ಈ ಸೋಲಿನೊಎಂದಿಗೆ ಗೋವಾ ತಂಡದ ನಾಕ್ ಔಟ್ ತಲಪುವ ಹಾದಿ ಮತ್ತಷ್ಟು ಕಠಿಣವಾಯಿತು.

52 ನೇ ನಿಮಿಷದಲ್ಲಿ  ಇನಿಗೊ ಕಾಲ್ಡರಿನ್ ಗಳಿಸಿದ ಗೋಲಿನಿಂದ ಪ್ರವಾಸಿ ಚೆನ್ನೈಯಿನ್ ತಂಡ ಮುನ್ನಡೆ ಕಂಡಿತು. ಗೋಲು ಯಾರು ಗಳಿಸರೆಂಬುದು ತೀರ್ಮಾನ ಮಾಡಲು ಬಹಳ ಸಮಯ ಬೇಕಾಯಿತು. ಗೋವಾದ ಆಟಗಾರರು ನಿಬ್ಬೆರಗಾಗಿ ನೋಡುತ್ತಿದ್ದರೆ, ಪ್ರೇಕ್ಷಕರು ಕೂಡ ತಲೆಗೆ ಕೈಕೊಟ್ಟು  ವೌನಕ್ಕೆ ಶರಣಾದರು. ಆರಂಭದಲ್ಲಿ ಉಡುಗೊರೆ ಗೋಲಿನಂತೆ ಕಂಡು ಬಂದಿತ್ತು. ಗ್ರೆಗೊರಿ ನೆಲ್ಸನ್ ತುಳಿದ ಚೆಂಡನ್ನು ನವೀನ್ ಕುಮಾರ್  ಉತ್ತಮ ರೀತಿಯಲ್ಲಿ ತಡೆದಿದ್ದರು. ಆದರೆ ಕೈ ತುಪ್ಪಿದ ಚೆಂಡು ಅಲ್ಲೆ  ಗೋವಾ ಆಟಗಾರರ ಕಾಲಿನ ನಡುವೆ ಹಾದು ಹೋಯಿತು. ಇನಿಗೊ ಕಾಲ್ಡರಿನ್ ಕೂಡಲೇ ಚೆಂಡನ್ನು ನೆಟ್ ತಳ್ಳಿದರು. ಗೋಲು ಯಾರು ಗಳಿಸಿದರೆಂಬುದು ರೆಫರಿಗೆ ಅರಿವಾಗಲೇ ಇಲ್ಲ. ಕಾಲ್ಡರಿನ್ ಚೆಂಡನ್ನು ಹಿಡಿದು ಓಡಿದಾಗಲೇ ಅವರು ಗೋಲು ಗಳಿಸಿದ್ದಾರೆಂದು ಅರಿವಾಯಿತು. ಇದರೊಂದಿಗೆ ಚೆನ್ನೈಯಿನ್ ತಂಡ 1-0 ಗೋಲಿನಿಂದ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಗೋವಾ ತಂಡದ ಅದೃಷ್ಟ ಚೆನ್ನಾಗಿರಲಿಲ್ಲ. ಎರಡು ಬಾರಿ ಗೋಲು ಗಳಿಸುವ ಅವಕಾಶ ಸಿಕ್ಕಿದರೂ ಚೆಂಡು ನೆಟ್ ಸೇರಲಿಲ್ಲ.

Related Articles