Thursday, September 12, 2024

ಇಂಡಿಯನ್ ಸೂಪರ್ ಲೀಗ್‌: ಮಹಾರಾಷ್ಟ್ರ ಡರ್ಬಿ ಗೆದ್ದ ಪುಣೆ

ಮುಂಬೈ: ಪ್ರಥಮಾರ್ಧಲ್ಲಿ  ಡಿಗೋ ಕಾರ್ಲೋಸ್ (18ನೇ ನಿಮಿಷ) ಹಾಗೂ ದ್ವಿತಿಯಾರ್ಧದಲ್ಲಿ ನಾಯಕ ಮಾರ್ಸೆಲೋ ಪೆರೆರಾ (83ನೇ ನಿಮಿಷ) ಗಳಿಸಿದ ಅಮೂಲ್ಯ ಗೋಲಿನ ನೆರವಿನಿಂದ ಪುಣೆ ವಿರುದ್ಧ ನಡೆದ ಇಂಡಿಯನ್ ಸೂಪರ್ ಲೀಗ್‌ನ ಮಹಾರಾಷ್ಟ್ರ ಡರ್ಬಿಯಲ್ಲಿ  ಎಫ್‌ಸಿ ಪುಣೆ ಸಿಟಿ ತಂಡ 2-0 ಗೋಲುಗಳ ಅಂತರದಲ್ಲಿ ಜಯ ಗಳಿಸಿ ಎರಡನೇ ಸ್ಥಾನವನ್ನು ಭದ್ರಪಡಿಸಿಕೊಂಡಿತು.
ಮಾರ್ಸೆಲೋ ಮುಂಬೈ ವಿರುದ್ಧ ಗಳಿಸಿದ ಮತ್ತೊಂದು ಗೋಲು ಇಂಡಿಯನ್ ಸೂಪರ್ ಲೀಗ್‌ನಲ್ಲಿ ಅವರ ಗೋಲು ಗಳಿಕೆಯನ್ನು ಎಂಟಕ್ಕೆ ಕೊಂಡೊಯ್ಯಿತು. ಮುಂಬೈಗೆ ಈ ಸೋಲನ್ನು ಅಗರಿಸಿಕೊಳ್ಳುವುದು ಕಷ್ಟ, ಏಕೆಂದರೆ ಇಲ್ಲಿ ಜಯ ಗಳಿಸಿರುತ್ತಿದ್ದರೆ ನಾಲ್ಕರ ಹಂತ ತಲಪುವ ಅವಕಾಶ ಮತ್ತಷ್ಟು ಉತ್ತಮವಾಗಿರುತ್ತಿತ್ತು.

Related Articles