Sunday, September 8, 2024

ಇಂಡಿಯನ್ ಸೂಪರ್ ಲೀಗ್‌: ನಾರ್ತ್‌ಗೆ ಸೋಲುಣಿಸಿದ ಜೆಮ್ಷೆಡ್ಪುರ

ಜೆಮ್ಷೆಡ್ಪುರ: 51ನೇ ನಿಮಿಷದಲ್ಲಿ ವೆಲ್ಲಿಂಗ್ಟನ್ ಪ್ರಿಯೋರಿ ಗಳಿಸಿದ ಏಕೈಕ ಗೋಲಿನಿಂದ ಪ್ರವಾಸಿ ನಾರ್ತ್‌ಈಸ್ಟ್ ಯುನೈಟೆಡ್ ತಂಡದ ವಿರುದ್ಧ 1-0 ಗೋಲಿನಿಂದ ಜಯ ಗಳಿಸಿದ ಜೆಮ್ಷೆಡ್ಪುರ ಎಫ್‌ಸಿ ಇಂಡಿಯನ್ ಸೂಪರ್ ಲೀಗ್‌ನಲ್ಲಿ  ಸೆಮಿಫೈನಲ್ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿತು.
ಆತಿಥೇಯ ಜೆಮ್ಷೆಡ್ಪುರ ತಂಡ ದ್ವಿತಿಯಾರ್ಧಲ್ಲಿ ಮಿಂಚಿನ ಆಟ ಪ್ರದರ್ಶಿಸಿತು. ಆರಂಭದಲ್ಲೇ ಪ್ರವಾಸಿ ತಂಡದ ಮೇಲೆ ಒತ್ತಡ ಹೇರಲಾಂಭಿಸಿದರು. ಇದರ ಪರಿಣಾಮ 49ನೇ ನಿಮಿಷದಲ್ಲಿ ಜೆಮ್ಷೆಡ್ಪುರ ತಂಡಕ್ಕೆ ಫ್ರೀ ಕಿಕ್ ಅವಕಾಶ. ತಿರಿ ಗೋಲ್‌ಬಾಕ್ಸ್‌ಗೆ ಸಾಕಷ್ಟು ದೂರದಲ್ಲಿರುವ ಚೆಂಡನ್ನು ತುಳಿದರು. ಪ್ರಿಯೊರಿ ಹೆಡರ್ ಮೂಲಕ ಗೋಲು ಗಳಿಸುವ ಯತ್ನ ಮಾಡಿದರೂ ಚೆಂಡು ಗೊನ್ಸಾಲ್ವೆಸ್ ನಿಯಂತ್ರಣಕ್ಕೆ ಸಿಕ್ಕು ಕಾರ್ನರ್‌ಗೆ ಸಾಗಿತು.
51ನೇ ನಿಮಿಷದಲ್ಲಿ ವೆಲ್ಲಿಂಗ್ಟನ್ ಪ್ರಿಯೋರಿ ಋತುವಿನ ಒಂದು ಉತ್ತಮ ಎನ್ನಬಹುದಾದ ಗೋಲನ್ನು ಗಳಿಸಿ ಆತಿಥೇಯ ತಂಡಕ್ಕೆ ಮುನ್ನಡೆ ಕಲ್ಪಿಸಿದರು. ಅತ್ಯಂತ ಎತ್ತರದಲ್ಲಿ ಬಂದ ಚೆಂಡಿಗೆ ಅಷ್ಟೇ ಉತ್ತಮ ರೀತಿಯಲ್ಲಿ  ಕಿಕ್ ನೀಡಿದ ಪ್ರಿಯೊರಿ ತಂಡದ ಮುನ್ನಡೆಗೆ ಕಾರಣರಾದರು. ಪ್ರಥಮಾರ್ಧಲ್ಲಿ ಪ್ರವಾಸಿ ತಂಡದ ಮೇಲೆ ನಿಯಂತ್ರಣ ಸಾಧಿಸುವಲ್ಲಿ ವಿಫಲವಾದ ಜೆಮ್ಷೆಡ್ಪುರ ದ್ವಿತಿಯಾರ್ಧದಲ್ಲಿ ತನ್ನ ನೈಜ ಸಾಮರ್ಥ್ಯವನ್ನು ತೋರಿತು. ಎಡಭಾಗದಲ್ಲಿ ಇಜು ಅಜೂಕಾ ತುಳಿದ ಚೆಂಡು ಪ್ರಿಯೊರಿಗೆ ಅದ್ಭುತ ಗೋಲು ಗಳಿಸಲು ನೆರವಾಯಿತು. ಜೆಮ್ಷೆಡ್‌ಪುರ 1-0 ಅಂತರದಲ್ಲಿ ಮುನ್ನಡೆಯಿತು.

Related Articles