ಇಂಡಿಯನ್ ವೆಲ್ಸ್: ಯೂಕಿ ಭಾಂಬ್ರಿ ಜಯದ ಓಟಕ್ಕೆ ಸ್ಯಾಮ್ ಕ್ವೆರಿ ಬ್ರೇಕ್

0
309
PC: Facebook/Yuki Bhambri
ಇಂಡಿಯನ್ ವೆಲ್ಸ್: ಪ್ರತಿಷ್ಠಿತ ಇಂಡಿಯನ್ ವೆಲ್ಸ್ ಟೂರ್ನಿಯಲ್ಲಿ ಭಾರತದ ಪ್ರತಿಭಾವಂತ ಆಟಗಾರ ಯೂಕಿ ಭಾಂಬ್ರಿ ಅವರ ಅಜೇಯ ಓಟಕ್ಕೆ ಬ್ರೇಕ್ ಬಿದ್ದಿದೆ.
PC: Facebook/Yuki Bhambri
ಬುಧವಾರ ನಡೆದ ಪುರುಷರ ಸಿಂಗಲ್ಸ್‌ನ 3ನೇ ಸುತ್ತಿನ ಪಂದ್ಯದಲ್ಲಿ ಯೂಕಿ ಭಾಂಬ್ರಿ, ಅಮೆರಿಕದ ಸ್ಯಾಮ್ ಕ್ವೆರಿ ವಿರುದ್ಧ 7-6, 4-6, 4-6 ಸೆಟ್‌ಗಳ ಅಂತರದಲ್ಲಿ ಸೋಲು ಕಂಡು ಹೋರಾಟ ಅಂತ್ಯಗೊಳಿಸಿದರು. ಮೊದಲ ಸೆಟ್ಟನ್ನು ಟೈ ಬ್ರೇಕರ್‌ನಲ್ಲಿ ಗೆದ್ದ ಯೂಕಿ ಉತ್ತಮ ಆರಂಭ ಪಡೆದರು. ಆದರೆ ನಂತರದ ಎರಡೂ ಸೆಟ್‌ಗಳಲ್ಲಿ ಪ್ರಬಲ ಪೈಪೋಟಿ ನೀಡಿದರಾದರೂ, ಗೆಲುವು ದೂರವೇ ಉಳಿಯಿತು. ಆರಂಭಿಕ ಹಿನ್ನಡೆಯನ್ನು ಮೆಟ್ಟಿ ನಿಂತ ವಿಶ್ವದ 21ನೇ ರ್ಯಾಂಕ್‌ ಆಟಗಾರ ಸ್ಯಾಮ್ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ಅರ್ಹತಾ ಸುತ್ತಿನಲ್ಲಿ ಎರಡು ಗೆಲುವುಗಳನ್ನು ದಾಖಲಿಸಿದ್ದ ಯೂಕಿ, ಪ್ರಧಾನ ಹಂತದಲ್ಲಿ ಸತತ 2 ಪಂದ್ಯಗಳನ್ನು ಗೆದ್ದಿದ್ದರು. ಈ ಮೂಲಕ ಇಂಡಿಯನ್ ವೆಲ್ಸ್‌ನಲ್ಲಿ ಸತತ ನಾಲ್ಕು ಪಂದ್ಯಗಳನ್ನು ಗೆದ್ದು ಪ್ರಿ ಕ್ವಾರ್ಟರ್ ಫೈ ನಲ್ ಪ್ರವೇಶಿಸುವ ವಿಶ್ವಾಸದಲ್ಲಿದ್ದರು. ಆದರೆ ಯೂಕಿ ಭಾಂಬ್ರಿ ಕನಸನ್ನು ಸ್ಯಾಮಿ ಕ್ವೆರಿ ಭಗ್ನಗೊಳಿಸಿದ್ದಾರೆ.