Saturday, July 20, 2024

ಇಂಡಿಯನ್ ವೆಲ್ಸ್ ಟೆನಿಸ್ ಟೂರ್ನಿ: ಸೆಮಿಫೈನಲ್‌ಗೆ ಫೆಡರರ್, 6ನೇ ಕಿರೀಟಕ್ಕೆ ಒಂದೇ ಮೆಟ್ಟಿಲು

ಇಂಡಿಯನ್ ವೆಲ್ಸ್: ವಿಶ್ವದಾಖಲೆಯ 20 ಗ್ರ್ಯಾನ್‌ಸ್ಲ್ಯಾಮ್‌ಗಳ ಒಡೆಯ ಸ್ವಿಟ್ಜರ್ಲೆಂಡ್‌ನ ದಿಗ್ಗಜ ಆಟಗಾರ ರೋಜರ್ ಫೆಡರರ್, ಇಂಡಿಯನ್ ವೆಲ್ಸ್ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ ಹಾಲಿ ಚಾಂಪಿಯನ್ ಫೆಡರರ್, ಇಂಡಿಯನ್ ವೆಲ್ಸ್‌ನಲ್ಲಿ ಪ್ರಶಸ್ತಿ ಉಳಿಸಿಕೊಳ್ಳುವತ್ತ ಮುನುಗ್ಗುತ್ತಿದ್ದಾರೆ.

PC: twitter/Roger Federer

ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಶ್ವದ ನಂ.1 ಆಟಗಾರ ರೋಜರ್, ದಕ್ಷಿಣ ಕೊರಿಯಾದ ಹೆಯಾಗ್ ಚುಂಗ್ ಅವರನ್ನು 7-5, 6-1ರ ನೇರ ಸೆಟ್‌ಗಳಿಂ ಮಣಿಸಿದರು. ಅಲ್ಲದೆ ಪ್ರಸಕ್ತ ಸಾಲಿನಲ್ಲಿ ತಮ್ಮ ಅಜೇಯ ಓಟವನ್ನು 16 ಪಂದ್ಯಗಳಿಗೆ ವಿಸ್ತರಿಸಿದರು. 2006ರ ಎಟಿಪಿ ಕ್ಯಾಲೆಂಡರ್ ವರ್ಷದಲ್ಲಿ ಫೆಡರರ್, ಸತತ 16 ಪಂದ್ಯಗಳನ್ನು ಗೆದ್ದಿದ್ದರು.
ಭಾನುವಾರ ನಡೆಯುವ ಇಂಡಿಯನ್ ವೆಲ್ಸ್ ಫೈನಲ್‌ನಲ್ಲಿ ಫೆಡರರ್ ಗೆದ್ದರೆ, ವೃತ್ತಿಜೀವನ ಶ್ರೇಷ್ಠ ಸಾಧನೆಯಾಗಿ ಸತತ 17 ಪಂದ್ಯಗಳನ್ನು ಗೆದ್ದ ಸಾಧನೆ ಮಾಡಲಿದ್ದಾರೆ. ಅಲ್ಲದೆ ದಾಖಲೆಯ 6ನೇ ಬಾರಿ ಇಂಡಿಯನ್ ವೆಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಳ್ಳಲಿದ್ದಾರೆ.

Related Articles