ಆ ಒಂದು ವಿಚಾರಕ್ಕೆ ರೋಹಿತ್ ಮೇಲೆ ಪತ್ನಿಗೆ ಭಾರೀ ಕೋಪ…!

0
371
PC: Instagram/Rohit Sharma

ಬೆಂಗಳೂರು: ಟೀಮ್ ಇಂಡಿಯಾದ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿಶ್ವದಾಖಲೆಯ 3 ದ್ವಿಶತಕಗಳನ್ನು ದಾಖಲಿಸಿ ಕ್ರಿಕೆಟ್ ಜಗತ್ತಿನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

PC: Instagram/Rohit Sharma

ರೋಹಿತ್ ಶರ್ಮಾ ಯಶಸ್ಸಿನ ಹಿಂದೆ ಅವರ ಪತ್ನಿ ರಿತಿಕಾ ಸಜ್‌ದೇ ಅವರ ಪಾತ್ರ ತುಂಬಾ ದೊಡ್ಡದು. ತಮ್ಮ ಮ್ಯಾನೇಜರ್ ಆಗಿದ್ದ ರಿತಿಕಾ ಅವರನ್ನೇ ರೋಹಿತ್ ಮದುವೆಯಾದ ನಂತರ ಅವರ ಅದೃಷ್ಠವೇ ಬದಲಾಗಿದೆ. ರೋಹಿತ್ ಕ್ರಿಕೆಟ್ ಮೈದಾನದಲ್ಲಿ ಖದರ್ ತೋರುತ್ತಿದ್ದಾರೆ.
ಆದರೆ ರೋಹಿತ್ ಶರ್ಮಾ ಅವರ ಮುದ್ದಿನ ಮಡದಿ ರಿತಿಕಾ ಸಜ್‌ದೇ ಅವರಿಗೆ ಪತಿಯ ಮೇಲೆ ಒಂದು ವಿಚಾರಕ್ಕೆ ತುಂಬಾ ಸಿಟ್ಟಿದೆಯಂತೆ. ಎಲ್ಲೇ ಹೋದರು ರೋಹಿತ್ ಶರ್ಮಾ ಅವರ ಆ ಒಂದು ಗುಣ ರಿತಿಕಾಗೆ ತುಂಬಾ ಕಿರಿ ಕಿರಿ ಉಂಟು ಮಾಡುತ್ತಂತೆ. ಆ ಗಂಡ ಮಾಡುವ ಕಿರಿಕಿರಿಯಿಂದಾಗಿ ರಿತಿಕಾ ಈ ವಿಷಯಕ್ಕೆ ರೋಹಿತ್ ಶರ್ಮಾ ಅವರೊಂದಿಗೆ ಹಲವು ಬಾರಿ ಜಗಳವಾಡಿದ್ದೂ ಇದೆ.
ಪತ್ನಿಗೆ ಕಿರಿಕಿರಿ ತರುತ್ತಂತೆ ರೋಹಿತ್ ಸೆಲ್ಫಿ ಕ್ರೇಜ್!
ಹೌದು. ರೋಹಿತ್ ಶರ್ಮಾ ತುಂಬಾ ಸೆಲ್ಫಿ ಕ್ರೇಜ್ ಇರುವ ವ್ಯಕ್ತಿ. ಪತ್ನಿಯೊಂದಿಗೆ ಎಲ್ಲೇ ಹೋದರೂ ಸದಾ ಸೆಲ್ಫಿಯಲ್ಲೇ ರೋಹಿತ್ ಮುಳುಗಿರುತ್ತಾರೆ. ಹೋದಲ್ಲೆಲ್ಲಾ ಬಂದಲ್ಲೆಲ್ಲಾ ಮೊಬೈಲ್ ಹಿಡಿದು ಸೆಲ್ಫಿ ಕ್ಲಿಕ್ಕಿಸುತ್ತಾರೆ ರೋಹಿತ್. ಗಂಡನ ಸೆಲ್ಫಿ ಕ್ರೇಜ್‌ಗೆ ಒಂದಷ್ಟು ಹೊತ್ತು ಸಾಥ್ ನೀಡುವ ರಿತಿಕಾ, ನಂತರ ಸೆಲ್ಫಿಗೆ ಪೋಸ್ ಕೊಟ್ಟು ಕೊಟ್ಟು ಸುಸ್ತಾಗುತ್ತಾರಂತೆ. ನಂತರ ಮುಖ ತಿರುಗಿಸುತ್ತಾರೆ ಎಂದು ಸ್ವತಃ ರೋಹಿತ್ ಶರ್ಮಾ ಅವರೇ ಹೇಳಿದ್ದಾರೆ.