Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಸುರಾನ ಕಾಲೇಜಿಗೆ ಬೆಂಗಳೂರು ವಿವಿ ವಾಲಿಬಾಲ್ ಕಿರೀಟ

ಬೆಂಗಳೂರು:  ಸುರಾನ ಕಾಲೇಜು ವಾಲಿಬಾಲ್ ತಂಡವು ಬೆಂಗಳೂರು ವಿವಿ ಅಂತರ್ ವಲಯ, ಅಂತರ್ ಕಾಲೇಜು ವಾಲಿಬಾಲ್ ಚಾಂಪಿಯನ್ ಷಿಪ್ ನಲ್ಲಿ ಸಮಗ್ರ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ.


ನಾಲ್ಕು ತಂಡಗಳ ಸೂಪರ್ ಲೀಗ್ ನಲ್ಲಿ ಸುರಾನ ಪಡೆ ಎಲ್ಲ ಮೂರೂ ಪಂದ್ಯಗಳನ್ನು ಗೆದ್ದು ಸಾರ್ವಭೌಮತ್ವ ಸಾಧಿಸಿತು.
ಆರ್ ಜೆಎಸ್ ಎಫ್ ಜೆಸಿ ಹಾಗೂ ಸುರಾನ ತಂಡಗಳು ದಕ್ಷಿಣ ವಲಯದಲ್ಲಿ ಪ್ರಭುತ್ವ ಸಾಧಿಸಿದವು. ಅದಿತಿ ಕಾಲೇಜು ಮತ್ತು ಹಾರೋ ಹಳ್ಳಿಯ ಎಫ್ ಜೆಸಿ ತಂಡಗಳು ಉತ್ತರ ವಲಯದಿಂದ ಅರ್ಹತೆ ಪಡೆದವು.
ಸೂಪರ್ ಲೀಗ್ ನಲ್ಲಿ ಸುರಾನ ಕಾಲೇಜು ತಂಡವು ಜಿಎಫ್ ಜಿಸಿ ಹಾರೋಹಳ್ಳಿ ವಿರುದ್ಧ 25-17, 25-18 ಅಂತರದಲ್ಲಿ ಜಯ ಗಳಿಸಿತು. ಆರ್ ಜೆಎಸ್ ಕಾಲೇಜು ವಿರುದ್ಧದ ಪಂದ್ಯದಲ್ಲಿ ಸುರಾನ ಪಡೆ 25-17, 25-18 ಅಂತರದಲ್ಲಿ ಗೆದ್ದಿತು. ಫೈನಲ್ ಪಂದ್ಯದಲ್ಲಿ ಸುರಾನ ಕಾಲೇಜು ಅದಿತಿ ಕಾಲೇಜು ತಂಡವನ್ನು 25-21, 25-19 ಅಂತರದಲ್ಲಿ ಮಣಿಸಿತು.

ಚಿತ್ರ ಕ್ಯಾಪ್ಷನ್
(ಎಡದಿಂದ ಬಲಕ್ಕೆ..).ತರುಣ್, ಮಂಜು, ಶ್ರೀವತ್ಸ, ಶೀತಲ್ ಕಿರಣ್ (ದೈಹಿಕ ಶಿಕ್ಷಣ ನಿರ್ದೇಶಕರು), ಅರವಿಂದ್, ಶ್ರೀನಿಧಿ, ನಿಖಿಲ್, ಚಂದನ್.(ಕುಳಿತವರು: ಶಶಿ ಹಾಗೂ ಹರೀಶ್)


administrator