SUFC ಇಂಟರ್-ಸಿಟಿ ಪಂದ್ಯಾವಳಿಯಲ್ಲಿ ಮಿಂಚಿದ ಯುವ ಪ್ರತಿಭೆಗಳು
ಬೆಂಗಳೂರು: ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಆಯೋಜಿಸಿದ್ದ ಇಂಟರ್-ಸಿಟಿ ಪಂದ್ಯಾವಳಿ ಯಶಸ್ವಿಯಾಗಿ ನೆರವೇರಿದೆ. ಬೆಂಗಳೂರಿನ ಹಲಸೂರಿನಲ್ಲಿರುವ ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ನಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ ಸೌತ್ ಯುನೈಟೆಡ್ ಫುಟ್‌ಬಾಲ್ ಅಕಾಡೆಮಿಯ ಬೆಂಗಳೂರು ಮತ್ತು ಪುಣೆಯ ಮಕ್ಕಳು ಪರಸ್ಪರ ಸ್ಪರ್ಧಿಸಿ ಮಿಂಚಿದ್ದಾರೆ. Young footballers’ shines at South United Football Club Inter City Tournament.
ಈ ಇಂಟರ್ ಸಿಟಿ ಪಂದ್ಯಾವಳಿಯಲ್ಲಿ ಪುಣೆ ಮತ್ತು ಬೆಂಗಳೂರಿನಿಂದ ಸುಮಾರು 250 ಯುವ ಫುಟ್ಬಾಲ್ ಆಟಗಾರರು ಭಾಗವಹಿಸಿದ್ದರು. ಪುಣೆ ತಂಡಗಳು ಐದು ವಿಭಾಗಗಳಲ್ಲಿ ನಾಲ್ಕು ಪ್ರಶಸ್ತಿಗಳನ್ನು ಗೆದ್ದರೆ, ಬೆಂಗಳೂರು ತಂಡ ಒಂದು ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಪುಣೆ ತಂಡ ಅಡರ್-9, ಅಡರ್-11, ಅಡರ್-13, ಮತ್ತು ಅಡರ್-15 ನಲ್ಲಿ ಪ್ರಶಸ್ತಿಗಳನ್ನು ಗೆದಿದ್ದು, ಅಂಡರ್-17 ನಲ್ಲಿ ಬೆಂಗಳೂರಿನ ಎಸ್‌ಯುಎಫ್‌ಸಿ ಪಿಲ್ಲರ್ಸ್ ಜಯ ಸಾಧಿಸಿದೆ. ಜೊತೆಗೆ ಪುಣೆ ತಂಡವು ಅತ್ಯುತ್ತಮ ಗೋಲ್ ಕೀಪರ್, ಉದಯೋನ್ಮುಖ ಆಟಗಾರ ಹಾಗು ಅತ್ಯುತ್ತಮ ಕೋಚ್ ಗಳಿಗೆ ವೈಯಕ್ತಿಕ ತಮ್ಮದಾಗಿಸಿಕೊಂಡಿದೆ.
ವೈಯಕ್ತಿಕ ವಿಭಾಗದ ಪ್ರಶಸ್ತಿಗಳ ವಿವರ:
ಅಂಡರ್-9
ಅತ್ಯುತ್ತಮ ಗೋಲ್ ಕೀಪರ್: ಅಗಸ್ತ್ಯ ಸುರೇಶ್ (ಬೆಂಗಳೂರು)
ಅತ್ಯುತ್ತಮ ಆಟಗಾರ: ಏಕಂ ಸಿಂಗ್ (ಪುಣೆ)
ಉದಯೋನ್ಮುಖ ಆಟಗಾರ: ಆಸ್ಟಿನ್ ಲೋರೀಗ್ಗಿಯೋ (ಬೆಂಗಳೂರು), ನೋರಾ ಗುಪ್ತ (ಪುಣೆ)
ಅತ್ಯುತ್ತಮ ಕೋಚ್: ರಿಯಾನ್ ಯಾದಗಿರಿ (ಪುಣೆ), ನವೀನ್ ಕುಮಾರ್ (ಬೆಂಗಳೂರು)
ಅಂಡರ್-11
ಅತ್ಯುತ್ತಮ ಗೋಲ್ ಕೀಪರ್: ಅರ್ಹತ್ವ ಡೋಂಗ್ರೆ (ಪುಣೆ)
ಅತ್ಯುತ್ತಮ ಆಟಗಾರ: ಅವ್ಯುಕ್ತ್ ನಂದಿ (ಪುಣೆ)
ಉದಯೋನ್ಮುಖ ಆಟಗಾರ: ಕಬೀರ್ ದೂತ್ (ಪುಣೆ), ಶನಯಾ (ಬೆಂಗಳೂರು)
ಅತ್ಯುತ್ತಮ ಕೋಚ್: ಪ್ರತಿಕ್ಷ ದೇವಾಂಗ್ (ಪುಣೆ), ಉಮಾಶಂಕರ್ (ಬೆಂಗಳೂರು)
ಅಂಡರ್-13
ಅತ್ಯುತ್ತಮ ಗೋಲ್ ಕೀಪರ್: ದಿಯಾನ್ ಗೋಯಲ್ (ಪುಣೆ)
ಅತ್ಯುತ್ತಮ ಆಟಗಾರ: ಜೆಡೆನ್ ಜೋಸೆಫ್ (ಬೆಂಗಳೂರು)
ಉದಯೋನ್ಮುಖ ಆಟಗಾರ: ಡೆಲಿಝ ಉನ್ವಾಲ (ಬೆಂಗಳೂರು)
ಅತ್ಯುತ್ತಮ ಕೋಚ್: ಪ್ರಬುದ್ಧ ಗೈಕ್ವಾಡ್ (ಪುಣೆ), ಅದಿತಿ ಪಿ ಜಾಧವ್ (ಬೆಂಗಳೂರು)
ಅಂಡರ್-15
ಅತ್ಯುತ್ತಮ ಗೋಲ್ ಕೀಪರ್: ಸಿದ್ದಾರ್ಥ್ ಗುಪ್ತ (ಬೆಂಗಳೂರು)
ಅತ್ಯುತ್ತಮ ಆಟಗಾರ: ಅರ್ಪಿತ್ ಮಿಶ್ರಾ (ಪುಣೆ)
ಅತ್ಯುತ್ತಮ ಕೋಚ್: ಸಿದ್ದಾರ್ಥ್ ಮಿಶ್ರಾ (ಬೆಂಗಳೂರು), ಮೊಹಸಿನ್ ಅಬ್ದುಲ್ಲಾ ತಂಬೋಲಿ (ಪುಣೆ)
ಅಂಡರ್-17
ಅತ್ಯುತ್ತಮ ಆಟಗಾರ: ಹರ್ಷಿತ್ ಎಸ್ ವಿ (ಬೆಂಗಳೂರು)
ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಆಯೋಜಿಸಿದ್ದ ಇಂಟರ್-ಸಿಟಿ ಪಂದ್ಯಾವಳಿ ಬಗ್ಗೆ ಸೌತ್ ಯುನೈಟೆಡ್ ಸ್ಪೋರ್ಟ್ಸ್ ಫೌಂಡೇಶನ್‌ನ ಕ್ರೀಡಾ ನಿರ್ದೇಶಕ ಟೆರಿ ಫಿಲನ್ ಮಾತನಾಡಿ ‘ ಈ ಪಂದ್ಯಾವಳಿಯ ಉದ್ದೇಶ ಬೆಂಗಳೂರಿನಲ್ಲಿ ಯುವ ಆಟಗಾರರನ್ನು ಒಂದುಗೂಡಿಸುವುದು ಜೊತೆಗೆ ಇಂಟರ್-ಸಿಟಿ ಪಂದ್ಯಾವಳಿಯ ಅನುಭವವನ್ನು ನೀಡುವುದಾಗಿತ್ತು. ಆಟಗಾರರು, ಕೋಚ್ ಗಳು ಮತ್ತು ಪೋಷಕರು ಈ ಪಂದ್ಯಾವಳಿಯನ್ನು ಆನಂದಿಸಿದ್ದಾರೆ. ನಾಳವು ತಮಟ್ಟದಿಂದ ಫುಟ್ಬಾಲ್ ಆಟವನ್ನು ಬೆಳೆಸಲು ಪ್ರಯತ್ನಿಸುತ್ತಿದ್ದೇವೆ ಹಾಗು BDFA ಲೀಗ್‌ನಲ್ಲಿ ಆಡುವ ಮೊದಲ ತಂಡವನ್ನು ಕೂಡ ಪಡೆದುಕೊಂಡಿದ್ದೇವೆ. ಪುಣೆ ತಂಡವು ಬೆಂಗಳೂರು ಬಂದಿದ್ದು ಸಂತಸ ನೀಡಿದೆ. ಆಟಗಾರರಿಗೆ ಕ್ರೀಡೆ ಮಾನಸಿಕವಾಗಿ, ದೈಹಿಕವಾಗಿ ಸಹಾಯ ಮಾಡುತ್ತದೆ. ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಅದ್ಭುತ ವಸತಿ ಅಕಾಡೆಮಿಯನ್ನು ಕೂಡ ನಿರ್ಮಿಸುತ್ತಿದ್ದು, ಕಳೆದ ಕೆಲವು ವರ್ಷಗಳಿಂದ ಕ್ಲಬ್ ಕಂಡ ಬೆಳವಣಿಗೆಯು ಅಪಾರವಾಗಿದೆ ಎಂದರು.
ಪಂದ್ಯಾವಳಿ ಹೊರತುಪಡಿಸಿ ಸೌತ್ ಯುನೈಟೆಡ್ ಸ್ಪೋರ್ಟ್ಸ್ ಫೌಂಡೇಶನ್‌ನ ಡೈರೆಕ್ಟರ್ ಟೆರಿ ಫಿಲನ್ ಭೇಟಿ, ಕ್ಲಬ್ ನ ಹಿರಿಯ ತಂಡದ ಆಟಗಾರರೊಂದಿಗೆ ಸಂವಾದ ಹಾಗು ಜನವರಿ 11 ರಂದು ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಬೆಂಗಳೂರು ಎಫ್‌ಸಿ ಮತ್ತು ಮೊಹಮ್ಮದನ್ ಎಸ್‌ಸಿ ನಡುವಿನ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಪಂದ್ಯದಲ್ಲಿ ಪುಣೆ ಹಾಗು ಬೆಂಗಳೂರು ತಂಡದ ಆಟಗಾರರು ಭಾಗವಹಿಸಿದ್ದರು.
ಈ ಪಂದ್ಯಾವಳಿಯು ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ನ ಹೊಸ ವಸತಿ ಅಕಾಡೆಮಿ ಕಾರ್ಯಕ್ರಮಕ್ಕೆ ಸ್ಕೌಟಿಂಗ್ ವೇದಿಕೆಯಾಗಿ ಕೂಡ ಕಾರ್ಯನಿರ್ವಹಿಸಿದ್ದು, ಅತ್ಯುತ್ತಮ ಆಟಗಾರರು ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗುವ ಅವಕಾಶವನ್ನು ಪಡೆದುಕೊಂಡಿದ್ದಾರೆ.ಕ್ರೀಡೆ ಮತ್ತು ಶಿಕ್ಷಣವನ್ನು ಸಂಪರ್ಕಿಸುವ ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ನ ಉದ್ದೇಶಕ್ಕೆ ಅನುಗುಣವಾಗಿ, ಕ್ಲಬ್‌ನ ಮುಂಬರುವ ವಸತಿ ಅಕಾಡೆಮಿ ಕಾರ್ಯಕ್ರಮವನ್ನು ಪರಿಚಯಿಸುವ ವಿಶೇಷ ಅಧಿವೇಶನವನ್ನು ನಡೆಸಲಾಯಿತು. ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ನ ಮುಖ್ಯ ಸ್ಕೌಟ್ ಮತ್ತು ವಿಶ್ಲೇಷಕರಾದ ಇಂದ್ರೇಶ್ ನಾಗರಾಜನ್ ಅವರು ವೀಡಿಯೊ ವಿಶ್ಲೇಷಣೆಯನ್ನು ಬಳಸಿಕೊಂಡು ಪ್ರಮುಖ ಫುಟ್ಬಾಲ್ ಪರಿಕಲ್ಪನೆಗಳ ಬಗ್ಗೆ ಕಾರ್ಯಾಗಾರವನ್ನು ನಡೆಸಿದರು.
SUFC ಇಂಟರ್-ಸಿಟಿ ಟೂರ್ನಮೆಂಟ್ ಪಾಲುದಾರರ ಸಹಾಯವನ್ನು ಪಡೆದುಕೊಂಡಿದೆ. ಫುಡ್ ಮತ್ತು ಬೆವರೇಜ್ ಪಾಲುದಾರರಾಗಿ ಗ್ರಿಲ್ ಎನ್ ಚಿಲ್ ಸೇರಿಕೊಂಡಿದ್ದು, ಟೂರ್ನಮೆಂಟ್ ಅವಧಿಯಲ್ಲಿ ಭಾಗವಹಿಸಿದ್ದವರಿಗೆ ಆಹಾರದ ವ್ಯವಸ್ಥೆಯನ್ನು ನೀಡಿದೆ. HOSMAT ಆಸ್ಪತ್ರೆಯು ಮೆಡಿಕಲ್ ಪಾಲುದಾರರ ಪ್ರಮುಖ ಪಾತ್ರ ವಹಿಸಿ ಸ್ಥಳದಲ್ಲಿಯೇ ತುರ್ತು ವೈದ್ಯಕೀಯ ಸೇವೆಯನ್ನು ನೀಡಿದೆ. ಶಿಕ್ಷಣ ಪಾಲುದಾರರಾಗಿ, Pros Edu ಕೂಡ ಬೆಂಬಲ ನೀಡಿದ್ದು, PUMA ಇಂಡಿಯಾ ಮರ್ಚಂಡೈಸ್ ಪಾಲುದಾರರಾಗಿ ತನ್ನ ಬೆಂಬಲವನ್ನು ಮುಂದುವರೆಸಿದೆ. ಫೋರ್ಜಾ ಫುಟ್‌ಬಾಲ್ ಲಾಜಿಸ್ಟಿಕ್ಸ್ ಪಾಲುದಾರರಾಗಿ ಹಾಗು ಬಾಲ್ಡ್‌ವಿನ್ ಬಾಲಕರ ಪ್ರೌಢಶಾಲೆಯು ಯುವ ಕ್ರೀಡಾಪಟುಗಳಿಗೆ ಬೋರ್ಡಿಂಗ್ ಮತ್ತು ವಸತಿಗೆ ಸಹಾಯ ಮಾಡಿದೆ.. ಹೆಲ್ತಿ ಪ್ಲಾಟರ್ಸ್ ಕೂಡ ಪುಣೆಯ ಸ್ನ್ಯಾಕ್ ಪಾಲುದಾರರಾಗಿ ಸಹಾಯ ಕಲ್ಪಿಸಿದೆ. ಫುಟ್‌ಬಾಲ್ ಸಂಸ್ಕೃತಿ ಮತ್ತು ಶ್ರೇಷ್ಠತೆಯ ಖ್ಯಾತಿಯೊಂದಿಗೆ, ಮುಂದಿನ ಪೀಳಿಗೆಯ ಆಟಗಾರರನ್ನು ಸೆಳೆಯುವಲ್ಲಿ SUFC ಮುನ್ನಡೆ ಸಾಧಿಸುತ್ತಿದೆ.