ಅಚ್ಚರಿಯಲ್ಲಿ ಮುಂಬೈ ರಣಜಿ ತೊರೆದ ಯಶಸ್ವಿ ಜೈಸ್ವಾಲ್
ಮುಂಬೈ: ಭಾರತ ಹಾಗೂ ಮುಂಬೈ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಮುಂಬೈ ರಣಜಿ ತಂಡವನ್ನು ತೊರೆಯುವ ತೀರ್ಮಾನ ಕೈಗೊಂಡಿದ್ದಾರೆ. Yashasvi Jaiswal to leave Mumbai for Goa for upcoming domestic season
ಅವರು ಮುಂಬೈ ರಣಜಿ ತಂಡವನ್ನು ತೊರೆಯಲು ಕಾರಣ ತಿಳಿದು ಬಂದಿಲ್ಲ. ಮುಂಬೈ ಆಟಗಾರರಾದ ಅರ್ಜುನ್ ತೆಂಡೂಲ್ಕರ್ ಹಾಗೂ ಸಿದ್ಧೇಶ್ ಲಾಡ್ ಅವರಿರುವ ಗೋವಾ ತಂಡವನ್ನು ಅವರು ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜೈಸ್ವಾಲ್ ಅವರು ನಿರಾಕ್ಷೇಪಣಾ ಪತ್ರ ನೀಡುವಂತೆ ಮುಂಬೈ ಕ್ರಿಕೆಟ್ ಸಂಸ್ಥೆಗೆ ಇಮೇಲ್ ಮೂಲಕ ಮನವಿ ಮಾಡಿರುವುದನ್ನು ಮುಂಬೈ ಕ್ರಿಕೆಟ್ ಸಂಸ್ಥೆ ಖಚಿತಪಡಿಸಿದೆ.
ಜೈಸ್ವಲ್ ಅವರು ಮುಂಬೈ ರಣಜಿ ತಂಡವನ್ನು ತೊರೆಯಲು ಕಾರಣ ತಿಳಿಸಿಲ್ಲ, ಬದಲಾಗಿ ವೈಯಕ್ತಿಕ ಕಾರಣ ಎಂದಷ್ಟೇ ಪತ್ರದಲ್ಲಿ ತಿಳಿಸಿದ್ದಾರೆ.
ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ಪ್ರವಾಸವನ್ನು ಮುಗಿಸಿದ ನಂತರ ಜೈಸ್ವಾಲ್ ಮುಂಬೈ ರಣಜಿ ತಂಡದಲ್ಲಿ ಆಡಿದ್ದರು. ಜಮ್ಮು ಮತ್ತು ಕಾಶ್ಮೀರ ವಿರುದ್ಧದ ಪಂದ್ಯದಲ್ಲಿ 4 ಮತ್ತು 26 ರನ್ ಗಳಿಸಿದ್ದರು. ಐಪಿಎಲ್‌ನಲ್ಲಿ ಜೈಸ್ವಾಲ್ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ.