Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಬ್ರಹ್ಮಾವರ HMC United Trophy ಕಾರು, ಬೈಕ್‌ ಬಹುಮಾನ ಯಾರಿಗೆ?

ಉಡುಪಿ: ಅರ್ಧದಲ್ಲೇ ನಿಂತು ಹೋದ ಬಹಳ ವಿವಾದಿತ ಎಚ್‌ಎಂಸಿ ಯುನೈಟೆಡ್‌ ಟೆನಿಸ್‌ ಬಾಲ್‌ ಕ್ರಿಕೆಟ್‌ ಟೂರ್ನಿಯ ಬಗ್ಗೆ ಉಡುಪಿ, ದಕ್ಷಿಣ ಕನ್ನಡದಲ್ಲಿ ಚರ್ಚೆಗಳು ಮುಂದುವರಿಯುತ್ತಿವೆ. ಸಂಘಟಕರು 40 ಲಕ್ಷ ರೂ. ಬಹುಮಾನವನ್ನು ನಾಲ್ಕು ತಂಡಗಳಿಗೆ ಹಂಚುವುದಕ್ಕಾಗಿ ಫೆಬ್ರವರಿ 2 ರಂದು ಪತ್ರಿಕಾಗೋಷ್ಠಿ ಕರೆಯುವುದಾಗಿ ಹೇಳಿದ್ದಾರೆ. ಆದರೆ ಸರಣಿಶ್ರೇಷ್ಠ ಪ್ರಶಸ್ತಿಗೆ ಘೋಷಿಸಿದ್ದ ಬಹುಮಾನ ಕಾರು ಹಾಗೂ ಫೈನಲ್‌ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿ ಬೈಕ್‌ ಹೇಗೆ ಮತ್ತು ಯಾರಿಗೆ ನೀಡುತ್ತಾರೆಂಬ ಬಗ್ಗೆ ಕ್ರಿಕೆಟ್‌ ಅಭಿಮಾನಿಗಳಲ್ಲಿ ಕುತೂಹಲ ಮನೆ ಮಾಡಿದೆ. Who should own the car and bike announced by the organizers of the controversial HMC United cricket tournament held in Brahmavara?

ಫೈನಲ್‌ ಪಂದ್ಯ ನಡೆಯದ ಕಾರಣ ಬೈಕ್‌ ಬಹುಮಾನ ಕೊಡಲು ಸಾಧ್ಯತೆ ಕಡಿಮೆ ಆದರೆ ಸರಣಿ ಶ್ರೇಷ್ಠ ಪ್ರಶಸ್ತಿಗೆ ಘೋಷಿಸಿರುವ ಕಾರನ್ನು ನೀಡಬೇಕಾಗುತ್ತದೆ ಎಂಬ ಮಾತು ಕೇಳಿ ಬಂದಿದೆ.  ಜನವರಿ 23, 24, 25 ರಂದು ಬ್ರಹ್ಮಾವರದ ಗಾಂಧೀ ಮೈದಾನದಲ್ಲಿ ನಡೆದ ಒಟ್ಟು 40 ಲಕ್ಷ ರೂ ಬಹುಮಾನ ಮೊತ್ತದ ಕ್ರಿಕೆಟ್‌ ಟೂರ್ನಿ ವಿವಾದದಿಂದಾಗಿ ಮೂರನೇ ಕ್ವಾರ್ಟರ್‌ಫೈನಲ್‌ ಪಂದ್ಯಕ್ಕೆ ರದ್ದಾಗಿತ್ತು. ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಮಾತುಕತೆ ನಡೆದು ಫೆಬ್ರವರಿ 2 ರಂದು ನಗದು ಬಹುಮಾನವನ್ನು ನಾಲ್ಕೂ ತಂಡಗಳಿಗೂ ಸಮಾನವಾಗಿ ಹಂಚಿ, ಟ್ರೋಫಿಯನ್ನು ಟಾಸ್‌ ಮೂಲಕ ಒಂದು ತಂಡಕ್ಕೆ ನೀಡುವು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಂಘಟಕರು ಹೇಳಿರುವುದು ಮಾಧ್ಯಗಳಲ್ಲಿ ಪ್ರಕಟವಾಗಿದೆ. ಈಗ ಅತಿ ಹೆಚ್ಚು ರನ್‌ ಗಳಿಸಿರುವ ಬ್ಯಾಟ್ಸ್ಮನ್‌, ಅತಿ ಹೆಚ್ಚು ವಿಕೆಟ್‌ ಗಳಿಸಿರುವ ಬೌಲರ್‌ ಅಥವಾ ವಿಕೆಟ್‌ ಹಾಗೂ ರನ್‌ ಗಳಿಸಿರುವ ಆಲ್ರೌಂಡರ್‌ ಕಾರಿನ ಬಹುಮಾನ ನಮಗೆ ಕೊಡಿ ಎಂದು ಕೇಳುವುದರಲ್ಲಿ ನ್ಯಾಯವಿದೆ.

ಆದರೆ ಸಂಘಟಕರು ಎಲ್ಲಿಯೂ ಕಾರು ಮತ್ತು ಬೈಕಿನ ಬಗ್ಗೆ ಮಾತನಾಡಲೇ ಇಲ್ಲ. ಸಣ್ಣ ಮಟ್ಟದ ಗಲ್ಲಿ ಕ್ರಿಕೆಟ್‌ನಲ್ಲೂ ಏನು  ಬಹುಮಾನ ನೀಡುತ್ತೇವೆ ಎಂದು ಘೋಷಿಸಿರುತ್ತಾರೋ ಅದು ಮೊದಲ ಪಂದ್ಯದಲ್ಲೇ ಅಂಗಣದ ಒಂದು ಬದಿಯಲ್ಲಿ ಪ್ರದರ್ಶನ ಮಾಡುತ್ತಾರೆ. ಅದೇ ರೀತಿ ಜಿಲ್ಲೆ, ರಾಜ್ಯ ಮಟ್ಟದ ಕ್ರಿಕೆಟ್‌ನಲ್ಲೂ ಕಾಣಸಿಗುತ್ತದೆ. ಬ್ರಹ್ಮಾವರದಲ್ಲಿ ನಡೆದದ್ದು ಇವೆಲ್ಲವನ್ನೂ ಮೀರಿದ್ದು, ಒಟ್ಟು 40 ಲಕ್ಷ ರೂ. ಬಹುಮಾನ ಮೊತ್ತದ ಈ ಟೂರ್ನಿಯಲ್ಲಿ ಕಾರು ಮತ್ತು ಬೈಕ್‌ ಎಲ್ಲಿಯೂ ಕಾಣದೇ ಇದ್ದಾಗಲೇ ಈ ಟೂರ್ನಿಯ ಉದ್ದೇಶ ಸ್ಪಷ್ಟವಾಗುತ್ತದೆ.

ಉಡುಪಿ ಪ್ರೆಸ್‌ ಕ್ಲಬ್‌ ಇರುವುದು ಪತ್ರಿಕಾಗೋಷ್ಠಿಗಳನ್ನು ನಡೆಸಲು. ಬದಲಾಗಿ ಟ್ರೋಫಿಯನ್ನು ಹಂಚುವ ಅಥವಾ ವಿವಾದಿತ ವಿಷಯಗಳಿಗೆ ವೇದಿಕೆ ಕಲ್ಪಿಸುವ ಸ್ಥಳವಲ್ಲ. ಈ ಹಿನ್ನೆಲೆಯಲ್ಲಿ ಫೆಬ್ರವರಿ 2 ರಂದು HMC United ಟೂರ್ನಿಯ ಸಂಘಟಕರ ಪತ್ರಿಕಾಗೋಷ್ಠಿಗೆ ಉಡುಪಿ ಪ್ರೆಸ್‌ ಕ್ಲಬ್‌ ವೇದಿಕೆಯಾಗಿರುವುದಿಲ್ಲ ಎಂದು ತಿಳಿದು ಬಂದಿದೆ. ಈಗಾಗಲೇ ಬ್ರಹ್ಮಾವರ ಪೊಲೀಸ್‌ ಠಾಣೆಯ ಮೆಟ್ಟಿಲೇರಿರುವ ಟೂರ್ನಿಯು ಅಂತಿಮ ಫಲಿತಾಂಶ ಯಾವುದಾದರೂ ಖಾಸಗಿ ಹೊಟೇಲ್‌ನಲ್ಲಿ ನಡೆಯುವ ಸಾಧ್ಯತೆ ಇದೆ.


administrator