Thursday, December 12, 2024

ತೆಂಗಿನ ಕಾಯಿ ಸಿಪ್ಪೆ ಸುಲಿದವರಿಗೂ ರಾಜ್ಯೋತ್ಸವ ಕ್ರೀಡಾ ಪ್ರಶಸ್ತಿ!

ಬೆಂಗಳೂರು: ಕ್ರೀಡೆಯಲ್ಲಿ ಸಾಧನೆ ಮಾಡಿದವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಕೊಡುವುದು ಸ್ವಾಗತಾರ್ಹ. ಆದರೆ ತೆಂಗಿನ ಕಾಯಿಯ ಸಿಪ್ಪೆ ತೆಗೆದು ದಾಖಲೆ ಮಾಡಿದವರಿಗೆ ಕ್ರೀಡೆಯ ಹೆಸರಿನಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಕ್ರೀಡಾ ವಲಯದಲ್ಲಿ ಚರ್ಷೆಗೆ ಗ್ರಾಸವಾಗಿದೆ. ತೆಂಗಿನ ಕಾಯಿ ಸಿಪ್ಪೆ ತೆಗೆದು ದಾಖಲೆ ಮಾಡಿದವರಿಗೆ ಕೊಡಲಿ ಆದರೆ ಕ್ರೀಡಾ ಕೋಟಾದಡಿ ಅದು ಯೋಗ್ಯವಲ್ಲ. Who is Gautham Veram What is his achievement in International Sports?

ರಾಜ್ಯ ಸರಕಾರ ವಿಶ್ವ ಬಿಲಿಯರ್ಡ್ಸ್‌ ಚಾಂಪಿಯನ್‌ ಉಮಾದೇವಿ ಹಾಗೂ ಭಾರತ ಹಾಕಿ ತಂಡದ ಮಾಜಿ ನಾಯಕ ಮತ್ತು ಕೋಚ್‌ ಜೂಡ್‌ ಫೆಲಿಕ್ಸ್‌ ಅವರಿಗೆ ಕ್ರೀಡಾಕ್ಷೇತ್ರದ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ಪ್ರಕಟಿಸಿರುವುದು ಉತ್ತಮ ತೀರ್ಮಾನ. ಆದರೆ ಈ ಇಬ್ಬರ ನಡುವೆ ತೆಂಗಿನ ಕಾಯಿ ಸಿಪ್ಪೆ ತೆಗೆದು ವಿಶ್ವ ದಾಖಲೆ ಬರೆದವರಿಗೆ ಕ್ರೀಡಾ ವಿಭಾಗದಲ್ಲಿ ಪ್ರಶಸ್ತಿ ನೀಡಿರುವುದು ಕ್ರೀಡಾ ಸಾಧಕರಿಗೆ ಮುಜುಗರವನ್ನುಂಟು ಮಾಡಿದೆ.  

ಗೌತಮ್‌ ವರ್ಮಾ ಎಂಬುವರು ಈ ಸಾಧಕರು. ಅವರ ಸಾಧನೆಯ ಪಟ್ಟಿಯನ್ನು ನೋಡಿದಾಗ 42 ಸೆಕೆಂಡುಗಳಲ್ಲಿ 3 ತೆಂಗಿನ ಕಾಯಿಯನ್ನು ಸುಲಿದು ಗಿನ್ನಿಸ್‌ ದಾಖಲೆ ಮಾಡಿರುವುದು. ಕಿವಿಯಿಂದ ಮಾರುತಿ ಕಾರನ್ನು ಎಳೆದು ಲಿಮ್ಖಾ ದಾಖಲೆ ಮಾಡಿರುವುದು. 38 ನಿಮಿಷಗಳಲ್ಲಿ 51 ತೆಂಗಿನ ಕಾಯಿ ಸುಲಿದು ವಿಶ್ವದಾಖಲೆ ನಿರ್ಮಿಸಿರುವುದು. ಈ ಹಿಂದೆ ಈ ದಾಖಲೆ ಯಾರ ಹೆಸರಿನಲ್ಲಿತ್ತು ಎಂಬುದು ಮುಖ್ಯ. 300 ಸ್ಟ್ರಾಗಳನ್ನು ಒಂದೇ ಬಾರಿ ಬಾಯಿಯಲ್ಲಿಟ್ಟು, ಐದು ನಿಮಿಷಗಳ ಇರಿಸಿಕೊಂಡು ವಿಶ್ವ ದಾಖಲೆ ಮಾಡಿರುವುದು. ಸೈಕಲನ್ನು ಹಲ್ಲಿನಲ್ಲಿ ಕಚ್ಚಿ 40 ಅಡಿ ತೆಂಗಿನ ಮರವನ್ನು ಏರುವುದು. 80 ಕೆಜಿ ಅಕ್ಕಿ ಮೂಟೆಯನ್ನು ಹಲ್ಲಿನಲ್ಲಿ ಕಚ್ಚಿ ಎತ್ತುವುದು. ಇದು ಇವರ ದಾಖಲೆಗಳು.

60 ವರ್ಷವಾಗಿಲ್ಲ:! ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸಲು 60 ವರ್ಷ ವಯಸ್ಸಾಗಿರಬೇಕೆಂಬುದು ಸರಕಾರದ ನಿಯಮ. ಆದರೆ ಗೌತಮ್‌ ವರ್ಮಾ ಎಂಬುವರಿಗೆ ಇನ್ನೂ 49 ವರ್ಷ. ಕ್ರೀಡಾ ಸಾಧಕರಿಗೆ 60 ವರ್ಷದ ನಿಯಮ ಅನ್ವಯಿಸುವುದಿಲ್ಲ. ಅದಕ್ಕಾಗಿಯೇ ಗೌತಮ್‌ ಅವರನ್ನು ಕ್ರೀಡಾ ಪಟ್ಟಿಯಲ್ಲಿ ಸೇರಿಸಿ ಕ್ರೀಡೆ ನಮೂದಿಸಲೇ ಇಲ್ಲ.

ಇವರ ಸಾಧನೆಯ ವೈಯಕ್ತಿಕ ವಿವರವನ್ನು ಕಂಡಾಗ ಮುಖ್ಯಮಂತ್ರಿ ಮಂತ್ರಿ ಸಿದ್ಧರಾಮಯ್ಯ ಅವರೊಂದಿಗೆ ನಿಂತ ಫೋಟೋ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮತ್ತು ಡಿಕೆ ಸುರೇಶ್‌ ಅವರೊಂದಿಗೆ ನಿಂತ ಫೋಟೋ. ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ, ಪ್ರಿಯಾಂಕ ಖರ್ಗೆ ಅವರೊಂದಿಗೆ ಇರುವ ಫೋಟೋಗಳು. ಸಾನಿಯಾ ಮಿರ್ಜಾ ಜೊತೆಗಿನ ಫೋಟೋ ಇವುಗಳೇ ತುಂಬಿಕೊಂಡಿವೆ. ರಾಜ್ಯದಲ್ಲಿ ಕ್ರೀಡಾ ಸಾಧನೆ ಮಾಡಿದ ಅದೆಷ್ಟೋ ಹಿರಿಯರು ಈ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದರಿಬಹುದು. ಆದರೆ ಒಲಿಂಪಿಕ್ಸ್‌ ಕ್ರೀಡೆಯೂ ಅಲ್ಲದ, ಕ್ರೀಡಾಕೂಟವೂ ನಡೆಯದ ಬಹಳ ವರ್ಷಗಳ ಹಿಂದೆ ಹಲ್ಲಿನಲ್ಲಿ ತೆಂಗಿನ ಕಾಯಿ ಸಿಪ್ಪೆ ತೆಗೆದು ಸಾಧನೆ ಮಾಡಿರುವುದನ್ನೇ ಕ್ರೀಡಾ ಸಾಧನೆ ಎಂದು ರಾಜ್ಯದ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡುತ್ತಿರುವುದು ಕ್ರೀಡಾಸಾಧಕರಿಗೆ ಮಾಡಿದ ಅವಮಾನ.

Related Articles