ಹರಾಜಿನಲ್ಲಿ ಯಾರಿಗೂ ಬೇಡವಾದ, ಈಗ ಪರ್ಪಲ್ ಕ್ಯಾಪ್ ಧರಿಸಿದ
ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ Indian Premier League (IPL2025) ಹರಾಜಿನಲ್ಲಿ ಯಾರಿಗೂ ಬೇಡವಾಗಿದ್ದ ಶಾರ್ದೂಲ್ ಠಾಕೂರ್ ಗಾಯಗೊಂಡವರ ಬದಲಿಗೆ ಸ್ಥಾನ ಪಡೆದು, ಆಡಿದ ಎರಡು ಪಂದ್ಯಗಳಲ್ಲೇ ಆರೆಂಜ್ ಕ್ಯಾಪ್ ಸಾಧನೆ ಮಾಡಿರುವುದು ಅಚ್ಚರಿಯಲ್ಲ, ಬದಲಾಗಿ ಶ್ರಮಕ್ಕೆ ಸಿಕ್ಕ ಫಲ. Went unsold at the IPL 2025 auction came in as a replacement and now Shardul Thakur is the Purple Cap holder.
ಲಖನೌ ಸೂಪರ್ ಜಯಂಟ್ಸ್ನ ಎಡಗೈ ವೇಗಿ ಮೊಹ್ಸಿನ್ ಖಾನ್ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಅವರ ಬದಲಿಗೆ ತಂಡದಲ್ಲಿ ಸ್ಥಾನ ಪಡೆದ ಠಾಕೂರ್ ಮೊದಲ ಪಂದ್ಯದಲ್ಲೇ ಆಡುವ ಹನ್ನೊಂದು ಆಟಗಾರರಲ್ಲಿ ಒಬ್ಬರಾಗುತ್ತಾರೆ. ಇದುವರೆಗೂ ಐದು ತಂಡಗಳಲ್ಲಿ 95 ಪಂದ್ಯಗಳನ್ನಾಡಿದ ಅನುಭವ ಹೊಂದಿರುವ ಠಾಕೂರ್ ಮೊದಲ ಪಂದ್ಯದಲ್ಲಿ ಎರಡು ವಿಕೆಟ್ ಗಳಿಸಿದರೆ ಎರಡನೇ ಪಂದ್ಯದಲ್ಲಿ ನಾಲ್ಕು ವಿಕೆಟ್ ಗಳಿಸಿ ಪರ್ಪಲ್ ಕ್ಯಾಪ್ ಧರಿಸಿದರು. ಮೊದಲ ಪಂದ್ಯದಲ್ಲಿ ಶತಕ ಗಳಿಸಿದ್ದ ಇಶಾನ್ ಕಿಶನ್ ಅವರನ್ನು ಶೂನ್ಯಕ್ಕೆ ಪೆವಿಲಿಯನ್ ಹಾದಿ ತೋರಿಸಿದ್ದು ಠಾಕೂರ್ ಅವರ ಅನುಭವಕ್ಕೆ ನಿದರ್ಶನ. ಇದೇ ಸಂದರ್ಭದಲ್ಲಿ ಶಾರ್ದೂಲ್ ಠಾಕೂರ್ ಐಪಿಎಲ್ನಲ್ಲಿ 100ನೇ ವಿಕೆಟ್ ಸಾಧನೆ ಮಾಡಿದರು.