Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

13 ವರ್ಷಗಳ ಬಳಿಕ ರಣಜಿ ಆಡಲಿರುವ ವಿರಾಟ್‌ ಕೊಹ್ಲಿ

ಹೊಸದಿಲ್ಲಿ: ಆಸ್ಟ್ರೇಲಿಯಾದಲ್ಲಿ ಭಾರತ ಕ್ರಿಕೆಟ್‌ ತಂಡ ಕಳಪೆ ಪ್ರದರ್ಶನ ತೋರಿರುವ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾರತ ತಂಡದ ಪ್ರತಿಯೊಬ್ಬ ಆಟಗಾರರೂ ಉಳಿದಿರುವ ರಣಜಿ ಪಂದ್ಯಗಳಲ್ಲಿ ಪಾಲ್ಗೊಳ್ಳುವುದು ಕಡ್ಡಾಯ ಎಂದು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ವಿರಾಟ್‌ ಕೊಹ್ಲಿ ಜನವರಿ 30 ರಂದು ದೆಹಲಿ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಆಡುವುದಾಗಿ ಬಿಸಿಸಿಐಗೆ ತಿಳಿಸಿದ್ದಾರೆ. ಇದರೊಂದಿಗೆ ವಿರಾಟ್‌ 13 ವರ್ಷಗಳ ಬಳಿಕ ರಣಜಿ ಪಂದ್ಯಕ್ಕೆ ಮರಳಲಿದ್ದಾರೆ. Virat Kohli will playing next Ranji match for Delhi after 13 years.

ಈ ಹಿಂದೆ ಮಾಧ್ಯಮಗಳು ಮಾಡಿರುವ ವರದಿಗಳ ಪ್ರಕಾರ ವಿರಾಟ್‌ ಇಂಗ್ಲೆಂಡ್‌ನಲ್ಲಿ ಕೌಂಟಿ ಪಂದ್ಯಗಳನ್ನು ಆಡಲಿದ್ದಾರೆ ಎಂದಿತ್ತು. ಗಾಯದ ಸಮಸ್ಯೆ ಹೊರತುಪಡಿಸಿ ಯಾವುದೇ ಆಟಗಾರರು ರಣಜಿಯಿಂದ ಹೊರಗುಳಿಯುವಂತಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿತ್ತು. ಕೆಎಲ್‌ ರಾಹುಲ್‌ ಹಾಗೂ ಕೊಹ್ಲಿ ಗಾಯದ ಸಮಸ್ಯೆಯ ಕಾರಣ ಮೊದಲ ಪಂದ್ಯದಲ್ಲಿ ಆಡುತ್ತಿಲ್ಲ. ಆದರೆ ಸೋಮವಾರ ಲಭ್ಯವಾದ ಮಾಹಿತಿಯ ಪ್ರಕಾರ ಕೊಹ್ಲಿ ಜನವರಿ 30ರಂದು ದೆಹಲಿ ಪರ ಆಡಲಿದ್ದಾರೆ. ಕೆ.ಎಲ್‌.ರಾಹುಲ್‌ ಭುಜದ ನೋವಿನ ವಿಷಯವನ್ನು ಬಿಸಿಸಿಐ ವೈದ್ಯಕೀಯ ತಂಡಕ್ಕೆ ತಿಳಿಸಿದ್ದು, ಅವರು ಪಂಜಾಬ್‌ ಮತ್ತು ಕರ್ನಾಟಕ ನಡುವಿನ ಪಂದ್ಯಕ್ಕೆ ಅಲಭ್ಯರಿದ್ದಾರೆ.


administrator