Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ವಿಜಯ ಹಜಾರೆ ಟ್ರೋಫಿ: ರನ್‌ ಚೇಸಿಂಗ್‌ನಲ್ಲಿ  ಕರ್ನಾಟಕ ದಾಖಲೆ

ಅಹಮದಾಬಾದ್‌: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ವಿಜಯ ಹಜಾರೆ ಟ್ರೋಫಿ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಕರ್ನಾಟಕ ತಂಡ ಜಾರ್ಖಂಡ್‌‌ ನೀಡಿದ 413 ರನ್‌ಗಳ ಗುರಿಯನ್ನು ಇನ್ನೂ 15 ಎಸೆತಗಳು ಬಾಕಿ ಇರುವಾಗಲೇ ತಲುಪಿ ದೇಶೀಯ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದಿದೆ. Vijay Hazare Trophy: Karnataka Script History With Record-Breaking 413-Run Chase in Ahmedabad

ದೇವದತ್ತ ಪಡಿಕ್ಕಲ್‌ (147) ಸಿಡಿಸಿದ ಶತಕದ ನೆರವಿನಿಂದ ಕರ್ನಾಟಕ 413 ರನ್‌ಗಳ ದಾಖಲೆಯ ಗುರಿಯನ್ನು 47.3 ಓವರ್‌ಗಳಲ್ಲಿ ಕೇವಲ 5 ವಿಕೆಟ್‌ ಕಳೆದುಕೊಂಡು ಚಾಂಪಿಯನ್‌ ತಂಡ ಎಂಬುವುದನ್ನು ಮತ್ತೊಮ್ಮೆ ಸಾಬೀತುಪಡಿಸಿತು. ಜಾರ್ಖಂಡ್‌ ಪರ ಇಶಾನ್‌ ಕಿಶನ್‌ 39 ಎಸೆತಗಳಲ್ಲಿ ಸಿಡಿಸಿದ ಮಿಂಚಿನ 125 ರನ್‌ ಪ್ರಯೋಜಕ್ಕೆ ಬರಲಿಲ್ಲ.

ಕರ್ನಾಟಕದ ಪರ ನಾಯಕ ಮಯಾಂಕ್‌‌ ಅಗರ್ವಾಲ್‌ (54) ಆರಂಭಿಕ ಜೊತೆಯಾಟದಲ್ಲಿ 114 ರನ್‌ ಗಳಿಸಿ ಉತ್ತಮ ಆರಂಭ ಕಲ್ಪಿಸಿದ್ದರು. ಕರುಣ್‌ ನಾಯರ್‌ (29), ರವಿಚಂದ್ರನ್‌ ಸ್ಮರಣ್‌ (27), ಕೃಷ್ಣನ್‌ ಶ್ರೀಜಿತ್‌ (38) ಬೇಗನೆ ವಿಕೆಟ್‌ ಕಳೆದುಕೊಂಡರು. ಆದರೆ ದೇವದತ್ತ ಪಡಿಕ್ಕಲ್‌‌ ಅನುಭವದ ಆಟವಾಡಿ 118 ಎಸೆತಗಳನ್ನೆದುರಿಸಿ 10 ಬೌಂಡರಿ ಹಾಗೂ 7 ಸಿಕ್ಸರ್‌ ನೆರವಿನಿಂದ ಜಯದ ಹಾದಿಯನ್ನು ಸುಗಮಗೊಳಸಿದರು. ನಂತರ ಅಭಿನವ್‌ ಮನೋಹರ್‌ (56*) ಹಾಗೂ ದ್ರುವ ಪ್ರಭಾಕರ್‌ (40*) ಮಿಂಚಿನ ಆಟ ಪ್ರದರ್ಶಿಸಿ ದಾಖಲೆಗೆ ಸಾಕ್ಷಿಯಾದರು.


administrator