Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ವಿಜಯ ಹಜಾರೆ: ಸತತ ಆರು ಜಯದೊಂದಿಗೆ ನಾಕೌಟ್‌ಗೆ ಕರ್ನಾಟಕ

ಅಹಮದಾಬಾದ್‌: ನಾಯಕ ಮಯಾಂಕ್‌ ಅಗರ್ವಾಲ್‌ (100) ಅವರ ಶತಕದ ಆಟ ಹಾಗೂ ದೇವದತ್ತ ಪಡಿಕ್ಕಲ್‌ (91) ಅವರ ದಾಖಲೆಯ ಮೈಲಿಗಲ್ಲು ಇದರ ನೆರವಿನಿಂದ ಕರ್ನಾಟಕ ತಂಡ ವಿಜಯ ಹಜಾರೆ ಟ್ರೋಫಿ ಏಕದಿನ ಪಂದ್ಯದಲ್ಲಿ ರಾಜಸ್ಥಾನದ ವಿರುದ್ಧ 150 ರನ್‌ಗಳ ಬೃಹತ್‌ ಜಯ ಗಳಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದೆ. ಈ ಜಯದೊಂದಿಗೆ ಕರ್ನಾಟಕ ತಂಡ ನಾಕೌಟ್‌ ಹಂತ ತಲುಪಿದೆ. Vijay Hazare Trophy: Karnataka crushes Rajasthan to book a spot in the knockouts.

ಆಡಿದ ಆರು ಪಂದ್ಯಗಳಲ್ಲಿ ಆರು ಜಯ ಗಳಿಸಿರುವ ಕರ್ನಾಟಕ 24 ಅಂಗಳನ್ನು ತನ್ನದಾಗಿಸಿಕೊಂಡಿದೆ.  ನಾಯಕ ಮಯಾಂಕ್‌ ಅಗರ್ವಾಲ್‌ 107 ಎಸೆತಗಳನ್ನೆದುರಿಸಿ 9 ಬೌಂಡರಿ ಹಾಗೂ 3 ಸಿಕ್ಸರ್‌ ನೆವಿನಿಂದ 100 ರನ್‌ ಗಳಿಸಿ ಟೂರ್ನಿಯಲ್ಲಿ ಎರಡನೇ ಶತಕ ದಾಖಲಿಸಿದರು.

ಆಡಿದ ಐದು ಪಂದ್ಯಗಳಲ್ಲಿ ನಾಲ್ಕು ಶತಕ ಗಳಿಸಿರುವ ದೇವದತ್ತ ಪಡಿಕ್ಕಲ್‌ ಆರನೇ ಪಂದ್ಯದಲ್ಲಿ 91 ರನ್‌ಗೆ ಔಟ್‌ ಆಗಿ ಶತಕದಿಂದ ವಂಚಿತರಾದರು. ಆದರೆ  ಪಡಿಕ್ಕಲ್‌ ವಿಜಯ ಹಜಾರೆ ಟ್ರೋಫಿಯಲ್ಲಿ ಮತ್ತೊಂದು ವಿಶೇಷ ದಾಖಲೆ ಬರೆದರು. ಮೂರು ವಿಭಿನ್ನ ಋತುಗಳಲ್ಲಿ 600 ರನ್‌ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಪಡಿಕ್ಕಲ್‌ 82 ಎಸೆತಗಳನ್ನೆದುರಿಸಿ 12 ಬೌಂಡರಿ ಹಾಗೂ 2 ಸಿಕ್ಸರ್‌ ಮೂಲಕ ಅದ್ಭುತ ಇನ್ನಿಂಗ್ಸ್‌ ಪೂರೈಸಿದರು. ಕೆಎಲ್‌ ರಾಹುಲ್‌ 25 ಹಾಗೂ ಅಭಿನವ್‌ ಮನೋಹರ್‌ 35 ರನ್‌ ಗಳಿಸುವ ಮೂಲಕ ಕರ್ನಾಟಕ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 342 ರನ್‌ಗಳ ಕಠಿಣ ಸವಾಲು ನೀಡಿತು.

ಪ್ರಸೀಧ್‌ ಕೃಷ್ಣ (5/36), ಶ್ರೀಶ ಆಚಾರ್‌ 2/35 ಹಾಗೂ ಶ್ರೇಯಸ್‌ ಗೋಪಾಲ್‌ 2/45 ಅದ್ಭುತ ಬೌಲಿಂಗ್‌ ದಾಳಿಗೆ ಸಿಲುಕಿದ ರಾಜಸ್ಥಾನ 38 ಓವರ್‌ಗಳಲ್ಲಿ 174 ರನ್‌ಗೆ ತನ್ನೆಲ್ಲ ವಿಕೆಟ್‌ ಕಳೆದುಕೊಂಡು ಸೋಲೊಪ್ಪಿಕೊಂಡಿತು.


administrator